ಬೆಂಗಳೂರು, ಅಕ್ಟೋಬರ್ 05: ಶಾಲಾ-ಕಾಲೇಜುಗಳಲ್ಲಿ ಪೊಲೀಸರು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಅನ್ನದ ವಿದ್ಯಾರ್ಥಿಗಳು (Students) ಮಾತ್ರ ಸಾರ್ವಜನಿಕ ಸ್ಥಳಗಳಲ್ಲೇ ಸಿಗರೇಟ್ ಸೇವನೆ ಮಾಡಿದ್ದಾರೆ. ವಿವಿ ಪುರಂ ಟೆಂಪಲ್ ಸ್ಟ್ರೀಟ್ ಬಳಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಿಗರೇಟ್ ಸೇದುತ್ತ ನಿಂತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಗರೇಟ್ ಚಟಕ್ಕೆ ಬಿದ್ದಿದ್ದಾರೆ. ಸ್ಥಳೀಯರು ವಿದ್ಯಾರ್ಥಿಗಳ ಫೋಟೋ ತೆಗೆದು ವಿವಿ ಪುರಂ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಕಲಬುರಗಿ: ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿತ್ತು. ವಾಡಿಯಿಂದ ಯಾದಗಿರಿಗೆ ಹೋಗಲು ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: Ambaari Dasara Bus: ಮೈಸೂರು ದಸರಾಗೆ ಮತ್ತಷ್ಟು ಮೆರಗು ನೀಡಲು ರಸ್ತೆಗೆ ಇಳಿಯುತ್ತಿದೆ ಅಂಬಾರಿ
ಅನೇಕ ಬಸ್ ಗಳು ಕಲಬುರಗಿಯಿಂದ ಬೈಪಾಸ್ ಮಾರ್ಗವಾಗಿ ಯಾದಗಿರಿಗೆ ಹೋಗುತ್ತಿವೆ. ಹೀಗಾಗಿ ವಾಡಿಯಿಂದ ಯಾದಗಿರಿಗೆ ಹೋಗಲು ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹೀಗಾಗಿ ಸಮರ್ಪಕವಾಗಿ ಮತ್ತು ನಿಗದಿತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದರು.
ಗದಗ: ಶಿಕ್ಷಕ ವರ್ಗಾವಣೆ ವಿಷಯ ತಿಳದು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅಳುವ ಮೂಲಕ ನೆಚ್ಚಿನ ಶಿಕ್ಷನಿಗೆ ಬಿಳ್ಕೊಡುಗೆ ನೀಡಿರುವಂತಹ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ
ಶ್ರೀ ಗುರು ದಿಂಗಾಲೇಶ್ವರ ಸರಕಾರಿ ಫ್ರೌಡ ಶಾಲೆಯಲ್ಲಿ ನಡೆದಿದೆ. ದೈಹಿಕ ಶಿಕ್ಷಕ ಮಹಾವೀರ ಸವದಿ ಎನ್ನುವ ಶಿಕ್ಷಕರಿಗೆ ವರ್ಗಾವಣೆ ಆದೇಶ ಬಂದಿದೆ.
ಇದನ್ನೂ ಓದಿ: ನಾಯಿಗಳ ಸಂತಾನ ನಿಯಂತ್ರಣ ಕಾನೂನು ಜಾರಿಗೆ ಮೀನಮೇಷ; ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ
ಸುಮಾರು 13 ವರ್ಷಗಳಿಂದ ಬಾಲೆಹೊಸೂರು ಶಾಲೆಯಲ್ಲಿ ಶಿಕ್ಷಕ ಮಹಾವೀರ ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ನೆಚ್ಚಿನ ಶಿಕ್ಷಕರು ವರ್ಗಾವಣೆ ಆಗಿದ್ದಾರೆ ಅನ್ನೋ ವಿಷಯ ತಿಳಿದು ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದರು. ವಿದ್ಯಾರ್ಥಿನಿಯರ ಪ್ರೀತಿಗೆ ಶಿಕ್ಷಕ ಕೂಡಾ ಕಣ್ಣೀರು ಹಾಕಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ನೇತೃತ್ವದಲ್ಲಿ ಶಿಕ್ಷಕ ಮಹಾವೀರಗೆ ಬೀಳ್ಕೋಡುಗೆ ನೀಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.