ಆನೇಕಲ್: ತಾಲೂಕಿನ ಮಾಯಸಂದ್ರದ ಧರ್ಮರಾಯ ದ್ರೌಪದಮ್ಮ ದೇವಸ್ಥಾನ (Temple) ಕ್ಕೆ ನಟ ನಿಖಿಲ್ ಕುಮಾರಸ್ವಾಮಿಗೆ ಪ್ರವೇಶ ನಿರ್ಬಂಧಿಸಿದ್ದು, ದೇವಸ್ಥಾನ ಹೊಸ್ತಿಲ್ಲಲ್ಲೇ ಕೈ ಮುಗಿದು ವಾಪಾಸ್ ಆಗಿದ್ದಾರೆ. ಇದೇ ತಿಂಗಳ 14ನೇ ತಾರಿಖು ನಡೆದ ಕರಗ ಮಹೋತ್ಸವ ವಿಡಿಯೋದಲ್ಲಿ ಇದು ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ದೇವಸ್ಥಾನದ ಮುಂಭಾಗದಲ್ಲೇ ಟೇಬಲ್ ಅಡ್ಡ ಇಡಲಾಗಿತ್ತು. ಕೈ ಮುಗಿದು ಕಾಣಿಕೆ ಅರ್ಪಿಸಿದ ನಿಖಿಲ್, ಯಾಕೆ ದೇವಸ್ಥಾನದಲ್ಲಿ ಬಿಟ್ಟಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಒಳಗೆ ಹೋಗಲು ಅವಕಾಶ ಇಲ್ಲ ಎಂದು ಜೊತೆಗಾರರು ಮನವಿರಿಕೆ ಮಾಡಿದ್ದಾರೆ. ಸ್ವಾಜಾತಿ ಬಿಟ್ಟು ಬೇರೆಯವರಿಗೆ ದೇವಸ್ಥಾನ ಎಂಟ್ರಿ ಇಲ್ಲ ಅಂತ ಕೆಲವರು ವಾದ ಮಾಡಿದ್ದಾರೆ.
ಈ ಕುರಿತಾಗಿ ನಟ ನಿಖಿಲ್ ಕುಮಾರ್ ಸ್ವಾಮಿ ಟಿವಿ 9ಗೆ ಸ್ಪಷ್ಟನೆ ನೀಡಿದ್ದು, ಆನೇಕಲ್ನಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಆರಾಮವಾಗಿ ದೇವಸ್ಥನದ ಒಳಗೆ ಹೋಗಿ ಪೂಜೆ ಮಾಡಿಬಂದೆ. ಯಾವುದೇ ಗೊಂದಲ ಆಗಿಲ್ಲ. ಚೆನ್ನಾಗಿ ಪೂಜೆ ಆಗಿದೆ, ನನಗೆ ಆ ರೀತಿಯ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ರಾಜಕಾರಣಿಗಳೆನ್ನು ನಾವು ದೇವಾಸ್ಥಾನದ ಒಳಗಡೆ ಬಿಡಲ್ಲ. ರಾಮಲಿಂಗ ರೆಡ್ಡಿಯವರಿಗೂ ಬಿಟ್ಟಿಲ್ಲ, ನಿಖಿಲ್ ಕುಮಾರ್ ಸ್ವಾಮಿಯವರುಗೂ ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ವ್ಯಕ್ತಿಗಳಿಗೆ ದೇವಸ್ಥಾನ ಪ್ರವೇಶ ಇಲ್ಲ. ಕರಗ ಸಂದರ್ಭದಲ್ಲಿ ಅರ್ಚಕರಿಗೆ ಮಾತ್ರ ಪ್ರವೇಶ. ಅರ್ಚಕರನ್ನು ಹೊರತು ಪಡಿಸಿ ಯಾರನ್ನೂ ಬಿಡಲ್ಲ. ಪೂರ್ವಜರಿಂದಲೂ ಸಂಪ್ರದಾಯ ಇದೆ. ಅದನ್ನೇ ನಾವು ಮುಂದುವರಿಸಿಕೊಂಡು ಹೋಗ್ತೆವೆ ಎಂದು ತಿಗಳ ಸಮುದಾಯದ ಅರ್ಚಕ ಮುನಿಯಪ್ಪ ಟಿವಿ 9ಗೆ ಹೇಳಿಕೆ ನೀಡಿದ್ದಾರೆ.
2 ವರ್ಷದ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಕರಗ ಶಕ್ತ್ಯೋತ್ಸವ:
ಬೆಂಗಳೂರು: ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಯಾಗಿರುವ ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ಕರಗ (Bengaluru Karaga) ಭಾನುವಾರ (ಏಪ್ರಿಲ್ 17) ನಸುಕಿನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನೂ ಅನುಸರಿಸಲಾಯಿತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಒಬ್ಬ ಡಿಸಿಪಿ, ಐವರು ಎಸಿಪಿ, 15 ಇನ್ಸ್ಪೆಕ್ಟರ್ಗಳು, 30 ಪಿಎಸ್ಐ, 300 ಕಾನ್ಸ್ಟೆಬಲ್ಗಳು ಮತ್ತು 6 ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ನಾನು ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳಿ: ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್ ಸಂದೇಶ
7th Pay Commission: ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಏರಿಕೆ ಆಗಲಿದೆಯೇ ಈ ನಾಲ್ಕು ಭತ್ಯೆಗಳು?
Published On - 6:19 pm, Tue, 26 April 22