AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು; ಹಲವು ರಹಸ್ಯ ಬಿಚ್ಚಿಟ್ಟ ಜೆಸಿಕಾ ತಂದೆಗೆ ಬಂದ ಆ ಒಂದು ಕಾಲ್​

ಎಸ್​ಎಸ್​ಎಲ್​ಸಿ ಓದುತ್ತಿದ್ದ ಜೆಸಿಕಾ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಪೋಷಕರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿವೆ. ಜೆಸಿಕಾ ಸಾವಿಗೆ ಆ ಒಂದು ಫೋನ್ ಕಾಲ್ ಕಾರಣವಾಯ್ತಾ? ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಪೊಲೀಸರ ತನಿಖೆ ವೇಳೆ ಅನೇಕ ಸಂಗತಿಗಳು ರಿವಿಲ್ ಆಗಿದೆ.

12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು; ಹಲವು ರಹಸ್ಯ ಬಿಚ್ಚಿಟ್ಟ ಜೆಸಿಕಾ ತಂದೆಗೆ ಬಂದ ಆ ಒಂದು ಕಾಲ್​
ಜೆಸಿಕಾ
Jagadisha B
| Edited By: |

Updated on: Aug 30, 2023 | 11:07 AM

Share

ಬೆಂಗಳೂರು, ಆ.30: ಶಾಲೆಗೆಂದು ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ(SSLC Student) ಜೆಸಿಕಾ(15) ಶಾಲೆಗೆ ಹೋಗದೆ ಮನೆಗೆ ವಾಪಸ್ ಆಗಿ ಅಪಾರ್ಟ್‌ಮೆಂಟ್‌ನ 12ನೇ ಫ್ಲೋರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಸದ್ಯ ಈ ಘಟನೆ ಪೋಷಕರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿವೆ. ಜೆಸಿಕಾ ಸಾವಿಗೆ ಆ ಒಂದು ಫೋನ್ ಕಾಲ್ ಕಾರಣವಾಯ್ತಾ? ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಪೊಲೀಸರ(Bellandur Police) ತನಿಖೆ ವೇಳೆ ಕೊನೆ ಕ್ಷಣದ ಮಾಹಿತಿ ರಿವಿಲ್ ಆಗಿದೆ. ಅದೇನು ಎಂಬ ಮಾಹಿತಿ ಇಲ್ಲಿದೆ.

ಜೆಸಿಕಾ ತಂದೆ-ತಾಯಿ ಮೂಲತಃ ತಮಿಳುನಾಡಿನವರು. ತಂದೆ ಡಾಮಿನಿಕ್ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ, ತಾಯಿ ದೇವಿ ಖಾಸಗಿ ಶಾಲೆಯ ಶಿಕ್ಷಕಿ. ತಮ್ಮ ಇಬ್ಬರು ಮಕ್ಕಳನ್ನ ಚೆನ್ನಾಗಿ ಓದಿಸ್ಬೇಕು‌ ಅಂತ ತಮಿಳುನಾಡಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಪ್ರತಿಷ್ಟಿತ ಶಾಲೆ‌, ಕಾಲೇಜಿಗೆ ಮಕ್ಕಳನ್ನು ಸೇರಿಸಿದ್ರು. ಎರಡನೇ ಮಗಳಾದ ಜೆಸಿಕಾ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಏಷಿಯಾ ಫೆಸಿಫಿಕ್ ಶಾಲೆಯಲ್ಲಿ SSLC, CBSE ಸಿಲಬಸ್ ಓದುತ್ತಿದ್ದಳು. ಜೆಸಿಕಾ ಶಾಲೆಯಲ್ಲಿ ಫೈನಲ್ ಎಕ್ಸಾಂಗಾಗಿ ತಯಾರಿ ನಡೆಯುತ್ತಿದೆ. ಸದ್ಯ ಫೈನಲ್ ಎಕ್ಸಾಂ ಫೀಸ್ ಸಂಗ್ರಹಣೆ ವೇಳೆ ಜೆಸಿಕಾ ದಾಖಲಾತಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಜೆಸಿಕಾ ಮೂರು ತಿಂಗಳಲ್ಲಿ 7 ದಿನ ಮಾತ್ರ ಶಾಲೆಗೆ ಹಾಜರಾಗಿರೋದು ಪತ್ತೆಯಾಗಿದೆ.

ಜೆಸಿಕಾ ತಂದೆಗೆ ಬಂದಿತ್ತು ಆ ಒಂದು ಕಾಲ್

ನಿನ್ನೆ ಬೆಳಿಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಜೆಸಿಕಾ ತಂದೆ ಡಾಮಿನಿಕ್ ಅವರಿಗೆ ಕಾಲ್ ಬಂದಿತ್ತು. ಕರೆ ಮಾಡಿ ಜೆಸಿಕಾ ಶಾಲೆಗೆ ಚಕ್ಕರ್ ಹಾಕುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಜೆಸಿಕಾ ತಂದೆ ತಮ್ಮ ಹೆಂಡತಿಗೆ ಕಾಲ್ ಮಾಡಿ ಮಗಳನ್ನು ಶಾಲೆಗೆ ಕಳಿಸಲು ಹೇಳಿದ್ದಾರೆ. ಆಗ ವಿಚಾರ ತಿಳಿದ ದೇವಿ ಅವರು ಮಗಳು ಜೆಸಿಕಾಗೆ ಕರೆ ಮಾಡಿ ನಾನು ಶಾಲೆಗೆ ಬರುತಿದ್ದೇನೆ ನೀನು ಎಲ್ಲಿದ್ದೀಯಾ ಎಂದು ಕೇಳಿದ್ದಾರೆ. ಈ ಫೋನ್ ಸಂಭಾಷಣೆ ಮುಗಿದ ಕೇವಲ 20 ನಿಮಿಷದಲ್ಲಿ ಜೆಸಿಕಾ ತಾವು ವಾಸವಿದ್ದ ಅಪಾರ್ಟ್ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಅಪಾರ್ಟ್ಮೆಂಟ್​ನ 12ನೇ ಮಹಡಿಯಿಂದ ಬಿದ್ದು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಸಾವು

ಜೆಸಿಕಾ ಸಾವಿಗೆ ಕಾರಣ ಏನು?

ಇನ್ನು ಜೆಸಿಕಾ ಆತ್ಮಹತ್ಯೆ ಬಳಿಕ ಮಗಳ ಆತ್ಮಹತ್ಯೆಯ ಅಸಲಿ ಕಾರಣ ತನಿಖೆ ಮಾಡುವಂತೆ ಜೆಸಿಕಾ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೆಸಿಕಾ ತಂದೆ ದೂರು ಹಿನ್ನಲೆ ಎಫ್​ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದು ಅನೇಕ ವಿಚಾರಗಳು ಬಯಲಾಗಿವೆ. ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾದ ಜೆಸಿಕಾ ತಾಯಿ ದೇವಿ ಅವರು ಕಳೆದ ವರ್ಷವಷ್ಟೇ ಶಾಲೆ ಬದಲಿಸಿದ್ದರು. ಈ ಹಿಂದೆ ಜೆಸಿಕಾ ಓದುತ್ತಿದ್ದ ಶಾಲೆಯಲ್ಲೇ ದೇವಿ ಶಿಕ್ಷಕಿಯಾಗಿದ್ದರು. ಮಗಳು ಓದುವ ಶಾಲೆಯಲ್ಲೇ ಶಿಕ್ಷಕಿಯಾಗಿರೊದು ಬೇಡ ಎಂದು ಶಾಲೆ ಬದಲಾಯಿಸಿ ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ತಾಯಿ ಶಾಲೆ ಬದಲಾಯಿಸುತಿದ್ದಂತೆ ಮಗಳು ಜೆಸಿಕಾಳ ನಡುವಳಿಕೆ ಬದಲಾಗತೊಡಗಿತು. ನಿತ್ಯ ಶಾಲೆಗೆ ಹೋಗದೆ ಸಮಯ ಕಳೆಯಲು ಶುರು ಮಾಡಿದ್ದಳಂತೆ.

ಶಾಲೆಗೆ ಹೋಗದೆ ಜೆಸಿಕಾ ಹೋಗುತ್ತಿದ್ದದ್ದು ಎಲ್ಲಿಗೆ?

ಜೆಸಿಕಾ ಸಾವಿನ ಬಗ್ಗೆ ಅಪಾರ್ಟ್ಮೆಂಟ್​ನ ಕೆಲ ನಿವಾಸಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರತಿನಿತ್ಯ 7:30ಕ್ಕೆ ಶಾಲೆ ಬಟ್ಟೆ ಧರಿಸಿ ಹೊರಗೆ ಬರುತಿದ್ದ ಜೆಸಿಕಾ ಹೆಚ್ಚಾಗಿ ತನ್ನ ಅಪಾರ್ಟ್ಮೆಂಟ್ ನಲ್ಲಿನ ನಾಯಿ ಜೊತೆ ಕಾಲ ಕಳೆಯುತಿದ್ದಳು. ಯಾರ ಜೊತೆಯೂ ಹೆಚ್ಚು ಸೇರುತ್ತಿರಲಿಲ್ಲ. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ನಾಯಿ ಹಾಗೂ ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆಯುತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಹಲವು ಬಾರಿ ಶಾಲೆ ರಜೆಯಿದ್ದರೂ ಜೆಸಿಕಾ ಯೂನಿಫಾರ್ಮ್ ಧರಿಸಿ ಹೊರ ಬರುತಿದ್ದಳು. ಈ ಬಗ್ಗೆ ಸ್ಥಳೀಯರು ಕೇಳುತಿದ್ದಂತೆ ರಜೆ ಎಂದು ಮನೆಗೆ ವಾಪಾಸ್ ಹೋಗುತ್ತಿದ್ದಳಂತೆ.

ಜೆಸಿಕಾ ಬಳಸುತಿದ್ದ ಮೊಬೈಲ್​ನಲ್ಲಿದೆಯಾ ಆಕೆಗಿದ್ದ ಸಮಸ್ಯೆಯ ಅಸಲಿ ಸತ್ಯ?

ಜೆಸಿಕಾ ತನ್ನ ಐ ಫೋನ್ ಸಮೇತ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಬೆಳ್ಳಂದೂರು ಪೊಲೀಸರು ಜೆಸಿಕಾ ಬಳಸುತಿದ್ದ ಐಫೋನ್ ಪರಿಶೀಲನೆಗೆ ಮುಂದಾಗಿದ್ದಾರೆ. ಸದ್ಯ ಜೆಸಿಕಾ ಮೊಬೈಲ್ ಸಂಪೂರ್ಣ ಡ್ಯಾಮೆಜ್ ಆಗಿದೆ. ಹೀಗಾಗಿ ಆಕೆಯ ಕಾಲ್ ಡಿಟೈಲ್, ಚಾಟಿಂಗ್ ಸೇರಿದಂತೆ ಹಲವು ಮಾಹಿತಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಮೊಬೈಲ್ ಪರಿಶೀಲನೆ ನಂತರ ಜೆಸಿಕಾ ಸಾವಿನ ಅಸಲಿ ಸತ್ಯ ಬೆಳಕಿಗೆ ಬರಲಿದೆ. ಪೊಲೀಸರಿಂದ ತನಿಖೆ ಮುಂದುವರೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ