ಬೆಂಗಳೂರು: ಎಸಿಬಿ ಆಫೀಸರ್ಸ್ ಜೊತೆ ಮಾತುಕತೆ ಮಾಡುವುದಾಗಿ ನಂಬಿಸಿ ಹೆಚ್ಎಸ್ಆರ್ ಲೇಔಟ್ನ ಬಿಡಿಎ ಸಹಾಯಕ ಇಂಜಿನಿಯರ್ ಅರವಿಂದ್ ಎಂಬುವವರಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಹೈಗ್ರೌಂಡ್ಸ್ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರವೀಣ್, ಚೇತನ್, ಮನೋಜ್ ಎಂಬ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಮತ್ತೊಬ್ಬ ಆರೋಪಿ ವಿಜಯ್ ಕುಮಾರ್ಗಾಗಿ ಹುಡುಕಾಟ ನಡೆಯುತ್ತಿದೆ.
ಕಳೆದ ನವೆಂಬರ್ 19ರಂದು ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಈ ವೇಳೆ ಹಲವು ಬಿಡಿಎ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅಸಿಸ್ಟೆಂಟ್ ಎಂಜಿನಿಯರ್ ಅರವಿಂದ್ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಕಾಡುಬೀಸನಹಳ್ಳಿಯ 1.18ಎಕರೆ ಜಮೀನಿನ ಕಡತದ ವಿಚಾರವಾಗಿ ಅರವಿಂದ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಎಸಿಬಿ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಹೀಗಾಗಿ ಆರೋಪ ಮುಕ್ತರಾಗುವ ಬಗ್ಗೆ ಅರವಿಂದ್ ಮೇಲಾಧಿಕಾರಿಗಳ ಜೊತೆ ಚರ್ಚಿಸಿದ್ದರು. ಮೇಲಾಧಿಕಾರಿಗಳಾದ ಮಹದೇವ ಮತ್ತು ಗೋವಿಂದರಾಜು ಜೊತೆ ಮಾತುಕತೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಮೂವರಿಗೂ ಪರಿಚಯವಾಗಿದ್ದ ಚೇತನ್ ಹಾಗೂ ಪ್ರವೀಣ್ ಎಂಬ ಆರೋಪಿಗಳು, ಬಿಡಿಎ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ. ದಾಳಿ ನಡೆಸಿರೋ ಎಸಿಬಿ ಅಧಿಕಾರಿಗಳು ಗೊತ್ತು 10 ಲಕ್ಷ ಕೊಟ್ಟರೆ ಆರೋಪ ಮುಕ್ತಗೊಳಿಸಬಹುದು ಎಂದು ನಂಬಿಸಿದ್ದಾರೆ.
ಆರೋಪಿಗಳು, ಸದಾಶಿವನಗರದ ಕಾಫಿ ಡೇ ಒಂದರಲ್ಲಿ ಮೂವರು ಅಧಿಕಾರಿಗಳಿಂದ ಒಟ್ಟು10 ಲಕ್ಷ ಪಡೆದಿದ್ದಾರೆ. ಹಣ ಪಡೆದು ಕೆಲಸ ಮಾಡಿಕೊಡದಿದ್ದಾಗ ಅಸಿಸ್ಟೆಂಟ್ ಎಂಜಿನಿಯರ್ ಅರವಿಂದ್ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ‘ಕುಟುಂಬಸ್ಥರ ಜತೆ ಚರ್ಚಿಸಿ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ದಿನಾಂಕ ಘೋಷಿಸುತ್ತೇವೆ’; ಬಸವರಾಜ ಬೊಮ್ಮಾಯಿ
ನೀವು ವಕೀಲರಾಗಿ ಹೀಗೆ ಹೇಳಬಾರದು: ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್, ಸಿಟಿ ರವಿ ತರಾಟೆ
Published On - 3:27 pm, Thu, 17 March 22