Fact Check ಚೀನಾ ವಿಮಾನ ಅಪಘಾತದ ವಿಡಿಯೊ ಎಂದು ವೈರಲ್ ಆಗಿರುವ ವಿಡಿಯೊ ಚೀನಾದ್ದಲ್ಲ; ಇದರ ಹಿಂದಿನ ಸತ್ಯಾಸತ್ಯತೆ ಏನು?

ಆದಾಗ್ಯೂ, ಈ ವಿಡಿಯೊ ಚೀನಾದಲ್ಲಿ ಇತ್ತೀಚಿನ ವಿಮಾನ ಅಪಘಾತಕ್ಕೆ ಸಂಬಂಧಿಸಿಲ್ಲ ಮತ್ತು ಅದರೊಂದಿಗೆ ಹಂಚಿಕೊಂಡ ಮಾಹಿತಿಯೂ ತಪ್ಪು. ಈ ವಿಡಿಯೊ ನಿಜವಾಗಿಯೂ ಮಾರ್ಚ್ 10, 2019 ರಂದು ಅಪಘಾತಕ್ಕೀಡಾದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದ್ದಾಗಿದೆ

Fact Check ಚೀನಾ ವಿಮಾನ ಅಪಘಾತದ ವಿಡಿಯೊ ಎಂದು ವೈರಲ್ ಆಗಿರುವ ವಿಡಿಯೊ ಚೀನಾದ್ದಲ್ಲ; ಇದರ ಹಿಂದಿನ ಸತ್ಯಾಸತ್ಯತೆ ಏನು?
ಚೀನಾ ವಿಮಾನ ಪತನದ ವೈರಲ್ ವಿಡಿಯೊ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 23, 2022 | 2:06 PM

ಸೋಮವಾರ 132 ಜನರಿದ್ದ ವಿಮಾನವೊಂದು (China Plane Crash) ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಈ ಸುದ್ದಿಯು ಆಘಾತವನ್ನುಂಟು ಮಾಡಿದ್ದು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮವು ಘಟನೆಯ ಕುರಿತು ಪೋಸ್ಟ್‌ಗಳಿಂದ ತುಂಬಿತ್ತು. ಇದರ ಮಧ್ಯೆ, “ವಿಮಾನದಲ್ಲಿ ರೆಕಾರ್ಡ್ ಮಾಡಲಾದ ಕೊನೆಯ ಕ್ಷಣ” ವನ್ನು ತೋರಿಸುವ ವಿಡಿಯೊ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ . ಆದಾಗ್ಯೂ, ಈ ವಿಡಿಯೊ ಚೀನಾದ ವಿಮಾನ ಪತನದ್ದು ಅಲ್ಲ ಎಂಬುದು ಹಿಂದೂಸ್ತಾನ್ ಟೈಮ್ಸ್ ಫ್ಯಾಕ್ಟ್ ಚೆಕ್ ನಡೆಸಿ ವರದಿ ಮಾಡಿದೆ.  ಬೋಯಿಂಗ್ 737 ದಕ್ಷಿಣ ಚೀನಾದಲ್ಲಿ ಅಪಘಾತಕ್ಕೀಡಾಗಿದೆ. ಇದು ವಿಮಾನದಲ್ಲಿ ದಾಖಲಾದ ಕೊನೆಯ ಕ್ಷಣಗಳಲ್ಲಿ ಒಂದಾಗಿದೆ. ಬಹುಶಃ ಒಂದೇ ಕ್ಷಣ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. #planecrash #Boeing #China ಎಂಬ ಟ್ವೀಟ್ ಒಕ್ಕಣೆಯೊಂದಿಗೆ ವಿಡಿಯೊ ಶೇರ್ ಆಗಿದ್ದು ಇದು ವೈರಲ್ ಆಗಿದೆ. ಮಾರ್ಚ್ 21 ರಂದು ಪೋಸ್ಟ್ ಮಾಡಲಾದ ಟ್ವೀಟ್ ಇದುವರೆಗೆ 200 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಫ್ಯಾಕ್ಟ್ ಚೆಕ್ ಆದಾಗ್ಯೂ, ಈ ವಿಡಿಯೊ ಚೀನಾದಲ್ಲಿ ಇತ್ತೀಚಿನ ವಿಮಾನ ಅಪಘಾತಕ್ಕೆ ಸಂಬಂಧಿಸಿಲ್ಲ ಮತ್ತು ಅದರೊಂದಿಗೆ ಹಂಚಿಕೊಂಡ ಮಾಹಿತಿಯೂ ತಪ್ಪು. ಈ ವಿಡಿಯೊ ನಿಜವಾಗಿಯೂ ಮಾರ್ಚ್ 10, 2019 ರಂದು ಅಪಘಾತಕ್ಕೀಡಾದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದ್ದಾಗಿದೆ. ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸಿಮ್ಯುಲೇಶನ್. ವಿಮಾನದೊಳಗೆ ರೆಕಾರ್ಡ್ ಮಾಡಲಾದ ನಿಜವಾದ ವಿಡಿಯೊ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಿಡಿಯೊದಲ್ಲಿ ವಿಮಾನದ ಲೋಗೋವನ್ನು ಸಹ ನೋಡಬಹುದು. ವಿಡಿಯೊದಲ್ಲಿರುವ ವಿಮಾನದ ಲೋಗೋ ಇಥಿಯೋಪಿಯನ್ ಏರ್‌ಲೈನ್ಸ್‌ನದ್ದಾಗಿದೆ.

ಗೂಗಲ್‌ನಲ್ಲಿ ಹುಡುಕಾಡಿದರೆ ಲೋಗೋ ಇಥಿಯೋಪಿಯನ್ ಏರ್‌ಲೈನ್ಸ್‌ನದ್ದು ಎಂದು ತಿಳಿಯುತ್ತದೆ, ಸೋಮವಾರ ಅಪಘಾತಕ್ಕೀಡಾದ ವಿಮಾನವು ಚೀನಾ ಈಸ್ಟರ್ನ್ ಏರ್‌ಲೈನ್ಸ್ ಗೆ ಸೇರಿದ್ದು. ಯೂಟ್ಯೂಬ್‌ನಲ್ಲಿ ” Ethiopian Airlines crash simulation ” ಎಂಬ ಕೀವರ್ಡ್‌ಗಳನ್ನು ಹುಡುಕಿದಾಗ, ಸಿಕ್ಕಿದ ವಿಡಿಯೊದಲ್ಲಿ ವೈರಲ್ ಆಗಿರುವ ಈ ವಿಡಿಯೊ ಇದೆ.  “ಇಥಿಯೋಪಿಯಾ ಪ್ಲೇನ್ ಕ್ರ್ಯಾಶ್, ಇಥಿಯೋಪಿಯಾ ಏರ್‌ಲೈನ್ಸ್ B737 MAX ಟೇಕ್‌ಆಫ್ ಆದ ನಂತರ ಪತನ, ಅಡಿಸ್ ಅಬಾಬಾ ಏರ್‌ಪೋರ್ಟ್ [XP11],” ಎಂಬ ಶೀರ್ಷಿಕೆ ಇರುವ ವಿಡಿಯೊವನ್ನು ಮಾರ್ಚ್ 11, 2019 ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊದ 9.21ನೇ ನಿಮಿಷ ನಂತರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೊದ ತುಣುಕು ಕಾಣಬಹುದು.

ಯೂಟ್ಯೂಬ್‌ನಲ್ಲಿನ ವಿಡಿಯೊದ ವಿವರಣೆ ಹೀಗಿದೆ: “ಇದು ನಿಖರವಾಗಿ ಏನಾಯಿತು ಎಂಬುದಲ್ಲ, ಇದು ಇಥಿಯೋಪಿಯನ್ ಏರ್‌ಲೈನ್ಸ್ ಫ್ಲೈಟ್ ET302 ವಿಮಾನ ಅಪಘಾತ.” ಬಿಬಿಸಿ ಪ್ರಕಾರ, ಇಥಿಯೋಪಿಯನ್ ಏರ್‌ಲೈನ್ಸ್ ಜೆಟ್ ಮಾರ್ಚ್ 10, 2019 ರಂದು ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 157 ಜನರಿದ್ದ ವಿಮಾನದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ.

ಇದನ್ನೂ ಓದಿ: China: ಚೀನಾದಲ್ಲಿ ಮತ್ತೆ ಕೊವಿಡ್ ಹಾವಳಿ: 2591 ಮಂದಿಯಲ್ಲಿ ಸೋಂಕು ಪತ್ತೆ, 20ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಲಾಕ್​ಡೌನ್

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ