ರಿಸಲ್ಟ್ ಶೀಟ್​ನಲ್ಲಿ ಇದ್ದಿದ್ದು 5 ಅಂಕ, ಉತ್ತರ ಪತ್ರಿಕೆಯಲ್ಲಿ ಬಂದದ್ದು 70; ಶಿಕ್ಷಣ ಇಲಾಖೆ ವಿರುದ್ಧ ಮಕ್ಕಳ ಆಕ್ರೋಶ

| Updated By: ಆಯೇಷಾ ಬಾನು

Updated on: May 26, 2024 | 12:15 PM

ಕರ್ನಾಟಕ ಶಿಕ್ಷಣ ಇಲಾಖೆ ಮಾಡಿಕೊಂಡಿರುವ ಯಡವಟ್ಟು ಒಂದಾ ಎರಡಾ? ಸಾಲು ಸಾಲು ತಪ್ಪುಗಳನ್ನು ಮಾಡಿ ಮಕ್ಕಳ ಬದುಕಲ್ಲಿ ಚೆಲ್ಲಾಟ ಆಡ್ತಾ ಇರೋ ಇಲಾಖೆ ವಿರುದ್ಧ ಇಷ್ಟು ದಿನ ಸಂಘಟನೆಗಳು ದೂರುತ್ತಾ ಇದ್ದವು. ಆದರೆ ಈಗ ಖುದ್ದು ಮಕ್ಕಳೇ ಮುಂದೆ ಬಂದು ಇಲಾಖೆಯ ಮೌಲ್ಯಮಾಪನದ ಕರ್ಮ ಕಾಂಡವನ್ನು ರಿವೀಲ್ ಮಾಡಿದ್ದಾರೆ.

ರಿಸಲ್ಟ್ ಶೀಟ್​ನಲ್ಲಿ ಇದ್ದಿದ್ದು 5 ಅಂಕ, ಉತ್ತರ ಪತ್ರಿಕೆಯಲ್ಲಿ ಬಂದದ್ದು 70; ಶಿಕ್ಷಣ ಇಲಾಖೆ ವಿರುದ್ಧ ಮಕ್ಕಳ ಆಕ್ರೋಶ
ಶಿಕ್ಷಣ ಇಲಾಖೆ ವಿರುದ್ಧ ಮಕ್ಕಳ ಆಕ್ರೋಶ
Follow us on

ಬೆಂಗಳೂರು, ಮೇ.26: ರಾಜ್ಯದ ಶಿಕ್ಷಣ ಇಲಾಖೆಯ (Education Department) ಬೇಜವಾಬ್ದಾರಿತನದಿಂದ SSLC ಮಕ್ಕಳ ಭವಿಷ್ಯ ಮೂರಾ ಬಟ್ಟೆಯಾಗಿದೆ. ಈ ವರ್ಷ ಮೌಲ್ಯಮಾಪನದಲ್ಲಿ ಮಾಡಿರುವ ಬೇಜವಬ್ದಾರಿತನ ಮಕ್ಕಳ (Student) ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪಾಸ್ ಆಗುವವರು ಫೇಲ್, ಫೇಲ್ ಆಗುವವರು ಪಾಸ್ ಆದಂತಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳೇ ಪ್ರೆಸ್ ಕ್ಲಬ್ ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.

ಇಡೀ ಉತ್ತರ ಪತ್ರಿಕೆ ಟೋಟೆಲ್ ಮಾಡಿದ್ರೆ ವಿದ್ಯಾರ್ಥಿಯೊಬ್ಬನಿಗೆ 70 ಅಂಕ ಬಂದ್ರೆ, ರಿಸಲ್ಟ್ ಶೀಟ್ ಅಲ್ಲಿ ಆತನಿಗೆ ಕೊಟ್ಟಿರುವುದು 5 ಅಂಕ. ಕೀ ಉತ್ತರದಲ್ಲಿ ಇರುವಂತೆ ಬರೆದರು ವಿದ್ಯಾರ್ಥಿನಿಗೆ ಅಂಕ ಕೊಟ್ಟಿಲ್ಲ, ತಪ್ಪು ಬರೆದ ಅದೇ ವಿದ್ಯಾರ್ಥಿನಿಗೆ ಮೌಲ್ಯಮಾಪಕರು ಅಂಕ ಕೊಟ್ಟಿದ್ದಾರೆ. ಡಿಸ್ಟಿಂಕ್ಷನ್ ಬರಬೇಕಿದ್ದ ವಿದ್ಯಾರ್ಥಿನಿಗೆ 20 ಅಂಕಗಳ ಕಡಿತವು ಆಗಿದೆ. ಇದೆಲ್ಲ ಇವತ್ತು ಬೇರೆ ಬೇರೆ ಶಾಲೆಯ SSLC ಪರೀಕ್ಷೆ ಬರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೇಳಿಕೊಂಡ ಸಮಸ್ಯೆಯ ಸಾರಾಂಶ.

ಇದನ್ನೂ ಓದಿ: ಕಾರು ಕಲಿಯಲು ಹೋಗಿ ಬಾಲಕಿ‌ ಮೇಲೆ‌ ಕಾರು ಹತ್ತಿಸಿದ ಮಹಿಳೆ; ಬಾಲಕಿ ಸ್ಥಳದಲ್ಲೇ ಸಾವು

ಮೌಲ್ಯಮಾಪನದ ಹೆಸರಲ್ಲಿ ಶಿಕ್ಷಣ ಇಲಾಖೆ ದುಡ್ಡು ಮಾಡ್ತಿದೆಯಾ?

ರಾಜ್ಯದಲ್ಲಿ ಈ ವರ್ಷ ಎಸ್ಎಸ್ಎಲ್​ಸಿ ಪರೀಕ್ಷೆ ಬರೆದ 48 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 600 ರೂಪಾಯಿ ಶುಲ್ಕ ಕಟ್ಟಿ ಉತ್ತರ ಪತ್ರಿಕೆಯ ಪ್ರತಿಗಳನ್ನ ಪಡೆದಿದ್ದಾರೆ. 71 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮೌಲ್ಯಮಾಪನ ಮಾಡಿದ್ದಾರೆ. ಇನ್ನು ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಗರಿಷ್ಠ ಮೌಲ್ಯಾಂಕನ ಮಾರ್ಕ್ಸ್ ನೀಡಿ ಶಿಕ್ಷಣ ಇಲಾಖೆ ಸಾರ್ವಜನಿಕರಾದಿಯಾಗಿ ಸಿಎಂ ಸಿದ್ದರಾಮಯ್ಯ ವರೆಗೂ ಛೀಮಾರಿ ಹಾಕಿಸಿ ಕೊಂಡಿತ್ತು. ಈಗ ಅಹರ್ತೆ ಪಡೆಯದೆ ಇರೋ ಪ್ರಾಥಮಿಕ ಶಾಲಾ ತರಗತಿಯ ಶಿಕ್ಷಕರನ್ನ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನಕ್ಕೆ ಮಾಡಿಕೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬರ್ತಿದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗ್ತಿದೆ ಅಂತಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉತ್ತರ ಪತ್ರಿಕೆಯ ಪ್ರತಿಯೊಂದಿಗೆ ಶಾಲಾ ಶಿಕ್ಷಣ ಇಲಾಖೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಾಲು ಸಾಲು ಸಮಸ್ಯೆಗಳು ಸೃಷ್ಟಿಯಾಗಿ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದರು ಶಿಕ್ಷಣ ಇಲಾಖೆ ಮಾತ್ರ ಇತ್ತ ಕಡೆ ಗಮನ ಕೊಟ್ಟ ಹಾಗೇ ಕಾಣಿಸ್ತಾಯಿಲ್ಲ. ಈ ಕಳಪೆ ಮೌಲ್ಯಮಾಪನ, ಇಲಾಖೆಯ ಪರೀಕ್ಷಾ ಗೊಂದಲದಿಂದ ಬೇಸತ್ತ ಪೋಷಕರು ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಆದರೆ ಈ ಪೋಷಕರ, ವಿದ್ಯಾರ್ಥಿಗಳ ವ್ಯಥೆ ಶಿಕ್ಷಣ ಇಲಾಖೆಯ ಕಣ್ಣು ತೆರಸುತ್ತಾ? ಈ ಬಗ್ಗೆ ಏನಾದ್ರೂ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ