Crime News: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ, ಪೊಲೀಸ್ ಪೇದೆಯಿಂದ ಲವ್ ದೋಖಾ

ಹಾರೂಗೇರಿಯಲ್ಲಿ ಲಕ್ಷ್ಮವ್ವ ಚವಳಮ್ಮನವರ (38) ಹತ್ಯೆ ಮಾಡಲಾಗಿದೆ. ಪತಿ ತಿಮ್ಮಣ್ಣ, ಸಲಿಕೆಯಿಂದ ಹೊಡೆದು ಲಕ್ಷ್ಮವ್ವ ಹತ್ಯೆಗೈದಿದ್ದಾನೆ. ಆರೋಪಿ ತಿಮ್ಮಣ್ಣನನ್ನು ಮುಂಡರಗಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.

Crime News: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ, ಪೊಲೀಸ್ ಪೇದೆಯಿಂದ ಲವ್ ದೋಖಾ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on:Feb 05, 2022 | 4:15 PM

ಕೊಪ್ಪಳ: ಕಡಿಮೆ ದರದಲ್ಲಿ ಬಂಗಾರ ನೀಡುವುದಾಗಿ ನಂಬಿಸಿ ಹಣ ದೋಚುತ್ತಿದ್ದವರ ಬಂಧನ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸರಿಂದ ಹರಪನಹಳ್ಳಿ ಮೂಲದ ನಾಲ್ಕು ಜನರ ಬಂಧನ ಮಾಡಲಾಗಿದೆ. ಬುನಾದಿ ತೆಗೆಯುವಾಗ ಬಂಗಾರ ಸಿಕ್ಕಿದೆ. ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಣಗೆರಿಯ ವೆಂಕಟೇಶ ಎಂಬುವವರನ್ನು ನಂಬಿಸಿ 5 ಲಕ್ಷ ಹಣ ದೋಚಿದ್ದರು. ರಮೇಶ ಚಿಕ್ಕಮಗಳೂರು ಎಂದು ಹೇಳಿ ವೆಂಕಟೇಶಗೆ ಫೋನು‌ ಮಾಡಿದ್ದ ಆರೋಪಿಗಳು, ಹಲಗೆರಿ ಬಳಿ ಹಣ ತಂದರೆ ಬಂಗಾರ ಕೊಡುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.

ಹಲಗೆರಿಗೆ ಬಂದಾಗ ವೆಂಕಟೇಶರಿಂದ 5 ಲಕ್ಷ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಫೆಬ್ರವರಿ 1 ರಂದು ಘಟನೆ ನಡೆದಿತ್ತು. ಹರಪನಹಳ್ಳಿ ಮೂಲದ 6 ಜನತ ತಂಡದಿಂದ ಘಟನೆ ನಡೆದಿದೆ. ಪರಾರಿಯಾಗಿದ್ದ 6 ಜನರಲ್ಲಿ 4 ಜನರ ಬಂಧನ ಮಾಡಲಾಗಿದೆ. ಅಳವಂಡಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಗದಗ: ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ

ಶೀಲ ಶಂಕಿಸಿ ಪತಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ನಡೆದಿದೆ. ಹಾರೂಗೇರಿಯಲ್ಲಿ ಲಕ್ಷ್ಮವ್ವ ಚವಳಮ್ಮನವರ (38) ಹತ್ಯೆ ಮಾಡಲಾಗಿದೆ. ಪತಿ ತಿಮ್ಮಣ್ಣ, ಸಲಿಕೆಯಿಂದ ಹೊಡೆದು ಲಕ್ಷ್ಮವ್ವ ಹತ್ಯೆಗೈದಿದ್ದಾನೆ. ಆರೋಪಿ ತಿಮ್ಮಣ್ಣನನ್ನು ಮುಂಡರಗಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿ: ಪೊಲೀಸ್ ಪೇದೆಯಿಂದ ಲವ್ ದೋಖಾ

ಪೊಲೀಸ್ ಪೇದೆಯಿಂದ ಲವ್ ದೋಖಾ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದ ಮೋಹನ್ ಲಮಾಣಿ ಮೋಸ ಮಾಡಿದ ಯುವಕ. ಕಲಘಟಗಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಯುವತಿಯಿಂದ ಆತ್ಮಹತ್ಯೆಗೆ ಯತ್ನ ಮಾಡಲಾಗಿದೆ. ಮೋಹನ ಮಂಗಳೂರಿನಲ್ಲಿ ಪೊಲೀಸ್ ಪೇದೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಕೇಲವು ದಿನಗಳಿಂದ ಮದುವೆಗೆ ವಿರೋದ ವ್ಯಕ್ತಪಡಿಸಿದ್ದ ಯುವಕನ ವಿರುದ್ಧ ಕಲಘಟಗಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು. ಬಳಿಕ ಮದುವೆಯಾಗುವುದಾಗಿ ಹೇಳಿದ್ದ ಯುವಕನನ್ನು ನಂಬಿ ಯುವತಿ ಮನೆಯವರು ಮದುವೆ ಲಗ್ನ ಪತ್ರಿಕೆ ಪ್ರೀಂಟ್ ಹಾಕಿದ್ದರು. ಈಗ ಮತ್ತೆ ಯುವಕ ಮದುವೆಗೆ ನಿರಾಕರಿಸಿ, ಬೆದರಿಕೆ ಹಾಕಿದ್ದು, ಯುವತಿ ಮನನೊಂದು ಆತ್ಮಹತ್ಯೆ ಯತ್ನ ಮಾಡಿದ್ದಾರೆ.

ಉಡುಪಿ: ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ಮೂವರಿಗೆ ಗಾಯ

ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ಮೂವರಿಗೆ ಗಾಯವಾದ ಘಟನೆ ಉಡುಪಿ ನಗರದ ಕಡಿಯಾಳಿ ಬಳಿ ಸಂಭವಿಸಿದೆ. ಗರ್ಭಿಣಿ ಸೇರಿದಂತೆ ನಾಲ್ವರಿಗೆ ಕಾರು ಡಿಕ್ಕಿ ಹೊಡೆದ ಭೀಕರ ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ಗೋವಿಂದಪುರ ಜಂಕ್ಷನ್ ಬಳಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿ ಬಂಧನ

ಗೋವಿಂದಪುರ ಜಂಕ್ಷನ್ ಬಳಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಕೆ.ಜಿ.ಹಳ್ಳಿ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ. ಹಳ್ಳಿ ಸಂಚಾರಿ ಪೊಲೀಸರಿಂದ ವ್ಹೀಲಿಂಗ್ ಮಾಡ್ತಿದ್ದ ಆರೋಪಿ ಬಂಧನ ಮಾಡಲಾಗಿದೆ. ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿ ಯುವಕ ವೀಲಿಂಗ್ ಮಾಡು ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿತ್ತು. ಇದೀಗ ಕೆ.ಜಿ.ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವೀಲಿಂಗ್ ಮಾಡಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Crime News: ಐಷಾರಾಮಿ ಹೊಟೇಲ್​ನಲ್ಲಿ ಜೂಜಾಡುತ್ತಿದ್ದ 6 ಮಂದಿ ಬಂಧನ, ಅನಧಿಕೃತ ನೇಮಕಾತಿ ಜ್ಞಾಪಕಾ ಪತ್ರಗಳ ಬಗ್ಗೆ ಎಚ್ಚರವಾಗಿರಿ

ಇದನ್ನೂ ಓದಿ: Crime Update: ವ್ಯಕ್ತಿ ಗಮನ ಬೇರೆಡೆ ಸೆಳೆದು ಕಳ್ಳತನ, ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ಹನಿಟ್ರ್ಯಾಪ್ ಆರೋಪಿಗಳ ಬಂಧನ

Published On - 4:14 pm, Sat, 5 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ