ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು, ರಾಜ್ಯ ಸರ್ಕಾರ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ವರ್ಗಾವಣೆ ಮಾಡಿದೆ – ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್​ ವಾಗ್ದಾಳಿ

| Updated By: ಆಯೇಷಾ ಬಾನು

Updated on: May 11, 2022 | 4:40 PM

ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ವರ್ಗಾವಣೆ ಮಾಡಿದ್ದಾರೆ. ಕೂಡಲೇ ಅಧಿಕಾರಿಯನ್ನ ಹಿಂದಿನ ಹುದ್ದೆಗೆ ವರ್ಗಾವಣೆ ಮಾಡಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು, ರಾಜ್ಯ ಸರ್ಕಾರ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ವರ್ಗಾವಣೆ ಮಾಡಿದೆ - ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್​ ವಾಗ್ದಾಳಿ
ಡಿಕೆ ಶಿವಕುಮಾರ್​
Follow us on

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್( DGP Ravindranath Resign) ರಾಜೀನಾಮೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್(DK Shivakumar) ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ವಿ.ಎಸ್ ಉಗ್ರಪ್ಪ ಭಾಗಿಯಾಗಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿ ರವೀಂದ್ರನಾಥ್ ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ರವೀಂದ್ರನಾಥ್ ವರ್ಗಾವಣೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ವರ್ಗಾವಣೆ ಮಾಡಿದ್ದಾರೆ. ಕೂಡಲೇ ಅಧಿಕಾರಿಯನ್ನ ಹಿಂದಿನ ಹುದ್ದೆಗೆ ವರ್ಗಾವಣೆ ಮಾಡಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನ್ನು ಶುರು ಮಾಡಿದ ಡಿಕೆ ಶಿವಕುಮಾರ್, ಒಂದು ಪ್ರಮುಖ ವಿಚಾರ ಇವತ್ತು ಹೇಳುತ್ತಿದ್ದೇನೆ. ನೊಂದ ಜನರಿಗೆ ರಕ್ಷಣೆ ಕೊಡುತ್ತಿದ್ದ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ತನಿಖೆ ಮಾಡುತ್ತಿದ್ದ ಅಧಿಕಾರಿಗೆ ವರ್ಗಾವಣೆ ಮಾಡಿರೋದು ನಿಮಗೆಲ್ಲ ಗೊತ್ತಿರೋ ವಿಚಾರ. ಡಾ. ರವೀಂದ್ರರವರು ರಾಜೀನಾಮೆ ಕೊಟ್ಟಿದ್ದಾರೆ. ಫಾಲ್ಸ್ ಸರ್ಟಿಫಿಕೇಟ್ ತೆಗೆದುಕೊಂಡವರ ಮೇಲೆ ದೂರುಗಳು ಬಂದ ಹಿನ್ನೆಲೆ ತನಿಖೆ ನಡೆಯುತ್ತಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಕೇಸ್ ಕೋರ್ಟ್ ನಲ್ಲಿ ಪೆಂಡಿಂಗ್ನಲ್ಲಿವೆ. ಕಾನೂನು ಹೇಳುತ್ತೆ 60 ದಿನದಲ್ಲಿ ಮುಗಿಯಬೇಕು ಅಂತ. ಇಂಥಹ ಸಂದರ್ಭದಲ್ಲಿ ರವೀಂದ್ರನಾಥ್ ಮೇಲೆ ಭಾರೀ ಒತ್ತಡ ಹಾಕಿದ್ದಾರೆ. ಮಂತ್ರಿಯನ್ನೋ ಪೊಲಿಟಿಕಲ್ ಸೆಕ್ರೇಟ್ರಿಯನ್ನ ರಕ್ಷಣೆ ಮಾಡೋಕೋ ಒತ್ತಡ ಹಾಕಿದ್ದಾರೆ. ಮೊನ್ನೆ ರೇಣುಕಾಚಾರ್ಯರವರೇ ಫೇಕ್ ಸರ್ಟಿಪಿಕೇಟ್ ತೆಗೆದುಕೊಂಡಿದ್ದು ನಿಜ ಆದ್ರೆ ಅದನ್ನ ಬಳಕೆ ಮಾಡಿಕೊಂಡಿಲ್ಲ ಅಂದಿದ್ದಾರೆ. ಆದ್ರೆ ಕಾನೂನು ರೀತಿ ಇದು ತಪ್ಪು. ನ್ಯಾಯಬದ್ಧವಾಗಿ ತನಿಖೆ ಮಾಡುತ್ತಿದ್ದ ರವೀಂದ್ರರವರಿಗೆ ರಕ್ಷಣೆ ಸಿಗ್ತಿಲ್ಲ. ಹೀಗಾಗಿ ಸಿಎಂಗೆ ಇಲ್ಲಿ ಪಾರದರ್ಶಕತೆಯ ತನಿಖೆಯಾಗಬೇಕು. ರವೀಂದ್ರರನ್ನ ಮತ್ತೆ ಅಲ್ಲೇ ನೇಮಕ ಮಾಡಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಕೂಡಲೇ ರೇಣುಕಾಚಾರ್ಯರನ್ನ ಡ್ರಾಪ್ ಮಾಡಿ ಅಥವಾ ವಜಾ ಮಾಡಿ. ನಮಗೆ ಬಂದಿರುವ ಮಾಹಿತಿ ಪ್ರಕಾರ ರೇಣುಕಾಚಾರ್ಯಗೆ ಒತ್ತಡ ಹಾಕಬಾರದಂತೆ. ಯಾಕೆಂದ್ರೆ ರೇಣುಕಾಚಾರ್ಯಗೆ ನೊಟೀಸ್ ಕೊಟ್ಟಿದ್ದರು. ರವೀಂದ್ರರವರು ಪ್ರಾಮಾಣಿಕ ತನಿಖೆ ಮಾಡುತ್ತಿದ್ದರು. ಹೀಗಾಗಿ ಅವರನ್ನ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ರೇಣುಕಾಚಾರ್ಯ ಮಾಡಿರೋದು ತಪ್ಪು ಅವರ ಮೇಲೆ ಕೂಡಲೇ ಕ್ರಮಜರುಗಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:32 pm, Wed, 11 May 22