ಆನೇಕಲ್ನಲ್ಲಿ ಮನೆ ಮುಂದೆ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪ; ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು
ತಾಳಿ ಕಿತ್ತುಕೊಂಡು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮಗನಿಗೆ ಪೊಲೀಸರು ಥಳಿಸಿದ್ದಾರೆ ಅಂತ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಬೆಳ್ಳಂದೂರು ಪೊಲೀಸರು ದೂರು ಸ್ವಿಕರಿಸಲಿಲ್ಲ ಅಂತ ದೂರಿನಲ್ಲಿ ಆರೋಪಿಸಿದ್ದಾರೆ.
ಆನೇಕಲ್: ಮನೆ ಮುಂದೆ ಮಹಿಳೆಯನ್ನು (Woman) ನಗ್ನಗೊಳಿಸಿ ಥಳಿಸಿದ ಆರೋಪ ಕೇಳಿಬಂದಿದ್ದು, ಬೆಂಗಳೂರು ಪೊಲೀಸ್ ಆಯುಕ್ತರಿಗೆ (Police Commissioner) ಮಹಿಳೆ ದೂರು ನೀಡಿದ್ದಾರೆ. ಬೆಳ್ಳಂದೂರು ನಿವಾಸಿ ನಾಗರತ್ನ(46) ಎಂಬುವವರು ದೂರು ನೀಡಿದ್ದಾರೆ. ರಾಮು, ಮುನಿವೆಂಕಟಪ್ಪ ಇತರ 10 ಜನರ ವಿರುದ್ಧ ದೂರು ದಾಖಲಾಗಿದೆ. ಬೆಳ್ಳಂದೂರು ಪೊಲೀಸರ ವಿರುದ್ಧವೂ ನಿಂದನೆ ಆರೋಪ ಕೇಳಿಬಂದಿದೆ. ತಾಯಿ ಮನೆ ಬಳಿ ಕಸ ಕ್ಲೀನ್ ಮಾಡುವ ವೇಳೆ ತಕರಾರು ನಡೆದಿದೆ. ಮಾತಿಗೆ ಮಾತು ಬೆಳೆದು ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ.
ತಾಳಿ ಕಿತ್ತುಕೊಂಡು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮಗನಿಗೆ ಪೊಲೀಸರು ಥಳಿಸಿದ್ದಾರೆ ಅಂತ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಬೆಳ್ಳಂದೂರು ಪೊಲೀಸರು ದೂರು ಸ್ವಿಕರಿಸಲಿಲ್ಲ ಅಂತ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಸ್ಪಷ್ಟನೆ ಬೆಳ್ಳಂದೂರು ಠಾಣೆ ಪೊಲೀಸರು, ಮಹಿಳೆ ವರ್ತನೆ, ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ.
ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ:
ಮರಕ್ಕೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗೀತಾ(32), ಶಾರದಾ(60), ಧೃತಿ(5) ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಬಾಲಕಿ ಧೃತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾಣೆಯಾಗಿದ್ದ ರೈತ ಶವವಾಗಿ ಪತ್ತೆ:
ಬಳ್ಳಾರಿ: ಕಾಣೆಯಾಗಿದ್ದ ರೈತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ರೈತ 2 ಎಕರೆ 22 ಸೆಂಟ್ಸ್ ಭೂಮಿ ಹೊಂದಿದ್ದರು. 2 ಎಕರೆ ಭೂಮಿ ಭೂ ಸ್ವಾಧೀನದ ನಂತರ ಸರ್ಕಾರ ಪರಿಹಾರ ನೀಡಿಲ್ಲ. ರೈತನ ಬಳಿ ಉಳಿದ 22 ಸೆಂಟ್ಸ್ ಭೂಮಿಯ ಪಹಣಿಯೂ ಅಧಿಕಾರಿಗಳು ಮಾಡಿಲ್ಲ. 22 ಸೆಂಟ್ಸ್ ತುಂಡು ಭೂಮಿ ರದ್ದುಪಡಿಸಿ ಪಹಣಿ ಕೊಡುವಂತೆ ರೈತ ಹೋರಾಟ ನಡೆಸಿದ್ದರು. ಅಕ್ರಮ ಲೇಔಟ್ ವಿರುದ್ಧವೂ ಹೋರಾಟ ಮಾಡಿದ್ದರು. ಹೋರಾಟಕ್ಕೆ ಬೆಲೆ ಸಿಗದ ಪರಿಣಾಮ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ
ನಟಿಯ ಜೊತೆ ರವಿ ತೇಜ ಲಿಪ್ ಲಾಕ್; ವೈರಲ್ ಫೋಟೋದಲ್ಲಿರುವ ಸುಂದರಿ ಯಾರು? ಅರೆರೆ ‘ಕಿಲಾಡಿ’
Published On - 11:30 am, Mon, 7 February 22