AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮ ಸಂಸದ್​ ಹೆಸರಲ್ಲಿ ನೀಡಲಾದ ಹೇಳಿಕೆಗಳು ಹಿಂದುತ್ವವನ್ನು ಪ್ರತಿನಿಧಿಸುವಂಥದ್ದಲ್ಲ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​

ಹಿಂದು ಸಮುದಾಯದ ಜನರು ಒಟ್ಟಾದಾಗ, ಒಂದು ಕಡೆ ಸೇರಿದಾಗ ಭಗವದ್ಗೀತೆ ಬಗ್ಗೆ ಮಾತನಾಡಬೇಕೇ ಹೊರತು, ಇನ್ನೊಬ್ಬರನ್ನು ಹತ್ಯೆ ಮಾಡುವ ಮಾತುಗಳನ್ನಾಡಬಾರದು ಎಂದು ವೀರ ಸಾವರ್ಕರ್ ಹೇಳಿದ್ದರು.

ಧರ್ಮ ಸಂಸದ್​ ಹೆಸರಲ್ಲಿ ನೀಡಲಾದ ಹೇಳಿಕೆಗಳು ಹಿಂದುತ್ವವನ್ನು ಪ್ರತಿನಿಧಿಸುವಂಥದ್ದಲ್ಲ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​
ಮೋಹನ್ ಭಾಗವತ್
TV9 Web
| Edited By: |

Updated on:Feb 07, 2022 | 11:43 AM

Share

ಇತ್ತೀಚೆಗೆ ಧರ್ಮ ಸಂಸದ್​​ ಹೆಸರಲ್ಲಿ ನಡೆದ ಕೆಲವು ವಿವಾದಗಳ ಬಗ್ಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ (RSS Chief Mohan Bhagwat)​ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಧರ್ಮ ಸಂಸದ್​ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಏನೆನೆಲ್ಲ ಹೇಳಿಕೆಗಳನ್ನು ನೀಡಲಾಯಿತೋ, ಅವ್ಯಾವವೂ ಹಿಂದೂ ಶಬ್ದಗಳಲ್ಲ, ಹಿಂದೂ ಮನಸ್ಥಿತಿಯಲ್ಲ, ಹಿಂದುಗಳು ಮಾಡುವ ಕೆಲಸವೂ ಅಲ್ಲ ಎಂದು ಹೇಳಿದ್ದಾರೆ.ನಾಗ್ಪುರದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಹಿಂದುತ್ವ ಹೃದಯವುಳ್ಳ ಯಾರೂ ಇಂಥ ಮಾತುಗಳನ್ನಾಡುವುದಿಲ್ಲ.  ಯಾರೆಲ್ಲ ಹಿಂದುತ್ವದ ಪರಿಪಾಲಕರೋ ಅವರು ಈ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಛತ್ತೀಸ್​ಗಢ ಮತ್ತು ಉತ್ತರಾಖಂಡ್​​ನಲ್ಲಿ ನಡೆದ ಧರ್ಮ ಸಂಸದ್​ ಸಮಾರಂಭಗಳು ದೊಡ್ಡಮಟ್ಟದ ವಿವಾದ ಸೃಷ್ಟಿಸಿದ್ದವು. ಛತ್ತೀಸ್​ಗಢ್​​ನಲ್ಲಿ ನಡೆದ ಧರ್ಮ ಸಂಸದ್​​ನಲ್ಲಿ ಮಾತನಾಡಿ, ಹಿಂದು ಧಾರ್ಮಿಕ ನಾಯಕ ಕಾಳಿ ಚರಣ್​ ಮಹಾರಾಜ್​ ಸ್ವಾಮೀಜಿ,  ಗಾಂಧಿಯ ಬಗ್ಗೆ ಅವಹೇಳನ ಮಾಡಿದ್ದರು. ಗಾಂಧಿ ಹತ್ಯೆ ಮಾಡಿದ್ದ ಗೋಡ್ಸೆಯನ್ನು ಶ್ಲಾಘಿಸಿದ್ದರು.  ಬಳಿಕ ಅವರ ಬಂಧನವಾಗಿ, ಬಿಡುಗಡೆಯಾಗಿದೆ. ಇನ್ನೊಂದು ಧರ್ಮ ಸಂಸದ್​ ಉತ್ತರಾಖಂಡ್​​ನ ಹರಿದ್ವಾರದಲ್ಲಿ ಡಿಸೆಂಬರ್​ 17ರಿಂದ 19ರವರೆಗೆ ನಡೆದಿತ್ತು. ಇದರಲ್ಲಿ ಮುಸ್ಲಿಮರ ವಿರುದ್ಧ ಕತ್ತಿ ಹಿಡಿಯಿರಿ ಎಂಬ ಪ್ರಚೋದನಾತ್ಮಕ ಭಾಷಣವನ್ನು ಮಾಡಲಾಗಿತ್ತು. ಹೀಗೆ ಭಾಷಣ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್​ 153 ಎ ಅಡಿಯಲ್ಲಿ ಕೇಸ್​ ದಾಖಲಾಗಿದೆ.

ಧರ್ಮ ಸಂಸದ್​​ನಲ್ಲಿ ಹಿಂದುತ್ವದ ಹೆಸರಲ್ಲಿ ನೀಡಲಾದ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ. ಹಿಂದು ಸಮುದಾಯದ ಜನರು ಒಟ್ಟಾದಾಗ, ಒಂದು ಕಡೆ ಸೇರಿದಾಗ ಭಗವದ್ಗೀತೆ ಬಗ್ಗೆ ಮಾತನಾಡಬೇಕೇ ಹೊರತು, ಇನ್ನೊಬ್ಬರನ್ನು ಹತ್ಯೆ ಮಾಡುವ, ಮತ್ತೊಂದು ಸಮುದಾಯಕ್ಕೆ ಹಾನಿ ಮಾಡುವ ಮಾತುಗಳನ್ನಾಡಬಾರದು ಎಂದು ವೀರ ಸಾವರ್ಕರ್​ ಅವರೇ ಹೇಳಿದ್ದರು ಎಂದು ಮೋಹನ್ ಭಾಗ್ವತ್​ ಹೇಳಿದರು. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಮಾತುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಆದರೆ ಇದನ್ನು ಹಿಂದು ರಾಷ್ಟ್ರವನ್ನಾಗಿ ಮಾಡುವ ಕೆಲಸವಲಿಲ್ಲ. ಯಾರು  ಒಪ್ಪಲಿ, ಬಿಡಲಿ ಭಾರತ ಯಾವಾಗಲೂ ಹಿಂದೂ ರಾಷ್ಟ್ರವೇ ಆಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಏಕೀಕರಣಕ್ಕೆ ಏಕರೂಪತೆಯ ಅಗತ್ಯವಿಲ್ಲ. ದೇಶದಲ್ಲಿರುವ ವಿವಿಧತೆಯನ್ನು ಪ್ರತ್ಯೇಕತೆ ಎಂದು ಭಾವಿಸಬಾರದು. ವಿವಿಧತೆಗೂ ಪ್ರತ್ಯೇಕತೆಗೂ ತುಂಬ ವ್ಯತ್ಯಾಸವಿದೆ ಎಂದೂ ಮೋಹನ್ ಭಾಗವತ್​ ತಿಳಿಸಿದರು.

ಇದನ್ನೂ ಓದಿ: ಉಪಹಾರ ಸೇವಿಸುತ್ತಿದ್ದ ವೇಳೆ ಹೃದಯಾಘಾತ; 25 ವರ್ಷದ ಕಾನೂನು ವಿದ್ಯಾರ್ಥಿ ಸಾವು

Published On - 9:55 am, Mon, 7 February 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ