ಬೆಂಗಳೂರು: ಸ್ಕೂಲ್ ಪೀಸ್ ವಿಚಾರಕ್ಕೆ ಸಂಬಂಧಿಸಿ ಹೈಕೊರ್ಟ್ ಫೀಸ್ ಆದೇಶದಿಂದ ಪೋಷಕರು ಕಂಗಾಲಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಫೀಸ್ ವಿನಾಯಿತಿ ಇಲ್ಲ. ಕಳೆದ ವರ್ಷ ಸರ್ಕಾರ ನೀಡಿದ್ದ ಫೀಸ್ ವಿನಾಯಿತಿಗೂ ಕೋರ್ಟ್ 15% ಕತ್ತರಿ ಹಾಕಿದೆ. ಹೀಗಾಗಿ ಶಾಲೆಗಳ ಫೀಸ್ ಕಟ್ಟಲು ಪೋಷಕರು ಪರದಾಡುವಂತ ಪರಿಸ್ಥಿತಿ ಇರ್ಮಾಣವಾಗಿದೆ.
ಸರ್ಕಾರ ನೀಡಿದ 30% ರಿಯಾಯಿತಿ ವಿರೋಧಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೆಟ್ಟಿಲೇರಿತ್ತು. ಇನ್ನೂ ಕೋಟ್೯ ಸಹ ಖಾಸಗಿ ಶಾಲೆಗಳ ಒಕ್ಕೂಟದ ಪರವಾಗಿ ಆದೇಶ ನೀಡಿತ್ತು. ಶೇ30% ಶುಲ್ಕ ಬದಲು 15% ಶುಲ್ಕ ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಇದೀಗ ಪೋಷಕರು 85% ಶುಲ್ಕ ಕಟ್ಟಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಫೀಸ್ ವಿಚಾರದಲ್ಲಿ ಸರ್ಕಾರ ಶುಲ್ಕ ನಿಗಧಿ ಸಮಿತಿ ರಚಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಹೀಗಾಗಿ ಪೋಷಕರ ಸಮನ್ವಯ ಸಮಿತಿಯಿಂದ ಇಂದು ಫೋಷಕರ ಸಭೆ ನಡೆಯಲಿದೆ. ಫ್ರೀಡಂ ಪಾರ್ಕ್ ನಲ್ಲಿ 12ಗಂಟೆಗೆ ಪೋಷಕರಿಂದ ಸಭೆ ನಡೆಯಲಿದೆ. ಮೊದಲು ಆಮ್ ಆದ್ಮಿ ವತಿಯಿಂದ ನಡೆಯುವ ಚಿಂತನ ಮಂಥನದಲ್ಲಿ ಪೋಷಕರು ಭಾಗಿಯಾಗುತ್ತಾರೆ.
ಆಮ್ ಆದ್ಮಿ ಪಕ್ಷವು ಫೀಸ್ ಇಳಿಸಿ ಮಕ್ಕಳ ಭವಿಷ್ಯ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಳಿಕ ಪೋಷಕರ ಸಮನ್ವಯ ಸಮಿತಿಯಿಂದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಫೀಸ್ ವಿಚಾರದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹಾಗು ಎಚ್ಚರಿಸುವ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ: Mann ki Baat: ಇಂದು ಪ್ರಧಾನಿ ಮೋದಿ ಮನ್ ಕೀ ಬಾತ್; ಎಲ್ಲೆಲ್ಲಿ ವೀಕ್ಷಿಸಬಹುದು? ಪ್ರಸಾರದ ಸಮಯ ಯಾವುದು? ಇಲ್ಲಿದೆ ಮಾಹಿತಿ
ಶಾಲೆ ಆರಂಭದ ಬೆನ್ನಲ್ಲೇ ಶುರುವಾಯ್ತು ಫೀಸ್ ಫೈಟ್, ಗೊಂದಲದಲ್ಲಿ ಪೋಷಕರು