IPL 2025: ಅನುಮತಿ ಪಡೆಯದೆ ಕೊಹ್ಲಿಯ ವಸ್ತು ಬಳಸಿದ ಸ್ವಸ್ತಿಕ್; ಮುಂದೆ ನಡೆದಿದ್ದೇನು? ವಿಡಿಯೋ ನೋಡಿ
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ, ಐಪಿಎಲ್ 2025 ರ ಮೊದಲ ಪಂದ್ಯದ ಗೆಲುವಿನ ನಂತರ ವಿರಾಟ್ ಕೊಹ್ಲಿಯ ಸುಗಂಧ ದ್ರವ್ಯವನ್ನು ಅವರ ಅನುಮತಿಯಿಲ್ಲದೆ ಬಳಸಿ ತಮಾಷೆ ಮಾಡಿದ್ದಾನೆ. ಈ ಘಟನೆಯನ್ನು ತಂಡದ ಸದಸ್ಯರು ಆಶ್ಚರ್ಯದಿಂದ ನೋಡಿದ್ದಾರೆ. ಸ್ವಸ್ತಿಕ್, ಕೊಹ್ಲಿಯನ್ನು ತನ್ನ 'ಅಣ್ಣ' ಎಂದು ಕರೆದು, ಸುಗಂಧ ದ್ರವ್ಯದ ಗುಣಮಟ್ಟ ಪರೀಕ್ಷಿಸಲು ಹಾಗೆ ಮಾಡಿದ್ದೇನೆಂದು ಹೇಳಿದ್ದಾನೆ.
ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದುಕೊಂಡಿದೆ. ಇದೀಗ ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಸಿಎಸ್ಕೆ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಸಾಕಷ್ಟು ಸಮಯವಿರುವ ಕಾರಣ ಆಟಗಾರರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಆರ್‌ಸಿಬಿ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದ ಸ್ವಸ್ತಿಕ್ ಚಿಕಾರ, ಯಾರೂ ಮಾಡಲು ಧೈರ್ಯ ಮಾಡದ ಕೆಲಸವನ್ನು ಮಾಡಿದ್ದಾರೆ. 19 ವರ್ಷದ ಸ್ವಸ್ತಿಕ್, ತಮಾಷೆಯಾಗಿ ಕೊಹ್ಲಿಯ ಅನುಮತಿ ಪಡೆಯದೆ ಅವರ ಸುಗಂಧ ದ್ರವ್ಯವನ್ನು ಬ್ಯಾಗ್ನಿಂದ ತೆಗೆದು ಬಳಸಿದ್ದಾನೆ. ಇದನ್ನು ನೋಡಿದ ಯಶ್ ದಯಾಳ್, ನಾಯಕ ರಜತ್ ಪಟಿದಾರ್ ಮತ್ತು ಇತರ ತಂಡದ ಸದಸ್ಯರು ಕೂಡ ಆಶ್ಚರ್ಯಚಕಿತರಾಗಿದ್ದಾರೆ.
ಇಡೀ ಕಥೆ ವಿವರಿಸಿದ ಯಶ್ ದಯಾಳ್
ಯಶ್ ದಯಾಳ್ ಹೇಳಿದರು, ‘ಕೋಲ್ಕತ್ತಾದಲ್ಲಿ ನಡೆದ ಪಂದ್ಯದ ನಂತರ ನಾವು ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದೆವು. ನಂತರ ಸ್ವಸ್ತಿಕ್ ವಿರಾಟ್ ಭಾಯ್ ಅವರ ಬ್ಯಾಗಿನಿಂದ ಸುಗಂಧ ದ್ರವ್ಯವನ್ನು ಹೊರತೆಗೆದು ಕೇಳದೆಯೇ ತನ್ನ ಮೇಲೆ ಸಿಂಪಡಿಸಿಕೊಂಡನು. ಎಲ್ಲರೂ ನಗಲು ಪ್ರಾರಂಭಿಸಿದರು. ವಿರಾಟ್ ಭಾಯ್ ಅಲ್ಲಿ ಕುಳಿತಿದ್ದರು, ಆದರೆ ಅವರು ಏನನ್ನೂ ಹೇಳಲಿಲ್ಲ. ಸ್ವಸ್ತಿಕ್ ಚಿಕಾರ ಅವರ ಈ ಕೃತ್ಯವನ್ನು ನೋಡಿದ ರಜತ್ ಪಟಿದಾರ್ ಕೂಡ ಆಶ್ಚರ್ಯಚಕಿತರಾಗಿದಲ್ಲದೆ, ‘ಈ ಹುಡುಗ ಏನು ಮಾಡುತ್ತಿದ್ದಾನೆಂದು ನಾನು ಯೋಚಿಸುತ್ತಿದ್ದೆ?’ ವಿರಾಟ್ ಭಾಯ್ ಮುಂದೆಯೇ ಸ್ವಸ್ತಿಕ್ ಯಾವುದೇ ಹಿಂಜರಿಕೆಯಿಲ್ಲದೆ ಅವರ ಸುಗಂಧ ದ್ರವ್ಯವನ್ನು ಬಳಸಿದರು ಎಂದಿದ್ದಾರೆ.
ವಿರಾಟ್ ನಮ್ಮ ಅಣ್ಣ- ಸ್ವಸ್ತಿಕ್
ತಾನು ಏಕೆ ಹಾಗೆ ಮಾಡಿದೆ ಎಂಬುದನ್ನು ವಿವರಿಸಿರುವ ಸ್ವಸ್ತಿಕ್, ‘ವಿರಾಟ್ ಭಾಯ್ ನಮ್ಮ ಅಣ್ಣ, ಅವರು ಯಾವುದಾದರೂ ಕೆಟ್ಟ ಸುಗಂಧ ದ್ರವ್ಯವನ್ನು ಬಳಸುತ್ತಿದ್ದಾರೆಯೇ ಎಂದು ನಾನು ಪರಿಶೀಲಿಸುತ್ತಿದ್ದೆ. ನಾನು ಅದನ್ನು ಪರೀಕ್ಷಿಸಿ ನೋಡಿದೆ, ಅದು ಚೆನ್ನಾಗಿತ್ತು’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ