ಡ್ರಗ್ಸ್ ಮುಕ್ತ ಕಾಲೇಜಿಗಾಗಿ ಪೊಲೀಸರ ಜೊತೆ ಕೈ ಜೋಡಿಸಿದ ವಿದ್ಯಾರ್ಥಿಗಳು, ಮಾರ್ಷಲ್ ಪಡೆ ರಚಿಸಿ ಖಾಕಿಯಿಂದ ತರಬೇತಿ

| Updated By: ಆಯೇಷಾ ಬಾನು

Updated on: Aug 31, 2023 | 10:06 AM

ಬೆಂಗಳೂರಿನಲ್ಲಿ ಡ್ರಗ್ಸ್ ಗುಂಗು ಹೆಚ್ಚಾಗಿದೆ. ಹೀಗಾಗಿ ಪೊಲೀಸರು ಹೊಸ ಪ್ಲಾನ್ ಮಾಡಿದ್ದು ನಗರದ ವಿಭಾಗವಾರು ವ್ಯಾಪ್ತಿಯಲ್ಲಿ ಸುಮಾರು 750 ವಿದ್ಯಾರ್ಥಿಗಳ ಮಾರ್ಷಲ್ಸ್ ಪಡೆಯನ್ನು ರಚಿಸಿ ಅವರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ತಡೆಗೆ ಸ್ಟೂಡೆಂಟ್ ಮಾರ್ಷಲ್ ಬಳಸಿಕೊಳ್ಳಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಈ ಐವತ್ತು ವಿದ್ಯಾರ್ಥಿಗಳಿಗೆ ಡ್ರಗ್ಸ್ ಅಪಾಯದ ಜಾಗೃತಿ ತರಬೇತಿ ನೀಡಲಿದ್ದಾರೆ.

ಡ್ರಗ್ಸ್ ಮುಕ್ತ ಕಾಲೇಜಿಗಾಗಿ ಪೊಲೀಸರ ಜೊತೆ ಕೈ ಜೋಡಿಸಿದ ವಿದ್ಯಾರ್ಥಿಗಳು, ಮಾರ್ಷಲ್ ಪಡೆ ರಚಿಸಿ ಖಾಕಿಯಿಂದ ತರಬೇತಿ
ಡ್ರಗ್ಸ್ ಮುಕ್ತ ಕಾಲೇಜಿಗಾಗಿ ಪೊಲೀಸರ ಜೊತೆ ಕೈ ಜೋಡಿಸಿದ ವಿದ್ಯಾರ್ಥಿಗಳು
Follow us on

ಬೆಂಗಳೂರು, ಆ.31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ(Drugs). ಯುವಕರು-ವಿದ್ಯಾರ್ಥಿಗಳು ಡ್ರಗ್ಸ್​ಗೆ ದಾಸರಾಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿ ಪಡೆಯೇ ಡ್ರಗ್ಸ್ ವಿರುದ್ಧ ಸಮರಕ್ಕೆ ನಿಂತಿದೆ. ನಗರ ಪೊಲೀಸರ(Bengaluru Police) ಸಹಕಾರದಲ್ಲಿ ಸ್ಟೂಡೆಂಟ್ಸ್ ಮಾರ್ಷಲ್ ಪಡೆ(Student Marshal Team) ರಚಿಸಲಾಗಿದ್ದು ಪ್ರತಿ ಕಾಲೇಜಿನಲ್ಲಿ ಐವತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಡ್ರಗ್ಸ್ ಮುಕ್ತ ನಗರಕ್ಕಾಗಿ ವಿದ್ಯಾರ್ಥಿ ಮಾರ್ಷಲ್ ಪಡೆ ಪೊಲೀಸರ ಜೊತೆ ಕೈ ಜೋಡಿಸಿದೆ. ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ತಡೆಗೆ ಸ್ಟೂಡೆಂಟ್ ಮಾರ್ಷಲ್ ಬಳಸಿಕೊಳ್ಳಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಈ ಐವತ್ತು ವಿದ್ಯಾರ್ಥಿಗಳಿಗೆ ಡ್ರಗ್ಸ್ ಅಪಾಯದ ಜಾಗೃತಿ ತರಬೇತಿ ನೀಡಲಿದ್ದಾರೆ.

ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಮಾರ್ಷಲ್ ಪಡೆ

ಬೆಂಗಳೂರಿನಲ್ಲಿ ಡ್ರಗ್ಸ್ ಗುಂಗು ಹೆಚ್ಚಾಗಿದೆ. ಹೀಗಾಗಿ ಪೊಲೀಸರು ಹೊಸ ಪ್ಲಾನ್ ಮಾಡಿದ್ದು ನಗರದ ವಿಭಾಗವಾರು ವ್ಯಾಪ್ತಿಯಲ್ಲಿ ಸುಮಾರು 750 ವಿದ್ಯಾರ್ಥಿಗಳ ಮಾರ್ಷಲ್ಸ್ ಪಡೆಯನ್ನು ರಚಿಸಿ ಅವರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಖಾಕಿಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸಲಿದ್ದಾರೆ. ಹಾಗೂ ಕಾಲೇಜು ಸುತ್ತಮುತ್ತ ಮಾದಕವಸ್ತು ಮಾರಾಟ, ಸೇವನೆ ಬಗ್ಗೆ ಕಣ್ಗಾವಲಾಗಲಿದ್ದಾರೆ. ಸೂಕ್ಷ್ಮ ವಿಚಾರಗಳು ಕಂಡು ಬಂದಲ್ಲಿ ಪೊಲೀಸ್ ಸ್ನೇಹಿಯಾಗಿ ಮಾಹಿತಿ ನೀಡಲಿದ್ದಾರೆ. ಪೊಲೀಸರ ಜೊತೆ ಸಂಪರ್ಕದಲ್ಲಿದ್ದು ಡ್ರಗ್ಸ್ ಮುಕ್ತ ಕಾಲೇಜಿಗಾಗಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಜಸ್ಟ್ ಸೇ ಟು ನೋ ಡ್ರಗ್ಸ್ ಹೆಸರಲ್ಲಿ ತರಬೇತಿ ಆರಂಭವಾಗಿದೆ.

ಇದನ್ನೂ ಓದಿ: ಅಪಾರ್ಟ್​ಮೆಂಟ್​ನಲ್ಲಿ ರೇವ್ ಪಾರ್ಟಿ; ನಿರ್ಮಾಪಕ ವೆಂಕಟ್ ಸೇರಿ ಹಲವು ಸೆಲೆಬ್ರಿಟಿಗಳು ಅರೆಸ್ಟ್​

ಇನ್ನು ಸ್ಟೂಡೆಂಟ್ ಮಾರ್ಷಲ್ಸ್​ ಟೀಂ ಕಟ್ಟಿ ಡ್ರಗ್ಸ್ ಹಾವಳಿಗೆ ಬ್ರೇಕ್ ಹಾಕಲು‌ ಸಿದ್ಧತೆ ನಡೆದಿದೆ. ಈ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚಿಗೆ ನಗರದ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಮುಕ್ತ ವಿದ್ಯಾರ್ಥಿ ಸಮುದಾಯವಾಗಿಸಲು ದಾಪುಗಾಲು ಇಡಲಾಗಿದೆ. ವಿದ್ಯಾರ್ಥಿಗಳನ್ನ ಡ್ರಗ್ಸ್ ವಿರುದ್ದ ಸೆಣಸಲು ಸಜ್ಜುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಪೊಲೀಸರು ಸಜ್ಜುಗೊಳಿಸುತ್ತಿರುವ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಲಿದ್ದಾರೆ. ನಗರದ ಇತರೆ ಕಾಲೇಜು ವಿದ್ಯಾರ್ಥಿಗಳ ಸಂಪರ್ಕಿಸಿ ಸ್ವಯಂ ಸೇವಕರ ಪಡೆ ರಚಿಸಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ