ಸುಳ್ಳು ಸುದ್ದಿ ಹರಡಿದರೆ ಹುಷಾರ್! ಮಧು ಬಂಗಾರಪ್ಪ ಎಚ್ಚರಿಕೆ, ಎಸ್​ಎಸ್ಎಲ್​ಸಿ-ಪಿಯುಸಿ ಪರೀಕ್ಷೆ ವಿಧಾನದ ಕುರಿತು ಸ್ಪಷ್ಟನೆ

ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ರದ್ದಾಗಿದೆ ಎಂಬ ಸುಳ್ಳು ಸುದ್ದಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ಮೂರು ಪರೀಕ್ಷೆಗಳೂ ನಡೆಯಲಿವೆ ಎಂದು ಅವರು ಖಚಿತಪಡಿಸಿದ್ದಾರೆ. ಗೊಂದಲ ಸೃಷ್ಟಿಸುವ ಮಾಧ್ಯಮಗಳಿಗೆ ಸಚಿವರು ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿ ಹರಡಿದರೆ ಹುಷಾರ್! ಮಧು ಬಂಗಾರಪ್ಪ ಎಚ್ಚರಿಕೆ, ಎಸ್​ಎಸ್ಎಲ್​ಸಿ-ಪಿಯುಸಿ ಪರೀಕ್ಷೆ ವಿಧಾನದ ಕುರಿತು ಸ್ಪಷ್ಟನೆ
ಎಸ್​ಎಸ್ಎಲ್ಸಿ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಹುಷಾರ್! ಮಧು ಬಂಗಾರಪ್ಪ ಎಚ್ಚರಿಕೆ
Updated By: ಭಾವನಾ ಹೆಗಡೆ

Updated on: Dec 03, 2025 | 11:27 AM

ಬೆಂಗಳೂರು, ಡಿಸೆಂಬರ್ 03: ಎಸ್​ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ (SSLC-PUC Exams) ಮೂರನೇ ಪರೀಕ್ಷೆ ನಡೆಸುವುದನ್ನು ಕೈಬಿಡಲಾಗಿದೆ ಎಂಬ ಸುದ್ದಿ ಕೆಲವು ಮಾಧ್ಯಮದಲ್ಲಿ ಪ್ರಕಟಿಸಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ,  ಕಳೆದ ವರ್ಷದಂತೆ ಈ ವರ್ಷವೂ SSLC-PUC ಗೆ ಮೂರು ಪರೀಕ್ಷೆ ನಡೆಸುತ್ತೇವೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುವವರಿಗೆಎಚ್ಚರಿಕೆ ನೀಡಿದ್ದಾರೆ.

SSLC-PUC ಗೆ ಮೂರು ಪರೀಕ್ಷೆ ಫಿಕ್ಸ್

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಇದೀಗ ಪರೀಕ್ಷಾ ವಿಧಾನದಲ್ಲಿಯೂ ಮಾರ್ಪಾಡು ಮಾಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಸುಳ್ಳು ಸುದ್ದಿಯಿಂದ ಕೆಂಡಾಮಂಡಲವಾಗಿರುವ ಮಧು ಬಂಗಾರಪ್ಪ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಇಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಬೇಡ. ಈ ವರ್ಷವೂ ಮೂರು ಎಕ್ಸ್ಂ ಮಾಡಲ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ ಇನ್ಮುಂದೆ  SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್: ಆಕ್ಷೇಪಣೆ ಸಲ್ಲಿಸಲು ಅವಕಾಶ

ಸುಳ್ಳು ಸುದ್ದಿ ಹಬ್ಬಿಸುವ ಮೀಡಿಯಾ ವಿರುದ್ಧ ಸಚಿವ ಗರಂ

ಸುಳ್ಳು ಸದ್ದಿ ಬರೆಯುವವರ ವಿರುದ್ಧ ಗರಂ ಆದ ಸಚಿವ, ಮೂರು ಪರೀಕ್ಷೆಗಳ ವಿಚಾರದಲ್ಲಿ ಕೆಲವರು ಗೊಂದಲ ಯಾಕೆ ಸೃಷ್ಟಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ. ಅವರಿಗೆ ತಿಳವಳಿಕೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಯಾವುದೇ ಪರೀಕ್ಷೆಯ ವಿಧಾನದ ಬದಲಾವಣೆಯನ್ನು ನಮ್ಮ ಇಲಾಖೆಯಿಂದ ಹೊರಡಿಸಬೇಕು. ಮೂರು ಎಕ್ಸಾಂ ಮಾಡಲ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಾರೋ ಹೇಳಿದರು ಎಂದು ಸುದ್ದಿ ಮಾಡಬೇಡಿ. ಬದಲಾವಣೆ ಇದ್ದರೆ ಚರ್ಚೆ ಮಾಡಬೇಕಾಗುತ್ತದೆ. ಚರ್ಚೆ ಮಾಡಿಯೇ ಬದಲಾವಣೆ ಮಾಡುತ್ತೇವೆ. ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.