ಬೆಂಗಳೂರು, ಆ.17: ತುಂಗಭದ್ರಾ ಡ್ಯಾಂನ ಕ್ರಸ್ಟಗೇಟ್ 19 ಕೊಚ್ಚಿಕೊಂಡು ಹೋಗಿದ್ದರಿಂದ ಕಳೆದ ಆಗಸ್ಟ್ 10 ರಿಂದ ನಿರಂತರವಾಗಿ ನೀರು ಹರಿದು ವ್ಯರ್ಥವಾಗಿ ಹೋಗುತ್ತಿತ್ತು. ಇದೀಗ ಯಶಸ್ವಿಯಾಗಿ ಗೇಟ್ ದುರಸ್ತಿ ಕೆಲಸ ಮುಗಿಸಿದ್ದು, ನೀರನ್ನು ಬಂದ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಮಾತನಾಡಿ, ‘ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಎಲ್ಲರೂ ಒಟ್ಟಾಗಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ಎಂದರು.
ರಾಜ್ಯದ ತುಂಗಭದ್ರಾ ಅಣೆಕಟ್ಟಿನಲ್ಲಿ 19 ನೇ ಗೇಟ್ ಚೈನ್ ಕಟ್ ಆಗಿ 35 ಟಿಎಂಸಿ ನೀರು ಲಾಸ್ ಆಗಿದೆ. ನಾವೆಲ್ಲ ಗಾಬರಿ ಆಗಿದ್ದೆವು, ದೊಡ್ಡ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇತ್ತು. ಇನ್ನು ನಾವೆಲ್ಲ ಆತಂಕದಲ್ಲಿ ಇದ್ದೆವು, ಸ್ಥಳೀಯ ಅಧಿಕಾರಿಗಳು, ಸಚಿವರು ಹಾಗೂ ಶಾಸಕರು ನಿಂತು ಕೆಲಸ ಮಾಡಿದ್ದಾರೆ. ಸೆಟ್ ಆಫ್ ಡಿಸೈನ್ ಡಾಕ್ಯುಮೆಂಟ್ ನಮ್ಮ ಬಳಿ ಇತ್ತು. ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರ ಹತ್ತಿರ ಚರ್ಚೆ ಮಾಡಿ ರಿಸ್ಟೋರ್ ಮಾಡಲು ಮುಂದಾದೆವು. ರಾಜ್ಯ ಸರ್ಕಾರ, ರೈತರ ಪರವಾಗಿ ಎಲ್ಲರೂ ದುಡಿದಿದ್ದಾರೆ. ಇದೀಗ ಕ್ರೆಸ್ಟ್ ಗೇಟ್ ಅಳವಡಿಸಿದ್ದಾರೆ. ಈ ಮೂಲಕ ನಮಗೆ ಇದ್ದ ಭಯವನ್ನು ದೂರ ಮಾಡಿದ್ದಾರೆ.
ಮುಂದೆ ಅದಕ್ಕೆ ಏನು ಬೇಕೋ ಅದನ್ನ ನಾವು ಮಾಡುತ್ತೇವೆ. ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವಿದೆ. ದುರಸ್ತಿ ಕೆಲಸದಲ್ಲಿ ಭಾಗಿಯಾದ ಕನ್ನಯ್ಯ ನಾಯ್ಡು ಮತ್ತು ತಂಡಕ್ಕೆ ಸರ್ಕಾರದಿಂದ ಅಭಿನಂದನೆಗಳು. ಹಗಲೂ ರಾತ್ರಿ ಕೆಲಸ ಮಾಡಿ ರಾಜ್ಯಕ್ಕೆ ದೊಡ್ಡ ಗೌರವ ಕೊಟ್ಟಿದ್ದಾರೆ. ಅವರಿಗೆ ಸತ್ಕಾರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಗೇಟ್ ದುರಸ್ತಿ ಕೆಲಸ ಯಶಸ್ವಿ ಬೆನ್ನಲ್ಲೇ ಕೈ ಮುಖಂಡ ಶ್ರೀನಿವಾಸ ರೆಡ್ಡಿ ಮೊಬೈಲ್ಗೆ ಕರೆ ಮಾಡಿ ಕನ್ನಯ್ಯನಾಯ್ಡುಗೆ ಧನ್ಯವಾದ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಗೇಟ್ ನಂಬರ್ 19 ಕ್ಕೆ ಬದಲಿಯಾಗಿ 5 ತಡೆ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಈ ಸವಾಲಿನ ಕಾರ್ಯಕ್ಕೆ ಸ್ಥಳದಲ್ಲೇ ಮೊಕ್ಕಾಂಹೂಡಿ ಸೂಕ್ತ ಮಾರ್ಗದರ್ಶನ ನೀಡಿದ ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರಿಗೆ ಹಾಗೂ ಈ ಕಾರ್ಯದಲ್ಲಿ ಅವಿರತ ಶ್ರಮಿಸಿದ ಎಲ್ಲಾ ಇಂಜಿನಿಯರರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ, ಕಾರ್ಮಿಕರಿಗೆ ನಾಡಿನ ರೈತರ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಗೇಟ್ ನಂಬರ್ 19 ಕ್ಕೆ ಬದಲಿಯಾಗಿ 5 ತಡೆ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಈ ಸವಾಲಿನ ಕಾರ್ಯಕ್ಕೆ ಸ್ಥಳದಲ್ಲೇ ಮೊಕ್ಕಾಂಹೂಡಿ ಸೂಕ್ತ ಮಾರ್ಗದರ್ಶನ ನೀಡಿದ ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರಿಗೆ ಹಾಗೂ ಈ ಕಾರ್ಯದಲ್ಲಿ ಅವಿರತ ಶ್ರಮಿಸಿದ… pic.twitter.com/MlKFIzt8Ve
— Siddaramaiah (@siddaramaiah) August 17, 2024
ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಾಡಿನ ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದೇವೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ನಾಡಿನ ಅನ್ನದಾತರು ಬಹುದೊಡ್ಡ ಸಂಕಷ್ಟದಿಂದ ಪಾರಾದದ್ದು ನನಗೆ ಖುಷಿ ನೀಡಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Sat, 17 August 24