ಬೆಂಗಳೂರು: ಸಿದ್ದರಾಮೋತ್ಸವ (Siddaramotsava) ಯಶಸ್ಸು ಹಾಗೂ ಸದನದ ಕಲಾಪ ವೇಳೆ ಪೂರ್ಣಪ್ರಮಾದಲ್ಲಿ ಶಾಸಕರು ತೊಡಗಿಕೊಂಡ ಹಿನ್ನೆಲೆ ಸೆ.26ರಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಭೋಜನಕೂಟ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಕೊಡವ ಸಮಾಜ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2 ಸಾವಿರ ಜನರಿಗೆ ಭೋಜನಕೂಟಕ್ಕೆ ಆಹ್ವಾನ ನೀಡಿದ್ದು, ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳಿಗೂ ಬೋಜನಕೂಟಕ್ಕೆ ಆಹ್ವಾನ ನೀಡಲಾಗಿದೆ.
ಸಂಸದ ಪಿ.ಸಿ.ಗದ್ದಿಗೌಡರ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿರುವ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್ನ್ನು ಭೇಟಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಗದ್ದಿಗೌಡರ್ ಭೇಟಿ ಮಾಡಿದ್ದು, ಹೂಗುಚ್ಚ ನೀಡಿ ಕೆಲ ಹೊತ್ತು ಜೊತೆ ಕೂತು ಮಾತಾಡಿದರು. ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
40 ಪರ್ಸೆಂಟ್ ಕಮಿಷನ್ ವಿಚಾರ ಪ್ರಸ್ತಾಪ ಸಿದ್ಧರಾಮಯ್ಯ ಮನವಿ
ವಿಧಾನಸಭೆಯಲ್ಲಿ 40 ಪರ್ಸೆಂಟ್ ಕಮಿಷನ್ ಚರ್ಚೆಗೆ ಅವಕಾಶ ಕೊಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದು, ನಿಲುವಳಿ ಚರ್ಚೆಗೆ ಅವಕಾಶ ಇಲ್ಲ ಎಂದ ಸ್ಪೀಕರ್ ಕಾಗೇರಿ ಹೇಳಿದರು. ಇದು ಗಂಭೀರ ವಿಚಾರವಾಗಿದೆ ಎಂದ ಸಿದ್ದರಾಮಯ್ಯ, ಪ್ರಧಾನಮಂತ್ರಿ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಚರ್ಚೆಗೆ ಸರ್ಕಾರ ಸಿದ್ಧ, ಟೈಮ್ ನಿಗದಿ ಮಾಡಿ ಎಂದು ಸಿಎಂ ಹೇಳಿದ್ದು, ಭ್ರಷ್ಟಾಚಾರ ನಿಗ್ರಹ ಮಾಡಲು ಚರ್ಚೆ ಆಗಲಿ. ಸೂಕ್ತ ರೀತಿಯಲ್ಲಿ ನಿಲುವಳಿ ಮಂಡನೆ ಮಾಡದ ಕಾರಣ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ನಮ್ಮ ಬೇಡಿಕೆಯನ್ನು ತಿರಸ್ಕರಿಸಲು ನಿಮಗೆ ಬೇಕಾದಂತೆ ವಾದ ಮಾಡುತ್ತಿರಿ ಎಂದು ಮಾಧುಸ್ವಾಮಿ ಬಗ್ಗೆ ಸಿದ್ದರಾಮಯ್ಯ ಮುನಿಸು ತೋರಿದರು. ಈ ವೇಳೆ ಇಬ್ಬರದ್ದು ಒಂದೇ ಗರಡಿ ಅಲ್ವಾ ಸರ್ ಎಂದ ಸಿಎಂ ಬೊಮ್ಮಾಯಿ ಪರಿಸ್ಥಿತಿ ತಿಳಿಗೊಳಿಸಿದರು. ನೀವೇನು ಮಾಡುತ್ತೀರಿ ಎಂದು ಅವರಿಗೆ ಗೊತ್ತು ಅವರೇನು ಮಾಡುತ್ತಾರೆ ಎಂದು ನಿಮಗೆ ಗೊತ್ತು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.