Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾದ ಬಿಎಂಟಿಸಿ ಆಕ್ಸಿಡೆಂಟ್ಸ್; ಯಮದೂತ ಡ್ರೈವರ್​ಗಳಿಗೆ ಸಂಚಾರಿ ಪೊಲೀಸರಿಂದ ಟ್ರೈನಿಂಗ್

ಬಿಎಂಟಿಸಿ ಡ್ರೈವರ್ಗಳೆಂದ್ರೆ ಅವರು ಯಮದೂತರೆನ್ನೋ ಕಳಂಕವಿದೆ. ಅವರ ಯಾವಾಗಲೂ ಸುದ್ದಿಯಾಗದೇ ಆಕ್ಸಿಡೆಂಟ್ ಗಳಿಂದ. ಹೀಗಾಗಿ ಬಿಎಂಟಿಸಿಗೆ ಕಿಲ್ಲರ್ ಬಸ್ ಅನ್ನೋ ಹಣೆಪಟ್ಟಿ ಅಂಟಿದೆ. ಆದರೆ ಇದೀಗ ಈ ಅಪವಾದದಿಂದ ಮುಕ್ತವಾಗುವುದಕ್ಕೆ ಹೆಜ್ಜೆ ಇರಿಸಿದೆ. ನಗರದಲ್ಲಿ ಹೆಚ್ಚಾಗ್ತಿರೋ ಆಕ್ಸಿಡೆಂಟ್ ರೇಟ್ ಇಳಿಸಲು ಇದೀಗ ಬಿಎಂಟಿಸಿಗೆ ಗುದ್ದು ನೀಡಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶ ಮಾಡಿದೆ.

ಬೆಂಗಳೂರಿನಲ್ಲಿ ಹೆಚ್ಚಾದ ಬಿಎಂಟಿಸಿ ಆಕ್ಸಿಡೆಂಟ್ಸ್; ಯಮದೂತ ಡ್ರೈವರ್​ಗಳಿಗೆ ಸಂಚಾರಿ ಪೊಲೀಸರಿಂದ ಟ್ರೈನಿಂಗ್
ಬಿಎಂಟಿಸಿ
Follow us
Kiran Surya
| Updated By: ಆಯೇಷಾ ಬಾನು

Updated on: Dec 18, 2023 | 7:06 AM

ಬೆಂಗಳೂರು, ಡಿ.18: ಬಿಎಂಟಿಸಿ (BMTC) ಬೆಂಗಳೂರು ನಗರದ ಜೀವನಾಡಿ. ಮೆಟ್ರೋ ಶುರುವಾದರೂ ನಗರದಲ್ಲಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಇಳಿಯಾಗಿಲ್ಲ. ನಗರದ‌ ರಸ್ತೆ ರಸ್ತೆಯಲ್ಲೂ ಬಿಎಂಟಿಸಿ ಬಸ್​ಗಳು ಓಡಾಟ ನಡೆಸುತ್ತವೆ. ಬೆಂಗಳೂರಿನ ಟ್ರಾಫಿಕ್ ದಟ್ಟನೆಯಲ್ಲಿ ಓಡಾಟದ ವೇಳೆ ಈ ಬಿಎಂಟಿಸಿ ಬಸ್ ಗಳು ನೆಗೆಟಿವ್ ಕಾರಣಕ್ಕೆ ತುಂಬಾನೆ ಸುದ್ದಿ ಮಾಡ್ತಾವೆ (BMTC Accident). ಯಾವಾಗಲೂ ಬಿಎಂಟಿಸಿ ಡ್ರೈವರ್ ಗಳು ಸರಿಯಿಲ್ಲ, ಸರಿಯಾಗಿ ಡ್ರೈವ್ ಮಾಡಲ್ಲ, ರ್ಯಾಶ್ ಡ್ರೈವಿಂಗ್ ಮಾಡ್ತಾರೆ ಅನ್ನೋ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಮುಖ್ಯವಾಗಿ ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್ ಆಗೋದೇ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷ್ಯದಿಂದ ಅಂತ ಜನ ದೂರುತ್ತಾರೆ. ಅದರಂತೆ ನಗರದಲ್ಲಿ ಯಾರ್ರಾಬಿರ್ರಿ ಆಕ್ಸಿಡೆಂಡ್ ರೇಟ್ ಹೆಚ್ಚಳವಾಗ್ತಿದೆ. ಇದ್ರಿಂದ ತಲೆಕೆಡಿಸಿಕೊಂಡಿರೋ ಬಿಎಂಟಿಸಿ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಮೊರೆ ಹೋಗಿದೆ.

ಯಮದೂತ ಡ್ರೈವರ್ಗಳಿಗೆ ಪೊಲೀಸರಿಂದ ನೀತಿ ಪಾಠ

ಹೆಸರಿಗೆ ಕಳಂಕ ತಂದುಕೊಂಡಿದ್ದ ಬಿಎಂಟಿಸಿ ಈ ಅಪವಾದದಿಂದ ಮುಕ್ತವಾಗುವುದಕ್ಕೆ ಹೆಜ್ಜೆ ಇರಿಸಿದೆ. ಪ್ರತಿ ತಿಂಗಳೂ ನಗರದಲ್ಲಿ ಬಿಎಂಟಿಸಿ ಅಪಘಾತಗಳು ಆಗ್ತಾನೆ ಇವೆ. ಇದು ನಿಯಂತ್ರಣಕ್ಕೆ ಬರ್ತಿಲ್ಲ. 2013-14 ರಲ್ಲಿ 88 ಮಂದಿ ಮೃತಪಟ್ಟಿದ್ದರು. 2014-15ರಲ್ಲಿ 78, 2015-16ರಲ್ಲಿ 69, 2016-17ರಲ್ಲಿ 45, 2017 – 18 ರಲ್ಲಿ 44, 2022-23ರಲ್ಲಿ 35 ಮಂದಿ ಬಿಎಂಟಿಸಿ ಬಸ್ ನಿಂದ ಸಾವನ್ನಪ್ಪಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರೋ ಬಿಎಂಟಿಸಿ ಅಧಿಕಾರಿಗಳು ಎಲ್ಲಾ ಡ್ರೈವರ್ ಗಳಿಗೆ ನುರಿತ ತರಬೇತಿ ಕೊಡಿಸಲು ಮುಂದಾಗಿದ್ದಾರೆ. ನಗರದ ರಸ್ತೆಗಳಲ್ಲಿ ಹೇಗೆಲ್ಲಾ ಬಸ್ ಓಡಿಸಬೇಕು ಸಿಗ್ನಲ್ ಬಂದಾಗ ಹೇಗೆ ಬಸ್ ಓಡಿಸಬೇಕು ಅನ್ನೋ ಸಂಚಾರಿ ನಿಯಮಗಳ ಬಗ್ಗೆ ಸಂಚಾರಿ ಪೊಲೀಸರು ಡ್ರೈವರ್ ಗಳಿಗೆ ಪಾಠ ಮಾಡಲಿದ್ದಾರೆ. ನಗರದ ಕಮಾಂಡ್ ಸೆಂಟರ್ ನಲ್ಲಿ ನಿತ್ಯ 50 ಚಾಲಕರಿಗೆ ಪೊಲೀಸರು ತರಬೇತಿ ನೀಡಲಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿಗೆ ಇನ್ನೊಂದು ಬಲಿ; ತಾಯಿ ಸಾವು, ಕೂದಲೆಳೆ ಅಂತರದಲ್ಲಿ ಅಪ್ಪ-ಮಗಳು ಪಾರು

ನಗರದಲ್ಲಿ ಅಪಘಾತಗಳು ಚಾಲಕನ ಅಚಾತುರ್ಯ, ನೈಪುಣ್ಯದ ಕೊರತೆಯಿಂದ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಸಂಸ್ಥೆಯಲ್ಲಿ ಚಾಲಕರಿಗೆ ಸುರಕ್ಷಿತ ಚಾಲನೆಗೆ ಸಂಬಂಧಿಸಿದಂತೆ ತರಬೇತಿ ಸಹ ಕೊಡಿಸಲಾಗುತ್ತಿದೆ. ಇದಲ್ಲದೇ ಅಪಘಾತವೆಸಗಿದ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಚಿನ್ನ, ಬೆಳ್ಳಿ ಪದಕದ ಜೊತೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಆದರೆ ನಗರದಲ್ಲಿ ಅಪಘಾತಗಳು ನಡೆಯುತ್ತಿವೆ. ಬಿಎಂಟಿಸಿ ಡ್ರೈವರ್ ಗಳಿಗೆ ಟ್ರೈನಿಂಗ್ ನೀಡಲು ಮುಂದಾಗಿರುವುದು ಸಂತೋಷದ ವಿಚಾರ ಎಂದು ಬಿಎಂಟಿಸಿ ಪ್ರಯಾಣಿಕರು ಖುಷಿ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಾರಣಾಂತಿಕ ಅಪಘಾತಗಳ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಪಘಾತ ಪ್ರಕರಣಗಳಲ್ಲಿ ಭಾಗಿಯಾದ ಚಾಲಕರಿಗೆ ಸುರಕ್ಷಿತ ಚಾಲನೆ ಬಗ್ಗೆ ಸಲಹೆ, ಸೂಚನೆ ನೀಡುತ್ತಿದೆ. ಒಟ್ಟಿನಲ್ಲಿ ನಗರದಲ್ಲಿ ನಿತ್ಯ ಬಿಎಂಟಿಸಿ ಒಂದಲ್ಲ ಒಂದು ಸಾವು ಪಡೆಯುತ್ತನೇ ಇತ್ತು. ಇದರಿಂದ ಕಿಲ್ಲರ್ ಬಿಎಂಟಿಸಿ ಅಣೆಪಟ್ಟಿ ಪಡೆದುಕೊಂಡಿತ್ತು. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಸಿದ್ದು, ಆದರೆ ಇದೀಗ ಬಿಎಂಟಿಸಿ ಅಪಘಾತಗಳ ಸಂಖ್ಯೆ ಇಳಿಕೆ ಮಾಡೋಕೆ ಹೊಸ ಪ್ಲಾನ್ ರೂಪಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!