ಅಫ್ಘಾನಿಸ್ತಾನ: ಬಾಲಕಿಯರ ಶಾಲೆಗಳನ್ನು ತೆರೆದ ಕೆಲವೇ ಗಂಟೆಗಳ ನಂತರ ಮುಚ್ಚಿಸಿದ ತಾಲಿಬಾನ್

ತಾಲಿಬಾನ್ ತಾನು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 2021 ರಲ್ಲಿ, 6 ನೇ ತರಗತಿಯವರೆಗಿನ ಹುಡುಗಿಯರಿಗೆ ಕೆಲವು ಶಾಲೆಗಳನ್ನು ಪುನಃ ತೆರೆಯಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲು ಮಹಿಳೆಯರಿಗೆ ಅವಕಾಶ ನೀಡಲಾಯಿತು.

ಅಫ್ಘಾನಿಸ್ತಾನ: ಬಾಲಕಿಯರ ಶಾಲೆಗಳನ್ನು ತೆರೆದ ಕೆಲವೇ ಗಂಟೆಗಳ ನಂತರ ಮುಚ್ಚಿಸಿದ ತಾಲಿಬಾನ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 23, 2022 | 3:48 PM

ಕಾಬೂಲ್:  ಅಫ್ಘಾನಿಸ್ತಾನದ (Afghanistan) ತಾಲಿಬಾನ್  ಆಡಳಿತವು ಬುಧವಾರ ಬಾಲಕಿಯರ ಮಾಧ್ಯಮಿಕ ಶಾಲೆಗಳನ್ನು ಮುಚ್ಚಲು ಆದೇಶಿಸಿತು. ಇಸ್ಲಾಮಿಕ್ ಚಳುವಳಿಯು ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಳೆದ ಆಗಸ್ಟ್‌ ತಿಂಗಳ ಬಳಿಕ ಮೊದಲ ಬಾರಿಗೆ ಶಾಲೆಗಳು ಪುನಃ ತೆರೆದಿದ್ದು, ಕೆಲವೇ ಗಂಟೆಗಳ ನಂತರ ಮುಚ್ಚಲಾಗಿದೆ. ಹೌದು, ಇದು ನಿಜ ಎಂದು ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿ ಆದೇಶದ ನಂತರ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾದ ಬೆಳವಣಿಗೆಯನ್ನು ದೃಢಪಡಿಸಿದರು. ಹಠಾತ್ ಕ್ರಮವು ಯುದ್ಧದಿಂದ  ಹಾನಿಗೊಳಗಾದ ರಾಷ್ಟ್ರದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೊಸ ಕಾಳಜಿಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ದೇಶದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್(Taliban) ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ‘ರಕ್ಷಿಸುವುದಾಗಿ’ ಭರವಸೆ ನೀಡಿದ್ದರು. ತಾಲಿಬಾನ್ ತಾನು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 2021 ರಲ್ಲಿ, 6 ನೇ ತರಗತಿಯವರೆಗಿನ ಹುಡುಗಿಯರಿಗೆ ಕೆಲವು ಶಾಲೆಗಳನ್ನು ಪುನಃ ತೆರೆಯಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲು ಮಹಿಳೆಯರಿಗೆ ಅವಕಾಶ ನೀಡಲಾಯಿತು. ಆದಾಗ್ಯೂ, ವಿದ್ಯಾರ್ಥಿನಿಯರಿಗಾಗಿ ಪ್ರೌಢಶಾಲೆಗಳು ಮುಚ್ಚಲ್ಪಟ್ಟವು ಮತ್ತು ಇಸ್ಲಾಮಿಕ್ ಎಮಿರೇಟ್ ಎಲ್ಲಾ ಹುಡುಗಿಯರಿಗೆ ತರಗತಿಗಳನ್ನು ‘ಬೇಗನೆ’ ಪುನರಾರಂಭಿಸುವುದಾಗಿ ಘೋಷಿಸಿತು. ಅದರಂತೆ, ಬಾಲಕಿಯರಿಗಾಗಿ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ ತನ್ನ ಆದೇಶದಲ್ಲಿ, ರಾಜಧಾನಿ ಕಾಬೂಲ್ ಸೇರಿದಂತೆ ಹಲವಾರು ಪ್ರಾಂತ್ಯಗಳಲ್ಲಿ ಮಾರ್ಚ್ 23 ರಿಂದ ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಲಾಗುವುದು ಎಂದು ತಾಲಿಬಾನ್ ಹೇಳಿದೆ.

ಆದಾಗ್ಯೂ, ಕಂದಹಾರ್‌ನಲ್ಲಿನ ಏಪ್ರಿಲ್‌ವರೆಗೆ  ಶಾಲೆ ತೆರೆಯುವುದಿಲ್ಲ ಎಂದು ಆದೇಶದಲ್ಲಿ ಹೇಳಿದೆ. “ನಾವು ಶಾಲೆಗಳನ್ನು ಪುನಃ ತೆರೆಯುತ್ತಿರುವುದು ಅಂತರಾಷ್ಟ್ರೀಯ ಸಮುದಾಯವನ್ನು ಸಂತೋಷಪಡಿಸಲು ಅಥವಾ ಪ್ರಪಂಚದಿಂದ ಮನ್ನಣೆ ಪಡೆಯಲು ಅಲ್ಲ” ಎಂದು ಆ ಸಮಯದಲ್ಲಿ ವಕ್ತಾರರು ಹೇಳಿದರು.

ಈ ಹಿಂದೆ, ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನವನ್ನು ಆಳಿತು. ನಂತರ 9/11 ದಾಳಿಯ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ ಯುಎಸ್ ನೇತೃತ್ವದ ಪಡೆಗಳಿಂದ ಅವರನ್ನು ಓಡಿಸಲಾಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಪಡೆಗಳು ಸಂಪೂರ್ಣವಾಗಿ ದೇಶವನ್ನು ತೊರೆದವು.

ಇದನ್ನೂ ಓದಿ: Fact Check ಚೀನಾ ವಿಮಾನ ಅಪಘಾತದ ವಿಡಿಯೊ ಎಂದು ವೈರಲ್ ಆಗಿರುವ ವಿಡಿಯೊ ಚೀನಾದ್ದಲ್ಲ; ಇದರ ಹಿಂದಿನ ಸತ್ಯಾಸತ್ಯತೆ ಏನು?

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ