ಬೆಂಗಳೂರು ಜನರೇ ಎಚ್ಚರ ಎಚ್ಚರ! ನಗರದಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಸೋಂಕಿತರ ಸಂಖ್ಯೆ

ಬೆಂಗಳೂರು ಜನರೇ ಎಚ್ಚರ ಎಚ್ಚರ! ನಗರದಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ

ಬೊಮ್ಮನಹಳ್ಳಿ ವಲಯ 104 ಕೇಸ್ಗಳು ಪತ್ತೆಯಾದರೆ, ದಾಸರಹಳ್ಳಿ ವಲಯದಲ್ಲಿ 38, ಮಹದೇವಪುರ ವಲಯದಲ್ಲಿ 342, ಆರ್.ಆರ್ ನಗರ ವಲಯದಲ್ಲಿ 122, ಯಲಹಂಕ ವಲಯದಲ್ಲಿ 202 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

TV9kannada Web Team

| Edited By: sandhya thejappa

May 11, 2022 | 4:02 PM

ಬೆಂಗಳೂರು: ಕೊರೊನಾ ಸೋಂಕಿನ (Coronavirus) ಆತಂಕದ ನಡುವೆ ಇದೀಗ ಡೆಂಗ್ಯೂ (Dengue) ಆತಂಕವೂ ಶುರುವಾಗಿದೆ. ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ನಗರದಾದ್ಯಂತ ಸುಮಾರು ಎರಡು ಸಾವಿರ ಡೆಂಘೀ ಕೇಸ್ಗಳು ದಾಖಲಾಗಿವೆ. ಕಳೆದ ವರ್ಷ ಸುಮಾರು 1,800 ಪ್ರಕರಣ ದಾಖಲಾಗಿದ್ದವು. ಈ ಬಾರಿ ವಲಯ ಮಟ್ಟದಲ್ಲಿ 2 ತಿಂಗಳಿನಿಂದ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಒಟ್ಟು 653 ಕೇಸ್ ಪತ್ತೆಯಾಗಿದೆ. ಬಿಬಿಎಂಪಿ 8 ವಲಯಗಳ ಶಾಲಾ ಕಾಲೇಜುಗಳ ಬಳಿ ನಿಗಾ ವಹಿಸಲಾಗಿದೆ.

ಬೊಮ್ಮನಹಳ್ಳಿ ವಲಯ 104 ಕೇಸ್ಗಳು ಪತ್ತೆಯಾದರೆ, ದಾಸರಹಳ್ಳಿ ವಲಯದಲ್ಲಿ 38, ಮಹದೇವಪುರ ವಲಯದಲ್ಲಿ 342, ಆರ್.ಆರ್ ನಗರ ವಲಯದಲ್ಲಿ 122, ಯಲಹಂಕ ವಲಯದಲ್ಲಿ 202 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿ ಒಟ್ಟು 170 ಕೇಸ್, ಬೆಂಗಳೂರು ಪಶ್ಚಿಮ ವಲಯದಲ್ಲಿ 162 ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಕೇಸ್ಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಹೀಗಾಗಿ ಡೆಂಘೀ ತಡೆಗಟ್ಟುವ ಸಲುವಾಗಿ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶಾಲಾ ಕಾಲೇಜುಗಳ ಬಳಿ ತೀವ್ರ ನಿಗಾ ಇಡುತ್ತಿರುವ ಬಿಬಿಎಂಪಿ, ಶಾಲೆಗಳ ಬಳಿ ಲಾರ್ವಿಸೈಡ್, ಫಾಗ್ ಸಿಂಪಡಿಸಲು ಸೂಚನೆ ನೀಡಿದೆ. ಜೊತೆಗೆ ವಲಯ ಮಟ್ಟದಲ್ಲಿ ಡೋರ್ ಟು ಡೋರ್ ಸಮೀಕ್ಷೆಗೆ ಸೂಚನೆ ನೀಡಿದೆ. ಸೊಳ್ಳೆ ಕಡಿತದಿಂದ ಅನಾರೋಗ್ಯದ ಸಮಸ್ಯೆಯಾದರೆ ಆಸ್ಪತ್ರೆಗೆ ದಾಖಲಾಗಿ ವೈದ್ಯರ ಬಳಿ ತೋರಿಸಿಕೊಳ್ಳುವಂತೆ ಸೂಚನೆ ಕೊಟ್ಟಿದೆ.

ಈ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ: 1. ಅತಿಯಾದ ಜ್ವರ, ತಲೆನೋವು, ಮಾಂಸಖಂಡ, ಎಲುಬು ಮತ್ತು ಕೀಲು ನೋವು 2. ವಾಕರಿಕೆ, ವಾಂತಿ, ಕಣ್ಣುಗಳ ಹಿಂದೆ ಅತಿಯಾದ ನೋವು 3. ಗ್ರಂಥಿಗಳು ಊದಿಕೊಳ್ಳುವುದು, ಮೈಮೇಲೆ ಕೆಂಪು ದದ್ದಿ 4. ಅತಿಯಾದ ಹೊಟ್ಟೆನೋವು, ನಿರಂತರ ವಾಂತಿ 5. ದಂತದಲ್ಲಿ, ಮೂಗಿನಲ್ಲಿ ರಕ್ತಸ್ರಾವ 6. ಮೂತ್ರದಲ್ಲಿ, ಮಲ ಮತ್ತು ವಾಂತಿಯಲ್ಲಿ ರಕ್ತ ಹೋಗುತ್ತದೆ (ಇದೆಲ್ಲ ಡೆಂಗ್ಯೂದ ಗಂಭೀರ ಸ್ವರೂಪಗಳು.) 7. ಉಸಿರಾಟದಲ್ಲಿ ತೀವ್ರ ತೊಂದರೆ, ಆಯಾಸ, ಕಿರಿಕಿರಿ.

ಇದನ್ನೂ ಓದಿ

‘ಕೆಜಿಎಫ್ 2’ ಬಳಿಕ ಮಹತ್ವದ ಬದಲಾವಣೆ ಮಾಡಿಕೊಂಡ ಪ್ರಶಾಂತ್ ನೀಲ್​; ಏನದು?

IPL 2022 playoffs scenarios: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

Follow us on

Related Stories

Most Read Stories

Click on your DTH Provider to Add TV9 Kannada