AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore rains: ಬಿಬಿಎಂಪಿ ಬಿಡುಗಡೆಗೊಳಿಸಿರುವ ದಾಖಲೆಯ ಪ್ರಕಾರ ದೊಡ್ಡ ಅತಿಕ್ರಮಣದಾರರು ಇವರೇ! ಪಟ್ಟಿ ಸಮೇತ ಸಮಗ್ರ ವರದಿ ಇಲ್ಲಿದೆ

KIADB: 1904 ರ ನಕ್ಷೆಯನ್ನು ಆಧರಿಸಿದ ಡ್ರೈನ್ ಸ್ಕೆಚ್ ಬಗ್ಗೆ ಗೊಂದಲದಿಂದಾಗಿ ಬಿಬಿಎಂಪಿ ಇದುವರೆಗೆ ದೊಡ್ಡ ಬಿಲ್ಡರ್‌ಗಳ ಬಗ್ಗೆ ಮೃದುವಾಗಿದೆ. " ಕೆಲವು ಬಿಲ್ಡರ್‌ಗಳು ಮತ್ತು ಟೆಕ್ ಪಾರ್ಕ್‌ಗಳು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಚರಂಡಿಗಳ ಉದ್ದಕ್ಕೂ ಇರುವ ಭೂಮಿಯನ್ನು ಪಡೆದಿದ್ದರಿಂದ ಅಲ್ಲಿ ಸ್ಪಷ್ಟತೆಯ ಕೊರತೆ ಇತ್ತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Bangalore rains: ಬಿಬಿಎಂಪಿ ಬಿಡುಗಡೆಗೊಳಿಸಿರುವ ದಾಖಲೆಯ ಪ್ರಕಾರ ದೊಡ್ಡ ಅತಿಕ್ರಮಣದಾರರು ಇವರೇ! ಪಟ್ಟಿ ಸಮೇತ ಸಮಗ್ರ ವರದಿ ಇಲ್ಲಿದೆ
ಬಿಬಿಎಂಪಿ ಬಿಡುಗಡೆಗೊಳಿಸಿರುವ ದಾಖಲೆಯ ಪ್ರಕಾರ ದೊಡ್ಡ ಅತಿಕ್ರಮಣದಾರರು ಇವರೇ! ಪಟ್ಟಿ ಸಮೇತ ಸಮಗ್ರ ವರದಿ ಇಲ್ಲಿದೆ
TV9 Web
| Updated By: ಸಾಧು ಶ್ರೀನಾಥ್​|

Updated on: Sep 13, 2022 | 3:58 PM

Share

ಬೆಂಗಳೂರಿನ (Bengaluru) ರೇನ್‌ಬೋ ಡ್ರೈವ್ ಲೇಔಟ್‌ನಲ್ಲಿ ರಾಜಕಾಲುವೆ ಅತಿಕ್ರಮಣದ ಪರಿಣಾಮ ಪ್ರಮುಖ ಟೆಕ್ ಪಾರ್ಕ್‌ಗಳು, ಐಷಾರಾಮಿ ವಿಲ್ಲಾಗಳು ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿ ನಿವಾಸಿಗಳನ್ನು ರಕ್ಷಿಸಲು ದೋಣಿಗಳು ಬೀದಿಗಿಳಿದಿರುವುದು ಸಾಮಾಜಿಕ ಜಾಲತಾಣದಿಂದ ಇಡೀ ಜಗತ್ತಿಗೆ ತಿಳಿದಿದೆ. ಇದು ಕಳೆದ ವಾರ ಬೆಂಗಳೂರಿಗರನ್ನು ಅತಿ ಕೆಟ್ಟದ್ದಾಗಿ ಕಾಡಿದ ಮುಂಗಾರು ಮಳೆಯ ಭೀಕರ ದೃಶ್ಯಾವಳಿಗಳು.

ಮಾರ್ಕ್ಯೂ ಟೆಕ್ ಪಾರ್ಕ್‌ಗಳು ಮತ್ತು ಪ್ಲಶ್ ಗೇಟೆಡ್ ಸಮುದಾಯಗಳು ವಾಸಿಸುವ ಬೆಂಗಳೂರಿನ ಐಟಿ ಹಬ್‌ನಲ್ಲಿ ಮಳೆ ನೀರಿನ ಚರಂಡಿಗಳು, ರಾಜ ಕಾಲುವೆ ಅತಿಕ್ರಮಣದಾರರಲ್ಲಿ (drain encroachers) ಪ್ರಮುಖವಾಗಿವೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಶ್ರೀಮಂತರು ಮತ್ತು ಶಕ್ತಿಶಾಲಿಗಳ ಬಗ್ಗೆ ಮೃಧು ಧೋರಣೆ ತೋರುತ್ತಿದ್ದಾರೆ ಎಂಬ ಆರೋಪ ಗಾಢವಾಗಿ ಕೇಳಿಬಂದಿದೆ. ಆದರೆ, ವಿನಾಶಕಾರಿ ಪ್ರವಾಹದ ಮೂಲ ಕಾರಣವನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಬಿಗಿಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆದೇಶಿಸಿದ ನಂತರ ಈಗ ಇಂತಹ ಅತಿಕ್ರಮಣಗಳನ್ನು ದೊಡ್ಡ ಮಟ್ಟದಲ್ಲಿ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಈ ಮಧ್ಯೆ, ಈ ರಾಜ ಕಾಲುವೆ ಮತ್ತು ಚರಂಡಿಗಳು ಅತಿಕ್ರಮಣವಾಗಿದ್ದು, ಅಲ್ಲೆಲ್ಲಾ ಹೂಳು ಶೇಖರಣೆಯಾಗಿರುವುದೇ ಪ್ರವಾಹಕ್ಕೆ ದೊಡ್ಡ ಕಾರಣ ಎನ್ನುತ್ತಾರೆ ತಜ್ಞರು.

ಬಿಬಿಎಂಪಿ ಬಿಡುಗಡೆಗೊಳಿಸಿರುವ ದಾಖಲೆಯ ಪ್ರಕಾರ ಅತಿಕ್ರಮಣದಾರರಲ್ಲಿ ಬಾಗ್ಮನೆ ಟೆಕ್ ಪಾರ್ಕ್ ಸೇರಿದೆ. ಪೂರ್ವ ಸ್ವರ್ಗ, ರೇನ್‌ಬೋ ಡ್ರೈವ್, ವಿಪ್ರೋ, RMZ ಇಕೋಸ್ಪೇಸ್, ​​ಗೋಪಾಲನ್ ಎಂಟರ್‌ಪ್ರೈಸಸ್, ದಿವ್ಯಾ ಸ್ಕೂಲ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ನ್ಯೂ ಹೊರೈಜನ್ ಕಾಲೇಜ್, ಆದರ್ಶ್ ಡೆವಲಪರ್ಸ್, ಎಪ್ಸಿಲಾನ್, ದಿವ್ಯಶ್ರೀ 77, ಪ್ರೆಸ್ಟೀಜ್ ಗ್ರೂಪ್, ಸಲಾರ್ಪುರಿಯಾ ಗ್ರೂಪ್ ಮತ್ತು ನಲಪಾಡ್ ಸಂಸ್ಥೆ ಪ್ರಮುಖವಾಗಿವೆ.

ಈ ಸಂಸ್ಥೆಗಳು ಮಹದೇವಪುರ, ಜುನ್ನಸಂದ್ರ, ದೊಡ್ಡಕನ್ನಹಳ್ಳಿ, ಹೂಡಿ, ಬೆಳ್ಳಂದೂರು, ಸೊಣ್ಣೆಹಳ್ಳಿ, ಆರ್ ನಾರಾಯಣಪುರ, ರಾಮಗೊಂಡನಹಳ್ಳಿ, ಕಾಡುಬೀಸನಹಳ್ಳಿ, ದೇವರಬೇಸನಹಳ್ಳಿ, ಯಮಲೂರು, ಮಾರತ್ತಹಳ್ಳಿ ಮತ್ತು ಚಲ್ಲಘಟ್ಟ ಮುಂತಾದ ಕಡೆಗಳಲ್ಲಿ 10 ಗುಂಟೆಯಿಂದ 50 ಗುಂಟೆಗಳನ್ನು ಅತಿಕ್ರಮಿಸಿಕೊಂಡಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಕೆಲವರು 13 ವಿವಿಧ ಸರ್ವೆ ನಂಬರ್‌ಗಳಲ್ಲಿನ ರಾಜಕಾಲುವೆ ಮತ್ತು ಮಳೆನೀರು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಕೋಸ್ಪೇಸ್ ಬಳಿ ನೀರಿನಿಂದ ತುಂಬಿರುವ ಹೊರ ವರ್ತುಲ ರಸ್ತೆ (ORR) ಸೇರಿದಂತೆ ಕೆಲವು ಐಷಾರಾಮಿ ವಿಲ್ಲಾಗಳು ಮುಳುಗಡೆಯಾಗಿವೆ. ಒಂದು ಕಾಲದಲ್ಲಿ ಮಳೆನೀರು ಚರಂಡಿ ಕಾಲುವೆಗಳಾಗಿದ್ದ (stormwater drains) ಜಮೀನುಗಳಲ್ಲಿ ವಿಲ್ಲಾ, ಅಪಾರ್ಟ್​​ಮೆಂಟ್​, ಆಫೀಸ್​ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಈ ಮಧ್ಯೆ ಬಿಬಿಎಂಪಿಯು ಖಾಲಿ ಇರುವ ಜಾಗಗಳು ಅಥವಾ ತಾತ್ಕಾಲಿಕ ಕಟ್ಟಡಗಳು ಬಂದಿರುವ ಸ್ಥಳಗಳಲ್ಲಿ ದೊಡ್ಡ ದೊಡ್ಡ ರಾಜಕಾಲುವೆಗಳನ್ನು ಮರುನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ. ಇದೇ ವೇಳೆ ಬಿಬಿಎಂಪಿಗೆ ಸೇರಿದ ಆಸ್ತಿಯಲ್ಲಿ ವಾಸವಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 104 (ಅನಧಿಕೃತವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಜಾಗ ತೆರವು) ಅಡಿಯಲ್ಲಿ ನೋಟಿಸ್ ನೀಡಲು ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಅತಿಕ್ರಮಣ ತೆರವು ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1904 ರ ನಕ್ಷೆಯನ್ನು ಆಧರಿಸಿದ ಡ್ರೈನ್ ಸ್ಕೆಚ್ ಬಗ್ಗೆ ಗೊಂದಲದಿಂದಾಗಿ ಬಿಬಿಎಂಪಿ ಇದುವರೆಗೆ ದೊಡ್ಡ ಬಿಲ್ಡರ್‌ಗಳ ಬಗ್ಗೆ ಮೃದುವಾಗಿದೆ. ” ಕೆಲವು ಬಿಲ್ಡರ್‌ಗಳು ಮತ್ತು ಟೆಕ್ ಪಾರ್ಕ್‌ಗಳು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಚರಂಡಿಗಳ ಉದ್ದಕ್ಕೂ ಇರುವ ಭೂಮಿಯನ್ನು ಪಡೆದಿದ್ದರಿಂದ ಅಲ್ಲಿ ಸ್ಪಷ್ಟತೆಯ ಕೊರತೆ ಇತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಿಬಿಎಂಪಿಗೆ ತಡೆಯಾಗಿರುವ ಎಲ್ಲಾ ಅತಿಕ್ರಮಣಗಳನ್ನು ತೆಗೆದುಹಾಕಲು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ ಎಂದು deccanherald ವರದಿ ಮಾಡಿದೆ

ಈ ಮಧ್ಯೆ, ತಮ್ಮ ಕಂಪನಿಗೆ ಬಿಬಿಎಂಪಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ವಿಪ್ರೋ ವಕ್ತಾರರು ತಿಳಿಸಿದ್ದಾರೆ. “ಬಿಬಿಎಂಪಿಯ ಪ್ರತಿಯೊಂದು ಕಾನೂನಿಗೂ ವಿಪ್ರೋ ಬದ್ಧವಾಗಿದೆ, ಎಲ್ಲಾ ವಿಪ್ರೋ ಕಟ್ಟಡಗಳು ಪೂರ್ವ ಅನುಮೋದಿತ ಯೋಜನೆಗಳ ಪ್ರಕಾರವೇ ಇದೆ ಎಂದು ಆ ವಕ್ತಾರರು ಹೇಳಿದ್ದಾರೆ.

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!