ಬೆಂಗಳೂರು: ಟ್ರಾಫಿಕ್ ಪೊಲೀಸರ ವಿರುದ್ಧ ಭ್ರಷ್ಟಾಚಾರ ದೂರುಗಳ ಹಿನ್ನೆಲೆ ಬಾಡಿ ಕ್ಯಾಮರಾ ಧರಿಸುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ಜಾರಿಗೊಳಿಸಿ ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. ಕರ್ತವ್ಯದ ವೇಳೆ ಬಾಡಿ ಕ್ಯಾಮರಾ ಧರಿಸಲು ಸೂಚಿಸಬೇಕು. ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಹೇಳಲಾಗಿದೆ.
ಕಟ್ಟುನಿಟ್ಟಾದ ಜಾರಿಗೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕೆ ಪ್ರತಿಯಾಗಿ ಒಟ್ಟು 2,680 ಬಾಡಿ ಕ್ಯಾಮರಾಗಳ ಖರೀದಿಸಲಾಗುವುದು. ಈವರೆಗೆ 1,097 ಬಾಡಿ ಕ್ಯಾಮರಾ ಖರೀದಿಸಿರುವುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಹೇಳಿಕೆ ನೀಡಿದೆ. ಖರೀದಿಸಿರುವ ಕ್ಯಾಮರಾ ಬಳಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಗೀತಾ ಮಿಶ್ರಾ ಎಂಬುವರು ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು.
ಬಿಬಿಎಂಪಿ ನಿರ್ಮಿಸಿದ ರಸ್ತೆಗಳಲ್ಲಿ ಗುಂಡಿ ವಿಚಾರ; ಪಿಐಎಲ್ ವಿಚಾರಣೆ ಮುಂದೂಡಿಕೆ
ಬಿಬಿಎಂಪಿ ನಿರ್ಮಿಸಿದ ರಸ್ತೆಗಳಲ್ಲಿ ಗುಂಡಿ ವಿಚಾರವಾಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆಯನ್ನು ಬಿಬಿಎಂಪಿ ಪರ ವಕೀಲರಿಗೆ ಅನಾರೋಗ್ಯ ಹಿನ್ನೆಲೆ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 7ಕ್ಕೆ ಮುಂದೂಡಿದೆ. ರಸ್ತೆಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡಬೇಕಿತ್ತು. ಬಿಬಿಎಂಪಿ ಮುಖ್ಯ ಇಂಜಿನಿಯರ್ ಹಾಜರಾಗಲು ಸೂಚಿಸಿತ್ತು. ಪ್ರತಿ ಮಳೆಯ ನಂತರ ರಸ್ತೆ ಗುಂಡಿಮಯವಾಗುತ್ತಿದೆ. BWSSB, ಬೆಸ್ಕಾಂ, ಬಿಬಿಎಂಪಿ ಮಧ್ಯೆ ಸಮನ್ವಯವಿಲ್ಲ. ರಸ್ತೆ ನಿರ್ಮಿಸಿದ ಮೇಲೆ ರಸ್ತೆ ಅಗೆಯಲಾಗುತ್ತಿದೆ. ಇದಕ್ಕೆ ಕಾರಣರಾದ ಇಂಜಿನಿಯರ್ಗಳ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು.
ವೈಯಾಲಿಕಾವಲ್ ಸೊಸೈಟಿ ಸೈಟ್‌ದಾರರಿಗೆ ತಾತ್ಕಾಲಿಕ ರಿಲೀಫ್
ವೈಯಾಲಿಕಾವಲ್ ಸೊಸೈಟಿ ಸೈಟ್‌ದಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಲ್ಲಿನ 55 ನಿವೇಶನದಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ನೀಡಿದೆ. ನಾಗರಿಕ ಸೌಲಭ್ಯದ ನಿವೇಶನದಲ್ಲಿ ಸೈಟ್ ಹಂಚಿಕೆ ಮಾಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶಿಸಿತ್ತು. ನಿವೇಶನದಾರರಿಂದ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಹಾಕಲಾಗಿತ್ತು. ಬಿಡಿಎಯ ಲೇಔಟ್ ಪ್ಲ್ಯಾನ್ನಂತೆ ಸೈಟ್ ಖರೀದಿ ಮಾಡಬೇಕಿತ್ತು. ಆದರೆ, ನಂತರ ಲೇಔಟ್ ಪ್ಲ್ಯಾನ್ ಬದಲಿಸಿರುವ ಸೊಸೈಟಿ, ಬಿಡಿಎ. ಇದರಲ್ಲಿ ನಿವೇಶನದಾರರ ತಪ್ಪಿಲ್ಲವೆಂದು ವಾದ ಮಂಡಿಸಲಾಗಿತ್ತು. ಹೀಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ನೀಡಿದೆ. ಬಿಡಿಎ, ವೈಯಾಲಿಕಾವಲ್ ಸೊಸೈಟಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಖಾಲಿ ಸೈಟ್ನಲ್ಲಿ ಕಟ್ಟಡ ನಿರ್ಮಿಸದಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ನಿರ್ಮಾಣವಾದ ಕಟ್ಟಡ ತೆರವುಗೊಳಿಸದಂತೆಯೂ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಆನೇಕಲ್ನಲ್ಲಿ ಮನೆ ಮುಂದೆ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪ; ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು
ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ, ಪೊಲೀಸ್ ಪೇದೆಯಿಂದ ಲವ್ ದೋಖಾ
Published On - 3:07 pm, Mon, 7 February 22