Afghanistan: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಉದ್ಯೋಗಿಗಳು ಗಡ್ಡ ಬಿಡುವುದು ಕಡ್ಡಾಯ; ಸೂಟ್ ಧರಿಸಿದವರಿಗೆ ನೋ ಎಂಟ್ರಿ!

ಇಸ್ಲಾಮಿಕ್ ಧರ್ಮದ ನಿಯಮದ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆಯ ನಡುವೆ 6 ಬಾರಿ ಸರಿಯಾದ ಸಮಯದಲ್ಲಿ ನಮಾಜ್ ಮಾಡಲು ಅಫ್ಘಾನಿಸ್ತಾನದ ಸರ್ಕಾರಿ ಉದ್ಯೋಗಿಗಳಿಗೆ ಹೇಳಲಾಗಿದೆ.

Afghanistan: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಉದ್ಯೋಗಿಗಳು ಗಡ್ಡ ಬಿಡುವುದು ಕಡ್ಡಾಯ; ಸೂಟ್ ಧರಿಸಿದವರಿಗೆ ನೋ ಎಂಟ್ರಿ!
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 01, 2022 | 6:15 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿರುವ ತಾಲಿಬಾನ್ ಸರ್ಕಾರ (Taliban Government) ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್ (Dress Code) ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ. ಇದಿಷ್ಟೇ ಅಲ್ಲದೆ, ಸರ್ಕಾರಿ ನೌಕರರು ಸೂಟ್‌ಗಳನ್ನು ಧರಿಸಬಾರದು ಎಂಬ ನಿಯಮವನ್ನೂ ಜಾರಿಗೆ ತರಲಾಗಿದೆ. ಸರ್ಕಾರಿ ನೌಕರರು ಸೂಟ್ ಧರಿಸುವುದರ ಬದಲು ಉದ್ದನೆಯ ಜುಬ್ಬಾ ಧರಿಸಿ, ಪ್ಯಾಂಟ್ ಹಾಕಿಕೊಳ್ಳಬೇಕು. ಹಾಗೇ ತಮ್ಮ ತಲೆಯನ್ನು ಮುಚ್ಚಲು ಟೋಪಿ ಅಥವಾ ಪೇಟ ಧರಿಸಬೇಕು ಎಂದು ಆದೇಶಿಸಲಾಗಿದೆ.

ಇಸ್ಲಾಮಿಕ್ ಧರ್ಮದ ನಿಯಮದ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆಯ ನಡುವೆ 6 ಬಾರಿ ಸರಿಯಾದ ಸಮಯದಲ್ಲಿ ನಮಾಜ್ ಮಾಡಲು ಅಫ್ಘಾನಿಸ್ತಾನದ ಸರ್ಕಾರಿ ಉದ್ಯೋಗಿಗಳಿಗೆ ಹೇಳಲಾಗಿದೆ. ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ ಕಾರ್ಮಿಕರನ್ನು ಕಚೇರಿಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಅವರು ಪದೇಪದೆ ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ ಅವರನ್ನು ಕೆಲಸದಿಂದ ವಜಾ ಮಾಡಬಹುದು ಎಂದು ತಾಲಿಬಾನ್ ಸರ್ಕಾರ ಹೇಳಿದೆ.

ಅಫ್ಘಾನಿಸ್ತಾನದಲ್ಲಿ 9 ತಿಂಗಳ ನಂತರ ತರಗತಿಗಳು ಪುನರಾರಂಭಗೊಳ್ಳಲಿದ್ದು, ಕಳೆದ ವಾರವಷ್ಟೇ ತಾಲಿಬಾನ್‌ಗಳು ಪ್ರೌಢಶಾಲೆಗೆ ಹಾಜರಾಗಲು ಹುಡುಗಿಯರ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ಅಲ್ಲದೆ, ಬಾಲಕಿಯರು ಮತ್ತು ಯುವತಿಯರು ಪುರುಷರಿಲ್ಲದೆ ಅಥವಾ ಕುಟುಂಬದ ಸದಸ್ಯರಿಲ್ಲದೆ ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಪಾರ್ಕ್ಗಳಲ್ಲಿ ಕೂಡ ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ವಲಯಗಳನ್ನು ವಿಭಜಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ: ಬಾಲಕಿಯರ ಶಾಲೆಗಳನ್ನು ತೆರೆದ ಕೆಲವೇ ಗಂಟೆಗಳ ನಂತರ ಮುಚ್ಚಿಸಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ 6 ತಿಂಗಳು; ಅಫ್ಘಾನ್ ಜನತೆ ಸುರಕ್ಷಿತ, ಬಡತನದೊಂದಿಗೆ ಭರವಸೆ ಇಲ್ಲದ ಬದುಕು

Published On - 6:14 pm, Fri, 1 April 22