ಕೃತಕ ನಗೆಯೊಂದಿಗೆ ನಾರ್ಮಲ್ ಆಗಿದ್ದೇನೆಂದು ಹೇಳುವ ಪ್ರಯತ್ನ ಮಾಡಿದ ಬಸನಗೌಡ ಯತ್ನಾಳ್
ಪತ್ರ ಸಿಗುವ ಮೊದಲು ಹರ್ಷದಿಂದ ಬೀಗುತ್ತಿದ್ದ ಬಸನಗೌಡ ಯತ್ನಾಳ್ ಉಚ್ಚಾಟನೆಯ ವಿಷಯ ಗೊತ್ತಾಗುತ್ತಿದ್ದಂತೆ ಮ್ಲಾನವದನರಾದರು. ಕೃತಕ ನಗೆಯೊಂದಿಗೆ ನಾರ್ಮಲ್ ಆಗಿದ್ದೇನೆಂಬ ಸಂದೇಶ ರವಾನಿಸಲು ಪ್ರಯತ್ನಿಸಿದರಾದರೂ ನೋವು ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಮುಂದೇನು ಅಂತ ಯೋಚಿಸಿಲ್ಲ, ಸದ್ಯಕ್ಕಂತೂ ವಾಪಸ್ಸು ಹೋಗುತ್ತೇನೆ ಎಂದಷ್ಟೇ ಅವರು ಮೀಡಿಯದವರಿಗೆ ಹೇಳಿದರು.
ದೆಹಲಿ, ಮಾರ್ಚ್ 26: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು ಅವರನ್ನು ಕೂಡಲೇ ಜಾರಿಯಾಗುವಂತೆ 6-ವರ್ಷ ಅವಧಿಗೆ ಪಕ್ಷದಿಂದ ಉಚ್ಚಾಟಿಸಿದೆ. ಶೋಕಾಸ್ ನೋಟೀಸ್ಗೆ ನೀವು ನೀಡಿರುವ ಉತ್ತರವನ್ನು ಪರಿಗಣಿಸಲಾಗಿದೆ, ವರ್ತನೆಯನ್ನು ತಿದ್ದಿಕೊಳ್ಳುವ ಬಗ್ಗೆ ನೀವು ಆಶ್ವಾಸನೆಯನ್ನು ನೀಡಿದರೂ ಪದೇಪದೆ ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿರುವುದರಿಂದ ನಿಮ್ಮ ನಡಾವಳಿಯನ್ನು ಗಂಭೀರವಾಗಿ ಪರಿಗಣಿಸಿ ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳುವ ಪತ್ರವನ್ನು ಯತ್ನಾಳ್ಗೆ ನೀಡಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಏಜೆಂಟ್ನಂತೆ ವರ್ತಿಸಿದ್ದಾರೆ: ರೇಣುಕಾಚಾರ್ಯ
Latest Videos

ಹೋಟೆಲ್ನ ಕೊನೆಯ ಮಹಡಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಲಗಿದ್ದ ಜೋಡಿ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ

ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ

ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
