ಶಾಲೆಗಳಿಗೆ ಇನ್ನೂ ತಲುಪಿಲ್ಲ ಪಠ್ಯಪುಸ್ತಕಗಳು; ಇಂದಿನಿಂದ ಶಾಲೆ ಆರಂಭವಾದರೂ ತರಗತಿ ನಡೆಯೋದು ಡೌಟ್

| Updated By: ಆಯೇಷಾ ಬಾನು

Updated on: May 29, 2024 | 1:36 PM

ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಅಂತಾ ಇಲಾಖೆ ಹೇಳಿತ್ತು. ಆದರೆ ಇನ್ನು ಶಾಲೆಗಳಿಗೆ ಪಠ್ಯ ಪುಸ್ತಕಗಳು ತಲುಪಿಲ್ಲ. ಹೀಗಾಗಿ ಇಂದಿನಿಂದ ಶಾಲೆ ಆರಂಭವಾದ್ರೂ ಕಂಪ್ಲೀಟ್ ತರಗತಿಗಳು ನಡೆಯೋದು ಡೌಟ್ ಎನ್ನಲಾಗುತ್ತಿದೆ.

ಶಾಲೆಗಳಿಗೆ ಇನ್ನೂ ತಲುಪಿಲ್ಲ ಪಠ್ಯಪುಸ್ತಕಗಳು; ಇಂದಿನಿಂದ ಶಾಲೆ ಆರಂಭವಾದರೂ ತರಗತಿ ನಡೆಯೋದು ಡೌಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ.29: ರಾಜ್ಯದಲ್ಲಿ ಇಂದಿನಿಂದ ಶಾಲೆಗಳು (School Reopen) ಆರಂಭವಾಗಿವೆ. ಆದರೆ ಶಾಲೆ ಶುರುವಾದ್ರೂ ತರಗತಿಗಳು ನಡೆಯೋದೆ ಡೌಟ್ ಆಗಿದೆ. ಏಕೆಂದರೆ ಶಾಲೆ ಶುರುವಾದರೂ ಇನ್ನು ಕೂಡ ವಿದ್ಯಾರ್ಥಿಗಳ ಕೈಗೆ ಪಠ್ಯ ಪುಸ್ತಕಗಳು ಸೇರಿಲ್ಲ. ಮಕ್ಕಳ ಪಠ್ಯ ಪುಸ್ತಕಕ್ಕೆ ಕಳೆದ 6 ತಿಂಗಳ ಹಿಂದೆಯೇ ಶಾಲೆಗಳು ಹಣ ಕಟ್ಟಿವೆ. ಆದರೂ ಪಠ್ಯ ಪುಸ್ತಕಗಳು ಬಂದಿಲ್ಲ. ಹೀಗಾಗಿ ಶಾಲೆ ಶುರುವಾದರೂ ಮಕ್ಕಳಿಗೆ ತರಗತಿಗಳು ನಡೆಯೋದು ಡೌಟ್ ಆಗಿದೆ.

ಶಾಲೆಗಳಿಗೆ ಇನ್ನೂ ತಲುಪಿಲ್ಲ ಪಠ್ಯಪುಸ್ತಕಗಳು

ಕೇವಲ 50% ರಿಂದ 60% ಪಠ್ಯಪುಸ್ತಕಗಳನ್ನ ಮಾತ್ರ ಶಿಕ್ಷಣ ಇಲಾಖೆ ಶಾಲೆಗಳಿಗೆ ನೀಡಿದೆ. ಉಳಿದ ಪಠ್ಯ ಪುಸ್ತಕಗಳು ಬಂದಿಲ್ಲ. ಪಠ್ಯ ಪುಸ್ತಕ ಇಲ್ಲದೆ ತರಗತಿ ನಡೆಸುವುದು ಹೇಗೆ ಎಂದು ಶಾಲೆಗಳು ಹಾಗೂ ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಅಂತಾ ಇಲಾಖೆ ಹೇಳಿತ್ತು. ಆದರೆ ಇನ್ನು ಶಾಲೆಗಳಿಗೆ ಪಠ್ಯ ಪುಸ್ತಕಗಳು ತಲುಪಿಲ್ಲ. ಹೀಗಾಗಿ ಇಂದಿನಿಂದ ಶಾಲೆ ಆರಂಭವಾದ್ರೂ ಕಂಪ್ಲೀಟ್ ತರಗತಿಗಳು ನಡೆಯೋದು ಡೌಟ್ ಎನ್ನಲಾಗುತ್ತಿದೆ. ಶಿಕ್ಷಣ ಇಲಾಖೆ ನಡೆಗೆ ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ: ಆದೇಶ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಕಲಬುರಗಿ ಚಲೊ ಅಭಿಯಾನ

ಶಾಲೆಗಳ ಆರಂಭದ ದಿನವೇ ಪೋಷಕರ ಗಲಾಟೆ

ಬೆಂಗಳೂರಿನ ನಾಗಸಂದ್ರ ಬಳಿಯ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಗಲಾಟೆ ನಡೆದಿದೆ. ಬೆಳ್ಳಂಬೆಳಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಪೂರ್ಣ ಪ್ರಜ್ಞಾ ಶಾಲೆಯ ಮುಂದೆ ಪೋಷಕರು ಧರಣಿ ನಡೆಸುತ್ತಿದ್ದಾರೆ. ಹಾಘೂ ಕಿರುಕುಳ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ಬೇಕಾಬಿಟ್ಟಿ ಫೀಸ್ ವಸೂಲಿ ಮಾಡ್ತಿದೆ. ಪೋಷಕರಿಗೆ ಆಡಳಿತ ಮಂಡಳಿ ಮಾರ್ಯದೆ ನೀಡ್ತಿಲ್ಲ. ಇಲ್ಲಿಯವರೆಗೆ ಪೋಷಕರ ಜೊತೆ ಮೀಟಿಂಗ್ ಮಾಡಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ವಾಗ್ದಾಳಿ ನಡೆಸಿದ್ದಾರೆ. ಇನ್ನು ಶಾಲಾ ಶುಲ್ಕ ಕಟ್ಟದ ಮಕ್ಕಳನ್ನ ಕೂಡಿ ಹಾಕಿದ್ದಾರೆ ಎಂದು ಪೋಷಕರು ಶಾಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಗಲಾಟೆ ಬಳಿಕ ಕೂಡಿ ಹಾಕಿದ್ದ ಮಕ್ಕಳನ್ನ ತರಗತಿಗೆ ಕಳಿಸಲಾಗಿದೆ ಎನ್ನಲಾಗುತ್ತಿದೆ.

ಕೊವಿಡ್ ಸಮಯದಲ್ಲಿ ಯಾರು ಕೂಡ ಎರಡು ವರ್ಷ ಶುಲ್ಕ ಕಟ್ಟಿಲ್ಲ. ಆದರೆ 2019 ರಲ್ಲಿ ಶೇ 23% ಶುಲ್ಕ ಹೆಚ್ಚಳ ಮಾಡಿದ್ದಾರೆ. ನಾವು ಕೊವಿಡ್ ಟೈಮ್ ನಲ್ಲಿ 50 % ಶುಲ್ಕ ಕಟ್ಟಿದ್ದೇವೆ. ಕೊವಿಡ್ ತರಗತಿಯೇ ನಡೆದಿಲ್ಲ ಆದ್ರೂ 50% ಕಟ್ಟಿದ್ದೇವೆ ಅಂತಾ ಪೋಷಕರು ಗಲಾಟೆ ಮಾಡುತ್ತಿದ್ದಾರೆ ಎಂದು ವಾಡಿಯಾ ಪೂರ್ಣ ಪ್ರಜ್ಞೆ ಶಾಲೆಯ ಆಡಳಿತ ಮಂಡಳಿಯ ಜಂಟಿ ನಿರ್ದೇಶಕ ಕೃಷ್ಣ ಅವರು ತಿಳಿಸಿದರು. ನಾವು ಯಾವುದೇ ಮಗುವಿಗೆ ತೊಂದರೆ ಮಾಡಿಲ್ಲ. ನಾವು ಶುಲ್ಕ ಏರಿಕೆ ಮಾಡಿಲ್ಲ. ನಮ್ಮ ಶಾಲೆಯಲ್ಲಿ 60 ಸಾವಿರ ಮಾತ್ರ ಶುಲ್ಕ ಇದೆ. ನಾವು ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದೇವೆ. ಪೋಷಕರು ಶುಲ್ಕ ಕಟ್ಟುತ್ತಿಲ್ಲ. ನಮ್ದು ಅನುದಾನ ರಹಿತವಾದ ಶಾಲೆ. ಶುಲ್ಕ ಕಟ್ಟುವಂತೆ ಮನವಿ ಮಾಡಿದ್ದೇವೆ. ಕೊವಿಡ್ ಟೈಮ್ ನಲ್ಲಿ ಪೋಷಕರು ಶುಲ್ಕ ಕಟ್ಟಿಲ್ಲ. 150 ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ