ಬೆಂಗಳೂರು, ನ.04: ಬಿಎಂಟಿಸಿ ಎಂಡಿ ಜಿ. ಸತ್ಯವತಿ ಅವರು ಇಂದು(ನ.04) ಬಸ್ನಲ್ಲಿ ಪ್ರಯಾಣ ಮಾಡಿ ತಪಾಸಣೆ ಮಾಡಿದ್ದಾರೆ. ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಮಹಿಳೆಯರ ಸಮಸ್ಯೆ ಕೇಳಿದ ಬಿಎಂಟಿಸಿ(BMTC) ಎಂಡಿ ಅವರು ‘ಬನಶಂಕರಿ ಡಿಪೋಗೆ ಭೇಟಿ ನೀಡಿ ಕಂಡಕ್ಟರ್, ಡ್ರೈವರ್ ಮತ್ತು ಮೆಕ್ಯಾನಿಕ್ಗಳ ಕುಂದುಕೊರತೆಗಳನ್ನು ಆಲಿಸಿದ್ದು, ಬನಶಂಕರಿಯಿಂದ ಕೋಣನಕುಂಟೆ ಮಾರ್ಗವಾಗಿ ಕಾರ್ಯಾಚರಿಸುತ್ತಿರುವ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಚಾಲಕ ಮತ್ತು ನಿರ್ವಾಹಕರಿಗೆ ತಿಳುವಳಿಕೆ ಕೂಡ ನೀಡಿದ್ದಾರೆ.
ಇನ್ನು ಈ ವೇಳೆ ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ ಅವರು, ‘ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುತ್ತಾರೆ. ಅಷ್ಟೇ ಅಲ್ಲದೇ ಈ ಕೆಳಕಂಡ ಐದು ಅಂಶಗಳ ಮೇಲೆ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಗಳನ್ನು ಪ್ರಶಂಸಿದ್ದಾರೆ.
* ನಿರ್ವಾಹಕರು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ವಾಹನಗಳಲ್ಲಿ ಚೀಟಿ ವಿತರಣೆ.
* ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತನೆ.
* ನಿರ್ವಾಹಕರು ಶಕ್ತಿ ಯೋಜನೆ ಅಡಿಯಲ್ಲಿ ದಾಖಲಾತಿಗಳನ್ನು ಪರಿಶೀಲನೆ.
* ನಿರ್ವಾಹಕರು ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಚೀಟಿ ವಿತರಣೆ.
* ಸಂಸ್ಥೆಯ ವಾಹನಗಳ ಸ್ವಚ್ಛತೆ.
ಹೀಗೆ ಹಲವು ಮಾನದಂಡಗಳ ಮೇಲೆ ಚಾಲಕ ಹಾಗೂ ನಿರ್ವಾಹಕರನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಪ್ರಶಂಸೆ ನೀಡಿದ್ದಾರೆ.
.@BMTC_BENGALURU managing director Satyavathi takes a BMTC ride to take stock of ground situation@NewIndianXpress @XpressBengaluru @KannadaPrabha @Cloudnirad @mybmtc @NammaBengaluroo pic.twitter.com/g3bqvJAsew
— Bosky Khanna (@BoskyKhanna) November 4, 2023
ಇದನ್ನೂ ಓದಿ:ಬಿಎಂಟಿಸಿ ಚಾಲಕರ ಹೃದಯಕ್ಕೆ ಆಪತ್ತು, ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಶಾಕಿಂಗ್ ಅಂಶ ಬಯಲು
ಬೆಂಗಳೂರು: ಇಂದು(ನ.04) ಬೆಳಗ್ಗೆ ಹುಳಿಮಾವು ವ್ಯಾಪ್ತಿಯಲ್ಲಿ ಓರ್ವ ಮಹಿಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟರೆ, ವಿಜಯನಗರದಲ್ಲಿ ಓರ್ವ ವ್ಯಕ್ತಿ ಬಿಎಂಟಿಸಿಗೆ ಬಲಿಯಾಗಿದ್ದಾರೆ. ವಿಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದರಾಜನಗರ ಬೈ ಟು ಕಾಫಿ ಮುಂಭಾಗ ಕುಮಾರ್ (45) ಎಂಬುವವರು ಬಿಎಂಟಿಸಿ ಬಸ್ ಅಪಘಾತದಲ್ಲಿ ಬಲಿಯಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sat, 4 November 23