ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರ; ಸಿರಿಯಾ, ಪಾಕಿಸ್ತಾನದಿಂದ ಬೆದರಿಕೆ ಶಂಕೆ

| Updated By: sandhya thejappa

Updated on: Apr 23, 2022 | 12:05 PM

ಈ ಬೆದರಿಕೆ ಕರೆ ಹಿಂದೆ ಪಾಕಿಸ್ತಾನ, ಸಿರಿಯಾ ದೇಶದ ನಂಟು ಇದೆಯಾ ಎಂಬ ಅನುಮಾನ ಹೆಚ್ಚಾಗಿದ್ದು, ರಾಜ್ಯ ಗೃಹ ಇಲಾಖೆಯಿಂದ ಇದೀಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರ; ಸಿರಿಯಾ, ಪಾಕಿಸ್ತಾನದಿಂದ ಬೆದರಿಕೆ ಶಂಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಏಪ್ರಿಲ್ 8ರಂದು ನಗರದ ಆರು ಶಾಲೆಗಳಲ್ಲಿ ಬಾಂಬ್ (Bomb) ಇಟ್ಟಿರುವುದಾಗಿ ಇ- ಮೇಲ್ (E-mail) ಬಂದಿತ್ತು. ಈ ಬೆದರಿಕೆ ಕರೆ ಹಿಂದೆ ಪಾಕಿಸ್ತಾನ, ಸಿರಿಯಾ ದೇಶದ ನಂಟು ಇದೆಯಾ ಎಂಬ ಅನುಮಾನ ಹೆಚ್ಚಾಗಿದ್ದು, ರಾಜ್ಯ ಗೃಹ ಇಲಾಖೆಯಿಂದ ಇದೀಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತಾಂತ್ರಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ ಇ-ಮೇಲ್ ಬೆನ್ನು ಬಿದ್ದಿರುವ ಗೃಹ ಇಲಾಖೆ ಸಾಕ್ಷ್ಯ ಸಂಗ್ರಹಿಸುತ್ತಿದೆ.

ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಬಿನೈಸರ್ ಸ್ಕೂಲ್ಗೆ ಅನಾಮಿಕ ಹೆಸರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು.

Proxy server ಬಳಸಿ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. 8- 10 Proxy server ಬಳಸಿರುವುದರಿಂದ ಹಲವಾರು ಲೇಯರ್‌ಗಳಿವೆ. ಒಂದು ಲೇಯರ್ ಪತ್ತೆ ಮಾಡಿದ್ರೆ, ಅದು ಇನ್ನೊಂದು ಲೇಯರ್‌ಗೆ ಕನೆಕ್ಟ್ ಆಗತ್ತೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಇಮೇಲ್ ಮೂಲ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಐಟಿ ಆ್ಯಕ್ಟ್, 66F ಅಡಿ ಪ್ರಕರಣ ದಾಖಲಾಗಿರೋದ್ರಿಂದ ಪ್ರಕರಣಕ್ಕೆ ಗಂಭೀರತೆ ಇದೆ. ತನಿಖೆ ನಡೆಸ್ತಿರುವ ಪೊಲೀಸರಿಗೆ ಎಟಿಸಿಯಿಂದಲೂ ಸಾಥ್ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ ನೀಡಲಾಗಿದೆ. ಆ್ಯಂಟಿ ಟೆರರಿಸಂ ಸೆಲ್ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಈ ಬಗ್ಗೆ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ಶಾಲೆಗಳಿಗೆ ಬೆದರಿಕೆ ಇ-ಮೇಲ್​ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಯಾವುದೇ ದೇಶದಿಂದ ಇ-ಮೇಲ್​ ಬಂದಿದ್ದರೂ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ

24 ವಿದ್ಯಾರ್ಥಿನಿಯರನ್ನು ಕೂಡಿಹಾಕಿ, ತಮ್ಮ ವರ್ಗಾವಣೆ ರದ್ದು ಮಾಡುವಂತೆ ಬ್ಲ್ಯಾಕ್​​ಮೇಲ್​ ಮಾಡಿದ ಶಿಕ್ಷಕಿಯರು; ಎಫ್​ಐಆರ್​ ದಾಖಲು

ಹರಿದ ಬಟ್ಟೆ, ಹಣೆಯಲ್ಲಿ ರಕ್ತ; ನಟಿ ರಂಜನಿ ರಾಘವನ್ ಹಂಚಿಕೊಂಡ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ

Published On - 10:47 am, Sat, 23 April 22