RTE: 8ನೇ ತರಗತಿ ವಿದ್ಯಾರ್ಥಿಯನ್ನು ಫೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಖಾಸಗಿ ಶಾಲೆ, ಶಿಕ್ಷಣ ಇಲಾಖೆಗೆ ದೂರು

ಆರ್​ಟಿಇ ರೂಲ್ಸ್ ಬ್ರೇಕ್ ಮಾಡಿ 8ನೇ ತರಗತಿ ವಿದ್ಯಾರ್ಥಿಯನ್ನು ಫೇಲ್ ಮಾಡಿ ಪಾಸ್ ಮಾಡಲು ಖಾಸಗಿ ಶಾಲೆ ಹಣಕ್ಕೆ ಬೇಡಿಕೆ ಇಟ್ಟಿದೆ. ಈ ಬಗ್ಗೆ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.

RTE: 8ನೇ ತರಗತಿ ವಿದ್ಯಾರ್ಥಿಯನ್ನು ಫೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಖಾಸಗಿ ಶಾಲೆ, ಶಿಕ್ಷಣ ಇಲಾಖೆಗೆ ದೂರು
ದಿ ಸಂಹಿತ ಅಕಾಡೆಮಿ ಸ್ಕೂಲ್
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Jun 09, 2023 | 3:17 PM

ಬೆಂಗಳೂರು: ಆರ್​ಟಿಇ ಕೋಟದ ಅಡಿಯಲ್ಲಿ ಓದುತ್ತಿರುವ ಮಕ್ಕಳನ್ನ 8 ನೇ ತರಗತಿಯವರೆಗೂ ಫೇಲ್ ಮಾಡುವುದಕ್ಕೆ ಅವಕಾಶವೇ ಇಲ್ಲ.‌ ಆದ್ರೂ ಅದೊಂದು ಖಾಸಗಿ ಶಾಲೆ ಆರ್​ಟಿಇ(Right to Education) ರೂಲ್ಸ್ ಗಳನ್ನ ಬ್ರೇಕ್ ಮಾಡಿದೆ.‌ ಅಲ್ಲದೇ ದುಬಾರಿ ಫೀಜ್ ಗೆ ಬೇಡಿಕೆ ಇಟ್ಟಿದೆ.

ರಾಜಾಧಾನಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಹಾವಾಳಿ ಜೋರಾಗಿದೆ. ಖಾಸಗಿ ಶಾಲೆಗಳ ಮೇಲೆ ನಿಗಾ ಇಡಬೇಕಾದ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕೊಳಿತಿದೆ. ಬನ್ನೇರುಘಟ್ಟದ ದಿ ಸಂಹಿತ ಅಕಾಡೆಮಿ ಸ್ಕೂಲ್​ನಲ್ಲಿ ಆರ್​ಟಿಇ ಕೋಟಾದ ಅಡಿಯಲ್ಲಿ ಯಶ್ವಂತ್ ಎನ್ನುವ ವಿದ್ಯಾರ್ಥಿಯನ್ನ ತೆಗೆದುಕೊಳ್ಳಲಾಗುತ್ತು. ಈ ವರ್ಷ ಈ ವಿದ್ಯಾರ್ಥಿಯ ಆರ್​ಟಿಇ ಕೋಟಾ ಮುಗಿಯುತ್ತಿದೆ.‌ ಆದ್ರೆ ಈ ವರ್ಷ ಕಡಿಮೆ ಅಂಕ ಬಂತು ಅಂತ ಕಾರಣ ಕೊಟ್ಟು 8 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ನನ್ನ ಫೇಲ್ ಮಾಡಿದ್ದಾರೆ.‌ ಈ ಕುರಿತು ಪೋಷಕರು ಪ್ರಶ್ನೆ ಮಾಡಿದ್ದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಎಂಟರಿಂದ ಒಂಬತ್ತನೇ ತರಗತಿ ಕಳುಹಿಸಬೇಕು ಅಂದ್ರೆ ಒಂದು ವರೆ ಲಕ್ಷದಷ್ಟು ಫೀಜ್ ಕೊಡ್ಬೇಕು.‌ ಇದಕ್ಕೆ ಒಪ್ಪದ ಪೋಷಕರು ಆನೇಕಲ್ ವ್ಯಾಪ್ತಿಯಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಆರ್​ಟಿಐ ಆ್ಯಕ್ಟ್ ಪ್ರಕಾರ ಎಂಟನೆ ತರಗತಿಯವರೆಗೆ ಒಂದು ಮಗುವನ್ನ ಫೇಲ್ ಮಾಡುವ ಅಧಿಕಾರವೇ ಇರುವುದಿಲ್ಲ.‌ ಜೊತೆಗೆ ಮಗುವನ್ನ ಎಲ್ ಕೆ ಜಿಗೆ ಸೇರಿಸುವಾಗಲೇ 14 ವರ್ಷಗಳಿಗೆ ಹಾಸ್ಟೇಲ್ ಹಾಗೂ 10 ವರ್ಷಗಳ ಕಾಲ ದಿ ಸಂಹಿತ ಅಕಾಡೆಮಿಯಲ್ಲಿ ಒದಲು‌ ಮಾತುಕಥೆಯಾಗಿತ್ತು. ಆದ್ರೆ ಇದೀಗಾ ಆರ್ ಟಿ ಇ ಆ್ಯಕ್ಟ್ ಪ್ರಕಾರ 10 ವರ್ಷಗಳ ಕಾಲ ಓದುವ ಕೋಟಾವೆನೋ ಮುಗಿದಿದೆ. ಅದ್ರೆ ಕಡಿಮೆ ಅಂಕದ ನೆಪ ಒಡ್ಡಿ ಮಗುವನ್ನ ಫೇಲ್ ಮಾಡುವುದಷ್ಟೇ ಅಲ್ಲದೇ, 8 ರಿಂದ 9 ನೇ ಕ್ಲಾಸ್ ಗೆ ಮುಂದುವರಿಸುವುದಕ್ಕೆ ಒಂದೂವರೆ ಲಕ್ಷದಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಬೇಡಿಕೆ ಇಡುತ್ತಿದ್ದಂತೆ ಶಾಲೆಯ ನಿರ್ದೇಶಕಿಯೊಂದಿಗೆ ಮಾತನಾಡಲು ಹೋದಾಗ ಅನುಚಿತವಾಗಿ ವರ್ತಿಸುವುದಲ್ಲದೇ, ಶಾಲೆಯ ಸಿಬ್ಬಂದಿಗಳಿಂದ ಶಾಲೆಯಿಂದ ಹೊರ ಕಳುಹಿಸಿದ್ದಾರೆ.‌ ಈ ಕುರಿತಾಗಿ ಪೋಲಿಸರಿಗೆ ದೂರು ನೀಡುವುದಕ್ಕೆ ಹೋದ್ರೆ ಕಂಪ್ಲೆಂಟ್ ತೆಗೆದುಕೊಳ್ತಿಲ್ಲ. ಈ ಕುರಿತಾಗಿ ಶಿಕ್ಷಣ ಇಲಾಖೆ ದೂರು ನೀಡಿದ್ದು, ಅಧಿಕಾರಿಗಳು ಇಲ್ಲಿಯವರೆಗೂ ಕ್ರಮ ತೆಗೆದುಕೊಂಡಿಲ್ಲ. ನನಗೆ ನ್ಯಾಯ ಬೇಕು. ಆರ್​ಟಿಇ ಹೆಸರಿನಲ್ಲಿ ಈ ಖಾಸಗಿ ಶಾಲೆ ಮೋಸ ಮಾಡುತ್ತಿದೆ‌ ಎಂದು ಯಶ್ವಂತ್ ತಂದೆ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಕಾರಣಕ್ಕೆ ಇತರೆ ಪಿಂಚಣಿಗಳನ್ನು ಕಡಿತ ಮಾಡುತ್ತಾ ಸರ್ಕಾರ? ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ ಇಲ್ಲಿದೆ

ಇನ್ನು, ಆರ್​ಟಿಇ ಆ್ಯಕ್ಟ್ ಪ್ರಕಾರ ಎಲ್​ಕೆಜಿ ಯಿಂದ 8 ನೇ ತರಗತಿ ಮುಗಿಯುವ ವರೆಗೂ ಮಗುವನ್ನ ಫೇಲ್ ಮಾಡುವುದಕ್ಕೆ ಅವಾಕಾಶ ಇರುವುದಿಲ್ಲ.‌ ಹೀಗಿರುವಾಗ 8 ತರಗತಿಯಿಂದ 9 ಕ್ಕೆ ಸೇರ್ಗಡೆಯಾಗಬೇಕಿದ್ದ ವಿದ್ಯಾರ್ಥಿಯನ್ನು ಫೇಲ್ ಮಾಡುವುದಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಫೀಜ್ ವಿಚಾರವಾಗಿ ದಿ ಸಂಹಿತ ಅಕಾಡೆಮಿ ಶಾಲೆ ಮಾಹಿತಿಯನ್ನ ನೀಡಬೇಕು. ಯಾವುದಕ್ಕೆ ಎಷ್ಟುಷ್ಟು ಖರ್ಚು ಮಾಡುತ್ತಿದೆ ಎನ್ನುವ ಕುರಿತ ಡಿಟೇಲ್ ರಿಪೋರ್ಟ್ ಪೋಷಕರಿಗೆ ನೀಡಬೇಕು. ಅಲ್ಲದೇ 8ನೇ ತರಗತಿ ಮಗುವನ್ನ ಫೇಲ್ ಮಾಡುವುಕ್ಕೆ ಅವಕಾಶ ಕೊಟ್ಟವವರು ಯಾರು‌? ಆರ್​ಟಿಇ ಕೋಟಾದ ರೂಲ್ಸ್ ಬ್ರೇಕ್ ಮಾಡ್ತಿದ್ರು. ಶಿಕ್ಷಣ ಇಲಾಖೆ, ಸಚಿವರು ಯಾಕೆ ಕ್ರಮ ತೆಗೆದುಕೊಂಡಿಲ್ಲ ಅಂತ ಆರ್​ಟಿಇ ಕಾರ್ಯಕರ್ತ ಯೋಗಾನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇ‌ನ್ನು, ಈ ಕುರಿತಾಗಿ ಶಾಲಾ ಆಡಳಿತ ಮಂಡಳಿಯನ್ನ ಪ್ರಶ್ನಿಸಿದ್ದಕ್ಕೆ ಯಾವುದೇ ರೀತಿಯಾ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನ ಪ್ರಶ್ನಿಸಿದ್ರೆ ನಾವು ದೂರನ್ನ ಸ್ವಿಕರಿಸಿದ್ದೇವೆ. ಇದಕ್ಕೆಂದೆ ಮೂರು ಜನರ ಸಮಿತಿ ಮಾಡಿ ಪರಿಶೀಲಿಸಲಾಗುವುದು ಎಂದರು.

ಒಡ್ನಲ್ಲಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರ್​ಟಿಇ ರೂಲ್ಸ್ ಗಳನ್ನ ಮಾಡಿದ್ರೆ ಇದೀಗಾ ಆ ರೂಲ್ಸ್ ಗಳನ್ನ ಖಾಸಗಿ ಶಾಲೆಗಳು ಬ್ರೇಕ್ ಮಾಡುತ್ತಿದ್ದು, ಸರ್ಕಾರ ಈ ಕುರಿತಾಗಿ ಕ್ರಮ ತೆಗೆದುಕೊಳ್ಳಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ