ಬಿಎಂಟಿಸಿ ಚಾಲಕರ ಹೃದಯಕ್ಕೆ ಆಪತ್ತು, ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಶಾಕಿಂಗ್ ಅಂಶ ಬಯಲು

ಬಿಎಂಟಿಸಿ ಬಸ್ ಓಡಿಸುತ್ತಿರುವ ಚಾಲಕರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ಹಗಲು-ರಾತ್ರಿ ದುಡಿಯುತ್ತಿರುವ ಬಹತೇಕ ಡ್ರೈವರ್ ಗಳ ಹೃದಯ ಅಪಾಯದಲ್ಲಿಯಂತೆ. ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಈ ಅಘಾತಕಾರಿ ಅಂಶ ಬಯಲಾಗಿದೆ.

ಬಿಎಂಟಿಸಿ ಚಾಲಕರ ಹೃದಯಕ್ಕೆ ಆಪತ್ತು, ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಶಾಕಿಂಗ್ ಅಂಶ ಬಯಲು
ಬಿಎಂಟಿಸಿ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 28, 2023 | 8:25 AM

ಬೆಂಗಳೂರು, ಅ.28: ಬಸ್ ಗಳ ಕೊರತೆ, ಒವರ್ ಟೈಂ ಡ್ಯೂಟಿ, ಹಬ್ಬದ ದಿನವೂ ಕೆಲಸ, ಸದಾ ಕಿರಿಕಿರಿ, ಒತ್ತಡ ಇದು ಬಿಎಂಟಿಸಿ (BMTC) ಚಾಲಕರು ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್​ಗಳ ಶಾರ್ಟೇಜ್ ನಡುವೆ ಬಿಎಂಟಿಸಿ ಜನರಿಗಾಗಿ ಇರೋ‌ ಬಸ್ ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ. ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ

ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ. ಬಿಎಂಟಿಸಿ ಚಾಲಕರ ಪೈಕಿ ಶೇಕಡ 40-50ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ.

ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8200 ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ ನಡೆದಿದೆ. ಚಾಲಕರ ಪರೀಕ್ಷಿಸಲು 2022ರ ಆಗಸ್ಟ್‌ನಲ್ಲಿ ಒಪ್ಪಂದಕ್ಕೆ ಜಯದೇವ ಸಂಸ್ಥೆ ಸಹಿ‌ ಹಾಕಿತ್ತು.‌ ಅದರಂತೆ ಚಾಲಕರ ಬ್ಲೆಡ್ ಟೆಸ್ಟ್, ಹೃದಯದ ಒತ್ತಡ ಪರೀಕ್ಷೆ, ಇಸಿಜಿ, ಇಕೋ ಟೆಸ್ಟ್ ಸೇರಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಿತ್ತು. ತಪಾಸಣೆಗೆ ಒಳಗಾದ ಶೇಕಡಾ 40 ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ. ಅಲ್ಲದೆ ಶೇ. 40 ರಷ್ಟು ಚಾಲಕರಿಗೆ ಅಧಿಕದೊತ್ತಡ, ಶೇ. 62 ರಷ್ಟು ಚಾಲಕರಿಗೆ ಹೈ ಕೊಲೆಸ್ಟಲ್ ಪತ್ತೆಯಾಗಿದೆ. ಇವರಿಗೆ ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಅಂತ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್​ ಇದ್ದರೂ ಖಾಸಗಿ ವಾಹನಗಳ ಬಳಕೆ ಹೆಚ್ಚಳ, ಒಂದು ಕೋಟಿ ದಾಟಿದ ಒಟ್ಟು ವಾಹನಗಳ ಸಂಖ್ಯೆ

ಚಾಲಕರು ಒವರ್ ಟೈಂ ಡ್ಯೂಟಿ‌ ಮಾಡ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆಯಂತೆ. ಅಲ್ಲದೇ ಶೇ.5 ರಷ್ಟು ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆಯಂತೆ.

ಇದೇ ರೀತಿಯ ಆರೋಗ್ಯ ತಪಾಸಣೆಗಳನ್ನು ಕರ್ನಾಟಕ ಕೆಎಸ್‌ಆರ್‌ಟಿಸಿ ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಇತ್ತಿಚಿನ‌ ದಿನದಲ್ಲಿ ಹಠಾತ್ ಹೃದಯಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಕೂಡ ಹಾರ್ಟ್ ಆಟ್ಯಾಕ್ ನಿಂದ ಸತ್ತಿದ್ದಾರೆ. ಹೀಗಾಗಿ ಸದಾ ಜನರ ಸೇವೆಗೆ ದುಡಿಯುತ್ತಿರುವ ಇವರು ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಅಲ್ಲದೆ ಸಂಬಂಧಪಟ್ಟರೂ ತಮ್ಮ ಸಿಬ್ಬಂದಿ ಆರೋಗ್ಯದ ಬಗ್ಗೆ ಗಮನಹರಿಸಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!