Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ, ಗುರುವಾರ ಇಂದು ನಿಮಗೆ ಮುಖ್ಯ ಕಾರ್ಯಗಳ ನಡುವೆ ಬಿಡುವಿಲ್ಲದ ದಿನವಾಗಿರುವುದು. ಅವಿವಾಹಿತರಿಗೆ ವಿವಾಹ ಯೋಗ ಬರಲಿದ್ದು ಮನಸ್ಸಿನಲ್ಲಿ ಖುಷಿ, ಮುಖದಲ್ಲಿ ಮಂದಹಾಸ. ನಿಮ್ಮ ಬಹುವರ್ಷದ ಕನಸು ನನಸಾಗುವ ದಿನ.

ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Mar 27, 2025 | 1:18 AM

ನಿತ್ಯ ಪಂಚಾಗ: ಶಾಲಿವಾಹನ ಶಕೆ 1947 ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 06 – 32 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:09 – 15:41, ಯಮಘಂಡ ಕಾಲ 06:33 – 08:04, ಗುಳಿಕ ಕಾಲ 09:36 – 11:07

ತುಲಾ ರಾಶಿ: ಒಮ್ಮೆ ನಿಮ್ಮ ಜ್ಞಾನವೇ ನಿಮಗೆ ಮೋಸ ಮಾಡೀತು. ಇಂದು ಸಂತೋಷ ಮತ್ತು ಉತ್ಸಾಹದ ದಿನವಾಗಿರಲಿದೆ. ಆಭರಣ ಕ್ಷೇತ್ರದಲ್ಲಿ ಲಾಭ ಸಾಧ್ಯತೆ. ಮಹಿಳೆಯ ಪಾತ್ರ ನಿಮ್ಮ ಜೀವನದಲ್ಲಿ ಪ್ರಮುಖಗಬಹುದು. ಸ್ನೇಹಿತರ ಜೊತೆ ಸುಂದರವಾದ ಸ್ಥಳಗಳಿಗೆ ಹೋಗುವಿರಿ. ಅತ್ಯಂತ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಯಾರನ್ನೂ ದ್ವೇಷಿಸದೇ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ಮನೆಯವರ ಜೊತೆ ಸಮಯವನ್ನು ನೀವು ಕಳೆಯಬೇಕು ಎನ್ನಿಸಬಹುದು.

ವೃಶ್ಚಿಕ ರಾಶಿ: ಇಂದು ನೀವು ತುಂಬಾ ಭಾವುಕರಾಗುವ ಸನ್ನಿವೇಶಗಳು ಎದುರಾಗಬಹುದು. ಮಹಿಳಾ ಅಧಿಕಾರಿಗಳ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವಿವಾದಿತ ಚರ್ಚೆ ಅಥವಾ ವಾದಗಳಿಂದ ದೂರವಿರುವುದು ಸೂಕ್ತ. ದೂರದ ಬಂಧುಗಳ ಆಗಮನದಿಂದ ಜಟಿಲ ಸಮಸ್ಯೆಯ ನಿವಾರಣೆ ಮಾಡುವರು. ಕಾನೂನಿನ ವಿಷಯದಲ್ಲಿ ಸಲಹೆ ಪಡೆಯಿರಿ ಮತ್ತು ಸ್ವಂತವಾಗಿ ಯೋಚಿಸದೇ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಬಂಧುಗಳ ಜೊತೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಬಾಯಿ ತಪ್ಪುನಿಂದ ಅಸಡಿದ ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಯಾವುದೇ ಒತ್ತಡವಿಲ್ಲದ ಕೆಲಸವು ನಿಧಾನವಾಗುವುದು. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು.

​ಧನು ರಾಶಿ: ನೀವು ಇಂದು ಸ್ನೇಹಿತರು ಹಾಗೂ ಬಂಧುಗಳ ಜೊತೆ ಮನೆಯಲ್ಲಿ ಸಂತೋಷದಿಂದ ಕಳೆಯಲು ಇಷ್ಟಪಡುವಿರಿ. ಮಾಡಬೇಕಾದ ಕಾರ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಮಾಡುವ ಪ್ರಯಾಣವು ನಿಷ್ಪ್ರಯೋಜಕವಾದೀತು. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಆದರೆ ಆರೋಗ್ಯದ ಬಗ್ಗೆಯೂ ಕಾಳಜಿ ಅವಶ್ಯಕ. ಯಾರಾದರೂ ನಿಮ್ಮನ್ನು ಉದ್ವೇಗಗೊಳಿಸಬಹುದು. ಅದಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ನಿಮ್ಮ ಆಲೋಚನೆಯ ಕ್ರಮವೇ ನಿಮ್ಮ ಆರೋಗ್ಯವಾಗಿದೆ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು.

ಮಕರ ರಾಶಿ: ಇಂದು ವಹಿಸಿಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ಕೊಟ್ಟವರಿಂದ ಕೆಲವು ಮಾತುಗಳೂ ಬರಬಹುದು. ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಅತಿಯಾದ ಅವಸರದಿಂದ ತೆಗೆದು ಕೊಂಡ ನಿರ್ಧಾರದಿಂದ ಅಪಾಯವಿದೆ. ಒಂದೊಮ್ಮೆ ಮಾಡಲೇಬೇಕಿದ್ದರೆ ಸಾವಧಾನದಿಂದ ಚಿಂತಿಸಿ, ಸಲಹೆ ಪಡೆದುಕೊಳ್ಳುವುದು ಯೋಗ್ಯವಾಗಿದೆ. ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ಹಿತೈಷಿಗಳ ಸಹವಾಸದಿಂದ ಮನಸ್ಸಿಗೆ ಸಂತಸ ಉಂಟಾಗುವುದು. ಹೊಸ ವ್ಯವಹಾರಕ್ಕೆ ಭಯದ ಕಾರಣಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ತುತ್ತಾಗಬೇಕಾದೀತು.

ಕುಂಭ ರಾಶಿ: ಇಂದು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಯಾವುದೇ ಬಂಧನವಿಲ್ಲದೇ ಮುಕ್ತರಾಗಿರುವಿರಿ. ಇದು ನಿಮ್ಮ ಕಾರ್ಯಗಳಿಗೆ ಉತ್ಸಾಹ ಕೊಡುವುದು. ಕಚೇರಿಯಲ್ಲಿ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳಲಿದ್ದು, ಸಾರ್ಥಕತೆಯ ಮನೋಭಾವ ಬರುವುದು. ಮನೆಯಲ್ಲಿ ಆಪ್ತ ಬಂಧುಗಳ ಆಗಮನದಿಂದ ಸಂಭ್ರಮದ ವಾತಾವರಣ. ನಿಮ್ಮ ಮನಸ್ಸು ಸೂಕ್ಷ್ಮವಾದ ಸಂಗತಿಗಳನ್ನೂ ಇಂದು ಸ್ವೀಕರಿಸಬಹುದು. ನೀವು ಕಾಲ್ಪನಿಕ ಪ್ರಪಂಚದಿಂದ ವಾಸ್ತವಕ್ಕೆ ಬರಬೇಕಾಗುವುದು. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ನೀವು ರುಚಿಕರವಾದ ಆಹಾರದ ಸೇವನೆಯಿಂದ ಸಂತೋಷಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆತುರ ಜಾಸ್ತಿ. ಪ್ರೀತಿಯನ್ನು ಕೊಡುವವರ ಮೇಲೆ ಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ.

ಮೀನ ರಾಶಿ: ಇಂದು ನಿಮಗೆ ಮುಖ್ಯ ಕಾರ್ಯಗಳ ನಡುವೆ ಬಿಡುವಿಲ್ಲದ ದಿನವಾಗಿರುವುದು. ಯಾವುದಾದರೂ ವಿಚಾರಕ್ಕೆ ತುಂಬಾ ಭಾವುಕರಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗ ಬರಲಿದ್ದು ಮನಸ್ಸಿನಲ್ಲಿ ಖುಷಿ, ಮುಖದಲ್ಲಿ ಮಂದಹಾಸ. ನಿಮ್ಮ ಬಹುವರ್ಷದ ಕನಸು ನನಸಾಗುವ ದಿನ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿಲ್ಲದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಸಲ್ಲದ ಚರ್ಚೆ ಮಾಡುವುದನ್ನು ತಪ್ಪಿಸಿ. ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ನೀರಿಗೆ ಸಂಬಂಧಿಸಿದ ಉದ್ಯಮದಲ್ಲಿ ಆದಾಯ ಹೆಚ್ಚು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ನಿಮ್ಮನ್ನು ಅವಲೋಕನ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ