Mann ki Baat: ಇಂದು ಪ್ರಧಾನಿ ಮೋದಿ ಮನ್ ಕೀ ಬಾತ್; ಎಲ್ಲೆಲ್ಲಿ ವೀಕ್ಷಿಸಬಹುದು? ಪ್ರಸಾರದ ಸಮಯ ಯಾವುದು? ಇಲ್ಲಿದೆ ಮಾಹಿತಿ
PM Narendra Modi: ಕಳೆದ ತಿಂಗಳಿನ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಲಿಂಪಿಕ್ಸ್ ಪದಕ ವಿಜೇತರನ್ನು ಶ್ಲಾಘಿಸಿದ್ದರು. ಕ್ರೀಡೆಗಳ ಬಗೆಗಿನ ಉತ್ಸಾಹ , ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ರಿಗೆ ಸಲ್ಲಿಸುವ ಗೌರವ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11ಗಂಟೆಗೆ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್(Mann ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್ ಕೀ ಬಾತ್ 81ನೇ ಆವೃತ್ತಿಯಾಗಿದೆ. ಮನ್ ಕೀ ಬಾತ್ನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲ ನೆಟ್ವರ್ಕ್ನಲ್ಲೂ ಪ್ರಸಾರ ಮಾಡಲಾಗುತ್ತದೆ. ಹಾಗೇ, ಆಲ್ ಇಂಡಿಯಾ ರೇಡಿಯೋದ ವೆಬ್ಸೈಟ್ www.newsonair.com ಮತ್ತು ಮೊಬೈಲ್ ಆ್ಯಪ್ newsonair ನಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಹಾಗೇ, ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್ಗಳಲ್ಲೂ ಮನ್ ಕಿ ಬಾತ್ ನೇರಪ್ರಸಾರಗೊಳ್ಳಲಿದೆ. ಇನ್ನು ಇಂದು ರಾತ್ರಿ 8ರ ಹೊತ್ತಿಗೆ ಆಲ್ ಇಂಡಿಯಾ ರೇಡಿಯೋದಲ್ಲಿ ಮನ್ ಕೀ ಬಾತ್ನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮರುಪ್ರಸಾರ ಮಾಡಲಾಗುತ್ತದೆ.
ಕಳೆದ ತಿಂಗಳಿನ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಲಿಂಪಿಕ್ಸ್ ಪದಕ ವಿಜೇತರನ್ನು ಶ್ಲಾಘಿಸಿದ್ದರು. ಕ್ರೀಡೆಗಳ ಬಗೆಗಿನ ಉತ್ಸಾಹ , ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ರಿಗೆ ಸಲ್ಲಿಸುವ ಗೌರವ ಎಂದು ಹೇಳಿದ್ದರು. ಒಲಿಂಪಿಕ್ಸ್ನಲ್ಲಿ 40 ವರ್ಷಗಳ ನಂತರ ನಾವು ಹಾಕಿಯಲ್ಲಿ ಪದಕ ಗೆದ್ದಿದ್ದೇವೆ. ಮೇಜರ್ ಧ್ಯಾನ್ಚಂದ್ ಅವರು ಅದೆಷ್ಟು ಖುಷಿಯಾಗಿರಬಹುದು ಎಂದು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದರು. ಹಾಗೇ, ಈಗಿನ ಪೀಳಿಗೆ ಬದಲಾಗುತ್ತಿದೆ. ಸದಾ ಹೊಸದಕ್ಕೆ ತೆರೆದುಕೊಳ್ಳುತ್ತಿದೆ. ಯುವಜನರು ರಿಸ್ಕ್ ತೆಗೆದುಕೊಳ್ಳಲು ಮುಂದಡಿ ಇಡುತ್ತಿದ್ದಾರೆ. ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಳ್ಳುತ್ತಿದ್ದಾರೆ. ಹೊಸಹೊಸ ವಲಯಗಳಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎಂದೂ ಹೇಳಿದ್ದರು.
ಇದನ್ನೂ ಓದಿ: Vastu Tips: ಧನ ಲಕ್ಷ್ಮೀ ಖುಲಾಯಿಸಬೇಕು ಅಂದರೆ ಮನೆಯಲ್ಲಿ ತಿಜೋರಿ ಇಡುವುದು ಎಲ್ಲಿ ಎಂಬುದನ್ನು ತಿಳಿದುಕೊಳ್ಳೀ
ಒಂದೇ ಒಂದು ಫೋಟೋದಿಂದ ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಪ್ರೇಮ್ ಕಹಾನಿ ಬಯಲು; ಇಬ್ಬರ ಕಥೆ ಮುಂದೇನು?