Horoscope Today 27 March : ಈ ರಾಶಿಯವರು ಮಾತಿನಿಂದ ಮನ ನೋಯಿಸುವರು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ, ಗುರುವಾರ ಮಾತಿಗೆ ಮಾತು, ಸಂಗಾತಿಗೆ ಸಂತೋಷ, ವ್ಯಾಪಾರದಲ್ಲಿ ಸಹಿಷ್ಣುತೆ, ಮಕ್ಕಳಿಗೆ ಪ್ರೀತಿ ಇದೆಲ್ಲ ಈ ದಿನ. 27-3-25ರ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ 1947 ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 06 – 32 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:09 – 15:41, ಯಮಘಂಡ ಕಾಲ 06:33 – 08:04, ಗುಳಿಕ ಕಾಲ 09:36 – 11:07
ಮೇಷ ರಾಶಿ: ನೈತಿಕ ಹೊಣೆಗಾರಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಆದಷ್ಟು ಕಾಲ್ಪನಿಕ ಜಗತ್ತಿನಿಂದ ವಾಸ್ತವಕ್ಕೆ ಬಂದು ಆಲೋಚಿಸಿ. ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆಯನ್ನು ತೋರಿಸಬಹುದು. ಸಮಾಧಾನದಿಂದ ಕಾರ್ಯ ನಿರ್ವಹಿಸಿ ದೂರದ ಗುರಿಯನ್ನು ಸುಲಭವಾಗಿ ಮುಟ್ಟುವಿರಿ. ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಸಂಗಾತಿಯ ಕಡೆಯಿಂದ ನಿಮಗೆ ಹೊಗಳಿಕೆ ಸಿಗುವುದು. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳದೇ ಕಾರ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ.
ವೃಷಭ ರಾಶಿ: ನಿಮ್ಮ ಕಾರ್ಯದಿಂದ ಖ್ಯಾತಿಯನ್ನು ಪಡೆಯುತ್ತೀರಿ. ಕುಟುಂಬದ ಜೊತೆಗಿನ ನಿಮ್ಮ ಈ ದಿನವು ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಸಹೋದ್ಯೋಗಿಗಳ ನಿರೀಕ್ಷಿತ ಬೆಂಬಲವು ಸಿಗುವುದು. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕೆ ಯಾವುದೇ ಕಾರಣಕ್ಕೂ ಸಿಕ್ಕಿಬೀಳಬೇಡಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಕಾಲಹರಣದ ಬದಲು ಉಪಯೋಗಕ್ಕೆ ಬರುವಂತೆ ಈ ದಿನವನ್ನು ರೂಪಿಸಿಕೊಳ್ಳಿ. ಈ ದಿನ ಹಸಿವು ಬಾಯಾರಿಕೆ ಅಧಿಕವಾಗಿರುವುದು.
ಮಿಥುನ ರಾಶಿ: ಸಣ್ಣ ವಿಚಾರವನ್ನೂ ಅತಿಯಾಗಿ ವಿಮರ್ಶಿಸಿದರೆ ಸಂಬಂಧದ ದಿಕ್ಕು ತಪ್ಪುವುದು. ನಿಮ್ಮ ವ್ಯಾಪಾರವು ವಿವಿಧ ಕಾರಣಗಳಿಂದ ವಿಸ್ತರಿಸಬಹುದು. ಮಕ್ಕಳ ಬಗ್ಗೆ ನಿಮ್ಮೊಳಗೆ ಆತಂಕವು ಉಂಟಾಗಬಹುದು. ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ. ಸರಿಯಾದ ಸಮಯಕ್ಕೆ ಸ್ನೇಹಿತರೊಬ್ಬರು ಬಂದು ನಿಮ್ಮ ಸಮಸ್ಯೆ ಬಗೆಹರಿಸಲಿದ್ದಾರೆ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ಹೊಸ ಬಟ್ಟೆ ಖರೀದಿಸಲಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು.
ಕರ್ಕಾಟಕ ರಾಶಿ: ನೀವು ಇಂದು ಹೊಸ ಕೆಲಸವನ್ನು ಪ್ರಾರಂಭಿಸದಿರುವುದು ಒಳ್ಳೆಯದು. ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾಡಿಕೊಳ್ಳುವ ಕಡೆ ಗಮನವಿರಲಿ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಶುಭಸುದ್ದಿ ಕೇಳುವ ದಿನ ಇಂದು. ಮಾತು ಮತ್ತು ನಡವಳಿಕೆಯನ್ನು ಮಿತದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಪ್ರಯೋಜನ ಸಿಗಲಿದೆ. ಅತಿ ಸೂಕ್ಷ್ಮವಾಗುವುದೂ ಮನಸ್ಸಿಗೆ ತೊಂದರೆಯಾಗುತ್ತದೆ. ಅನ್ಯ ಆಲೋಚನೆಯಿಂದ ನೀವು ಹಣವನ್ನು ಹೆಚ್ಚು ಖರ್ಚುಮಾಡಬೇಕಾಗುವುದು. ಕಾನೂನು ಬಾಹಿರ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಕಳೆದುಕೊಂಡದ ವಸ್ತುವಿನ ಬಗ್ಗೆ ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ.
ಸಿಂಹ ರಾಶಿ: ಇಂದು ನೀವು ಮಾತನ್ನು ಮಿತಿಯಲ್ಲಿ ಆಡಬೇಕಾಗುವುದು. ಮೇಲಧಿಕಾರಿಗಳ ಋಣಾತ್ಮಕ ಹೇಳಿಕೆಯು ನಿಮಗೆ ನೋವುಂಟು ಮಾಡಬಹುದು. ಈ ದಿನ ನೀವು ಆಲಸ್ಯದಿಂದ ಇರುವಿರಿ. ನೀವು ಕೈಗೊಂಡ ನಿರ್ಧಾರ ದಿಂದ ಹಲವರಿಗೆ ಬೇಸರ ಉಂಟಾಗಬಹುದು ಎಚ್ಚರ. ಯಾರದ್ದೋ ಮಾತು ಕೇಳಿ ನಿಮ್ಮ ಒಳ್ಳೆಯ ನಿರ್ಧಾರವನ್ನು ಬದಲಿಸದಿರಿ. ಸಂತಾನದ ವಿಚಾರದಲ್ಲಿ ಮನೆಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ಕಳೆಯುವಿರಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ಕೆಲವನ್ನು ನೀವು ನಿರ್ಲಕ್ಷಿಸುವುದೇ ಸೂಕ್ತ. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಖರ್ಚು ಮಾಡುವ ಅನಿವಾರ್ಯತೆಯು ಬರಬಹುದು.
ಕನ್ಯಾ ರಾಶಿ: ಇಂದು ನಿಮ್ಮ ಉದ್ಯೋಗ ಅನುಕೂಲಕರ ವಾತಾವರಣವಿರುತ್ತದೆ. ಹಿರಿಯರ ಜೊತೆ ಪ್ರಮುಖ ವಿಚಾರಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸುವಿರಿ. ನೀವು ಮಾಡಬೇಕು ಎಂದುಕೊಂಡ ಕೆಲಸಕ್ಕೆ ಹಲವೆಡೆಯಿಂದ ಅಡ್ಡಿ ಬರಬಹುದು. ನಿಮ್ಮ ಬಗ್ಗೆ ಪ್ರಚಾರದ ಗೀಳನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ತಾಯಿಗೆ ನಿಮ್ಮಂದ ಯಾವುದಾದರೊಂದು ಲಾಭವಾಗಬಹುದು. ಯಾರದೋ ಮೂಲಕ ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಚಾತುರ್ಯದಿಂದ ನಡೆದ ಘಟನೆಯು ನಿಮ್ಮನ್ನು ಕಾಡಬಹುದು. ಯಾರದೋ ಹುಚ್ಚುತನಕ್ಕೆ ನೀವು ಬಲಿಯಾಗುವಿರಿ. ಅಧ್ಯಯನದ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇವಲ ಓಡಾಟವಾಗುವುದು. ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ.
ತುಲಾ ರಾಶಿ: ಒಮ್ಮೆ ನಿಮ್ಮ ಜ್ಞಾನವೇ ನಿಮಗೆ ಮೋಸ ಮಾಡೀತು. ಇಂದು ಸಂತೋಷ ಮತ್ತು ಉತ್ಸಾಹದ ದಿನವಾಗಿರಲಿದೆ. ಆಭರಣ ಕ್ಷೇತ್ರದಲ್ಲಿ ಲಾಭ ಸಾಧ್ಯತೆ. ಮಹಿಳೆಯ ಪಾತ್ರ ನಿಮ್ಮ ಜೀವನದಲ್ಲಿ ಪ್ರಮುಖಗಬಹುದು. ಸ್ನೇಹಿತರ ಜೊತೆ ಸುಂದರವಾದ ಸ್ಥಳಗಳಿಗೆ ಹೋಗುವಿರಿ. ಅತ್ಯಂತ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಯಾರನ್ನೂ ದ್ವೇಷಿಸದೇ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ಮನೆಯವರ ಜೊತೆ ಸಮಯವನ್ನು ನೀವು ಕಳೆಯಬೇಕು ಎನ್ನಿಸಬಹುದು.
ವೃಶ್ಚಿಕ ರಾಶಿ: ಇಂದು ನೀವು ತುಂಬಾ ಭಾವುಕರಾಗುವ ಸನ್ನಿವೇಶಗಳು ಎದುರಾಗಬಹುದು. ಮಹಿಳಾ ಅಧಿಕಾರಿಗಳ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವಿವಾದಿತ ಚರ್ಚೆ ಅಥವಾ ವಾದಗಳಿಂದ ದೂರವಿರುವುದು ಸೂಕ್ತ. ದೂರದ ಬಂಧುಗಳ ಆಗಮನದಿಂದ ಜಟಿಲ ಸಮಸ್ಯೆಯ ನಿವಾರಣೆ ಮಾಡುವರು. ಕಾನೂನಿನ ವಿಷಯದಲ್ಲಿ ಸಲಹೆ ಪಡೆಯಿರಿ ಮತ್ತು ಸ್ವಂತವಾಗಿ ಯೋಚಿಸದೇ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಬಂಧುಗಳ ಜೊತೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಬಾಯಿ ತಪ್ಪುನಿಂದ ಅಸಡಿದ ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಯಾವುದೇ ಒತ್ತಡವಿಲ್ಲದ ಕೆಲಸವು ನಿಧಾನವಾಗುವುದು. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು.
ಧನು ರಾಶಿ: ನೀವು ಇಂದು ಸ್ನೇಹಿತರು ಹಾಗೂ ಬಂಧುಗಳ ಜೊತೆ ಮನೆಯಲ್ಲಿ ಸಂತೋಷದಿಂದ ಕಳೆಯಲು ಇಷ್ಟಪಡುವಿರಿ. ಮಾಡಬೇಕಾದ ಕಾರ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಮಾಡುವ ಪ್ರಯಾಣವು ನಿಷ್ಪ್ರಯೋಜಕವಾದೀತು. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಆದರೆ ಆರೋಗ್ಯದ ಬಗ್ಗೆಯೂ ಕಾಳಜಿ ಅವಶ್ಯಕ. ಯಾರಾದರೂ ನಿಮ್ಮನ್ನು ಉದ್ವೇಗಗೊಳಿಸಬಹುದು. ಅದಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ನಿಮ್ಮ ಆಲೋಚನೆಯ ಕ್ರಮವೇ ನಿಮ್ಮ ಆರೋಗ್ಯವಾಗಿದೆ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು.
ಮಕರ ರಾಶಿ: ಇಂದು ವಹಿಸಿಕೊಂಡ ಕೆಲಸಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ಕೊಟ್ಟವರಿಂದ ಕೆಲವು ಮಾತುಗಳೂ ಬರಬಹುದು. ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಅತಿಯಾದ ಅವಸರದಿಂದ ತೆಗೆದು ಕೊಂಡ ನಿರ್ಧಾರದಿಂದ ಅಪಾಯವಿದೆ. ಒಂದೊಮ್ಮೆ ಮಾಡಲೇಬೇಕಿದ್ದರೆ ಸಾವಧಾನದಿಂದ ಚಿಂತಿಸಿ, ಸಲಹೆ ಪಡೆದುಕೊಳ್ಳುವುದು ಯೋಗ್ಯವಾಗಿದೆ. ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ಹಿತೈಷಿಗಳ ಸಹವಾಸದಿಂದ ಮನಸ್ಸಿಗೆ ಸಂತಸ ಉಂಟಾಗುವುದು. ಹೊಸ ವ್ಯವಹಾರಕ್ಕೆ ಭಯದ ಕಾರಣಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ತುತ್ತಾಗಬೇಕಾದೀತು.
ಕುಂಭ ರಾಶಿ: ಇಂದು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಯಾವುದೇ ಬಂಧನವಿಲ್ಲದೇ ಮುಕ್ತರಾಗಿರುವಿರಿ. ಇದು ನಿಮ್ಮ ಕಾರ್ಯಗಳಿಗೆ ಉತ್ಸಾಹ ಕೊಡುವುದು. ಕಚೇರಿಯಲ್ಲಿ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳಲಿದ್ದು, ಸಾರ್ಥಕತೆಯ ಮನೋಭಾವ ಬರುವುದು. ಮನೆಯಲ್ಲಿ ಆಪ್ತ ಬಂಧುಗಳ ಆಗಮನದಿಂದ ಸಂಭ್ರಮದ ವಾತಾವರಣ. ನಿಮ್ಮ ಮನಸ್ಸು ಸೂಕ್ಷ್ಮವಾದ ಸಂಗತಿಗಳನ್ನೂ ಇಂದು ಸ್ವೀಕರಿಸಬಹುದು. ನೀವು ಕಾಲ್ಪನಿಕ ಪ್ರಪಂಚದಿಂದ ವಾಸ್ತವಕ್ಕೆ ಬರಬೇಕಾಗುವುದು. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ನೀವು ರುಚಿಕರವಾದ ಆಹಾರದ ಸೇವನೆಯಿಂದ ಸಂತೋಷಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆತುರ ಜಾಸ್ತಿ. ಪ್ರೀತಿಯನ್ನು ಕೊಡುವವರ ಮೇಲೆ ಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ.
ಮೀನ ರಾಶಿ: ಇಂದು ನಿಮಗೆ ಮುಖ್ಯ ಕಾರ್ಯಗಳ ನಡುವೆ ಬಿಡುವಿಲ್ಲದ ದಿನವಾಗಿರುವುದು. ಯಾವುದಾದರೂ ವಿಚಾರಕ್ಕೆ ತುಂಬಾ ಭಾವುಕರಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗ ಬರಲಿದ್ದು ಮನಸ್ಸಿನಲ್ಲಿ ಖುಷಿ, ಮುಖದಲ್ಲಿ ಮಂದಹಾಸ. ನಿಮ್ಮ ಬಹುವರ್ಷದ ಕನಸು ನನಸಾಗುವ ದಿನ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿಲ್ಲದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಸಲ್ಲದ ಚರ್ಚೆ ಮಾಡುವುದನ್ನು ತಪ್ಪಿಸಿ. ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ನೀರಿಗೆ ಸಂಬಂಧಿಸಿದ ಉದ್ಯಮದಲ್ಲಿ ಆದಾಯ ಹೆಚ್ಚು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ನಿಮ್ಮನ್ನು ಅವಲೋಕನ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಿ.
-ಲೋಹಿತ ಹೆಬ್ಬಾರ್-8762924271 (what’s app only)