Bharat Bandh: ದೂರದ ಊರಿಗೆ ಪ್ರಯಾಣ ಮಾಡುವವರು ಪ್ರಯಾಣ ಮುಂದೂಡಿ ಎಂದ ರೈತ ಮುಖಂಡ ಬಡಗಲಪುರ ನಾಗೇಂದ್ರ

ದೂರದ ಊರಿಗೆ ಪ್ರಯಾಣ ಮಾಡುವವರು ಪ್ರಯಾಣ ಮುಂದೂಡಿ ಎಂದು ಸಲಹೆ ನೀಡಿದ್ದಾರೆ. ವ್ಯಾಪಾರ ವಹಿವಾಟು ಮಾಡುವವರು ಸ್ಥಗಿತ ಮಾಡಿ ಬಂದ್ನಲ್ಲಿ ಭಾಗಿಯಾಗಬೇಕು. ಈ ಮೂಲಕ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಬೇಕು. ನಾಳಿನ ಬಂದ್ಗೆ 250 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಕೊಟ್ಟಿದೆ. -ಬಡಗಲಪುರ ನಾಗೇಂದ್ರ

Bharat Bandh: ದೂರದ ಊರಿಗೆ ಪ್ರಯಾಣ ಮಾಡುವವರು ಪ್ರಯಾಣ ಮುಂದೂಡಿ ಎಂದ ರೈತ ಮುಖಂಡ ಬಡಗಲಪುರ ನಾಗೇಂದ್ರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 26, 2021 | 12:07 PM

ಬೆಂಗಳೂರು: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಸೆಪ್ಟೆಂಬರ್ 27ರಂದು ದೇಶಾದ್ಯಂತ ಭಾರತ್ ಬಂದ್ಗೆ ಕರೆ ಕೊಟ್ಟಿದೆ. ಈ ಬಗ್ಗೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ದೇಶದ ರೈತ ಸಂಘಟನೆಗಳು, ಪ್ರಗತಿಪರರು ಕಾರ್ಮಿಕರು ದಲಿತಪರ ಸಂಘಟನೆಗಳು ಕರೆ ನೀಡಿರುವ ಬಂದ್ ಯಶಸ್ವಿಯಾಗುವ ಎಲ್ಲ ಸೂಚನೆಗಳಿವೆ ಎಂದು ತಿಳಿಸಿದ್ದಾರೆ.

ದೂರದ ಊರಿಗೆ ಪ್ರಯಾಣ ಮಾಡುವವರು ಪ್ರಯಾಣ ಮುಂದೂಡಿ ಎಂದು ಸಲಹೆ ನೀಡಿದ್ದಾರೆ. ವ್ಯಾಪಾರ ವಹಿವಾಟು ಮಾಡುವವರು ಸ್ಥಗಿತ ಮಾಡಿ ಬಂದ್ನಲ್ಲಿ ಭಾಗಿಯಾಗಬೇಕು. ಈ ಮೂಲಕ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಬೇಕು. ನಾಳಿನ ಬಂದ್ಗೆ 250 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಕೊಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನರ ಅಭೂತಪೂರ್ವ ಬೆಂಬಲ ಸಿಗಲಿದೆ. ಹೋಟೆಲ್ ಮಾಲೀಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಎಲ್ಲರೂ ಬೆಂಬಲಿ ನೀಡಬೇಕು. ಸರ್ಕಾರ ನಮ್ಮನ್ನು ಎಷ್ಟೇ ತಡೆದ್ರು ನಮ್ಮ ಬಂದ್ ಯಶಸ್ವಿಯಾಗುತ್ತದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ನೈತಿಕ ಬೆಂಬಲ ಸೂಚಿಸಿದ ಆಟೋ ಚಾಲಕರು ನಾಳಿನ ಬಂದ್ಗೆ ಆಟೋ ಚಾಲಕರಿಂದ ನೈತಿಕ ಬೆಂಬಲ ಸಿಕ್ಕಿದೆ. ಆದ್ರೆ ಸಂಪೂರ್ಣ ಬೆಂಬಲ್ಲವಿಲ್ಲ. ನಾಳೆ ಆಟೋ ಓಡಾಟ ಇರುತ್ತೆ. ಎರಡು ಲಾಕ್ಡೌನ್ ನಿಂದ ಚಾಲಕರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ತುರ್ತು ಸೇವೆ ಕೊಡಲೇ ಬೇಕು. ಆಸ್ಪತ್ರೆ ಹಾಗೂ ರೈಲ್ವೆ ಸಂಚಾರ ಇರುತ್ತೆ. ಹೀಗಾಗಿ ಗ್ರಾಹಕರ ಸೇವೆಗೆ ಆಟೋ ಓಡಾಟ ಇರುತ್ತೆ ಎಂದು ಆಟೋ ಚಾಲಕರೊಬ್ಬರು ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.

ಪದೇಪದೆ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ ಪದೇಪದೆ ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಂದ್ ಮಾಡಿದರೆ ನಾವೇ ಜನರಿಗೆ ತೊಂದ್ರೆ ಕೊಟ್ಟಂತಾಗುತ್ತೆ. ನಾಳಿನ ಭಾರತ್ ಬಂದ್ಗೆ ನಾವು ನೈತಿಕ ಬೆಂಬಲ ಸೂಚಿಸ್ತೇವೆ. ನವ ಕರ್ನಾಟಕ ರೈತ ಸಂಘದಿಂದ ನೈತಿಕ ಬೆಂಬಲ ನೀಡ್ತೇವೆ ಎಂದು ಕಲಬುರಗಿಯಲ್ಲಿ ಸಂಘದ ಅಧ್ಯಕ್ಷ ದಯಾನಂದ್ ಹೇಳಿದ್ರು.

ಇದನ್ನೂ ಓದಿ: Bharat Bandh: ಸೆಪ್ಟೆಂಬರ್ 27 ಭಾರತ್ ಬಂದ್‌, ಇದಕ್ಕೆ ಯಾರ್ಯಾರ ಬೆಂಬಲವಿದೆ?