
ಬೆಂಗಳೂರು, ಆಗಸ್ಟ್ 28: ಬೆಂಗಳೂರಿನ (Bengaluru) ಶಿವಾಜಿನಗರದ ರಸೆಲ್ ಮಾರ್ಕೆಟ್ ರಸ್ತೆ ಸೇರಿಂದತೆ ಇನ್ನೀತರೆ ರಸ್ತೆಗಳಲ್ಲಿ ರವಿವಾರ (ಸೆ.08) ರಂದು ವಾಹನ ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸೂಚನೆ ಹೊರಡಿಸಿದ್ದಾರೆ. ಹಾಗಿದ್ದರೆ ಯಾವ್ಯಾವ ರಸ್ತೆಯಲ್ಲಿ, ಯಾವ್ಯಾವ ದಿನಾಂಕದಂದು ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ? ಇಲ್ಲಿದೆ ಮಾಹಿತಿ.
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ (ಸೆ.08) ರಂದು ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮವಿದೆ. ಹೀಗಾಗಿ ರವಿವಾರ ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 30 ದಿನ ಸಂಚಾರ ಬಂದ್, ಮಾರ್ಗ ಬದಲಾವಣೆ ಇಲ್ಲಿದೆ
ರಸಲ್ ಮಾರ್ಕೆಟ್ ಸುತ್ತ-ಮುತ್ತ – ಬ್ರಾಡ್ ವೇರಸ್ತೆ – ಮೀನಾಕ್ಷಿಕೋಯಿಲ್ ಸ್ಟ್ರೀಟ್ – ಸೆಂಟ್ರಲ್ ಸ್ಟ್ರೀಟ್ – ಶಿವಾಜಿ ರಸ್ತೆ ಬಾಳೇ ಕುಂದ್ರಿ ವೃತ್ತದಿಂದ ಚಂದ್ರಿಕಾ ಹೋಟೆಲ್ ವರೆಗೂ (ಕನ್ನಿಂಗ್ ಹ್ಯಾಮ್ ರಸ್ತೆ) – ಯೂನಿಯನ್ ಸ್ಟ್ರೀಟ್ ಇನ್ ಫೆಂಟ್ರಿರಸ್ತೆ – ಕಬ್ಬನ್ರಸ್ತೆ ಲೇಡಿಕರ್ಜನ್ ರಸ್ತೆ ವಿ.ಎಸ್.ಎನ್ರಸ್ತೆ ಪ್ಲೇನ್ ಸ್ಪೀಟ್ – ಎಂ.ಜರಸ್ತೆ.
ಕಾಮರಾಜರಸ್ತೆ ಪಾರ್ಕಿಂಗ್ ಸ್ಥಳದಲ್ಲಿ (ಸರ್ವೀಸ್ ರಸ್ತೆ ಆರ್ಮಿ ಸ್ಕೂಲ್ ಮುಂಭಾಗ) ಸಫೀನಾ ಪ್ರಾಜಾ ಮುಂಭಾಗ (ಮೈನ್ ಗಾರ್ಡನ್ ರಸ್ತೆ) ಜೆಸ್ಮಾ ಭವನ ರಸ್ತೆ – ಆರ್.ಬಿ.ಎ.ಎನ್.ಎಮ್.ಎಸ್ ಮೈದಾನ (ಗಂಗಾಧರ ಚೆಟ್ಟಿ ರಸ್ತೆ ) ಮುಸ್ಲಿಂ ಆರ್ಫೆನೇಜ್ ಡಿಕನ್ಸನ್ ರಸ್ತೆ (ಹಸನತ್ ಕಾಲೇಜ್ ಹತ್ತಿರ), ರಮಡಾ ಹೊಟೇಲ್ (ಓಲ್ಡ್ ಕಾಂಗ್ರೇಸ್ ಕಛೇರಿ) ಪ್ಲೇನ್ ಸ್ಟ್ರೀಟ್.
Published On - 7:30 am, Sat, 7 September 24