ಬೆಂಗಳೂರು, ಜೂನ್.02: ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಬಹು ನಿರೀಕ್ಷಿತ ಹಳದಿ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಲೋಕೋ ಪೈಲಟ್ ಲೆಸ್ ರೈಲಿನ ಟ್ರಯಲ್ ರನ್ ಮಾಡಿದ್ದ ಬಿಎಂಆರ್‌ಸಿಎಲ್ ಟ್ರಯಲ್ ರನ್ ಅನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ಬೆನ್ನಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭಿಸಿದೆ. ಹಳದಿ ಮಾರ್ಗದಲ್ಲಿ ಈಗ ಚಾಲಕರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಮುಕ್ತಾಯಗೊಂಡಿದ್ದು ಸಿಗ್ನಲಿಂಗ್ ಟೆಸ್ಟ್ ಆರಂಭವಾಗಿದೆ. ಹೀಗಾಗಿ ಆದಷ್ಟು ಬೇಗ ಲೋಕೋ ಪೈಲಟ್ ಲೆಸ್ ರೈಲು ಸೇವೆಗೆ ಸಿದ್ಧವಾಗಲಿದೆ. ರೈಲು ಚಾಲನೆಗೆ ಸಿದ್ಧವಾದ ನಂತರ ಮಾರ್ಗವನ್ನು ಉದ್ಘಾಟಿಸಲಾಗುತ್ತೆ.
ಬಿಎಂಆರ್‌ಸಿಎಲ್ ಚೀನಾದ ಡ್ರೈವರ್ ಲೆಸ್ ಮೆಟ್ರೋ ಮೂಲಕ ಸಿಗ್ನಲಿಂಗ್ ಟೆಸ್ಟ್ ನಡೆಸಿದೆ. ಮೆಟ್ರೋ ಅಧಿಕಾರಿಗಳು ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ಮಾಡಲಿದ್ದಾರೆ. ಇದು ಮುಗಿಯುತ್ತಿದ್ದಂತೆ ದೂರ ಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿವೆ. 18.82 ಕಿಮೀ ಉದ್ದವಿರುವ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತೆ. ಕೇಂದ್ರ ರೇಲ್ವೆ ಸುರಕ್ಷಿತ ಅಧಿಕಾರಿಗಳ ಪರಿಶೀಲನೆ ನಂತರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್ ಗಳು ಇರಲಿವೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಕಾನ್ಸ್ಟೇಬಲ್ ಸಾವಿನ ರಹಸ್ಯ ಬೇಧಿಸಲು ಬೇಕಾಯ್ತು 250 ಸಿಸಿಟಿವಿ!
2019 ರಲ್ಲಿ, ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ 1,578 ಕೋಟಿ ರೂಪಾಯಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) 216 ಕೋಚ್‌ಗಳನ್ನು ಪೂರೈಸಿತ್ತು.
ರೈಲು ಜೂನ್ 13ರ ಗುರುವಾರದಂದು ಬೊಮ್ಮಸಂದ್ರದಿಂದ ಮಧ್ಯಾಹ್ನ 12.43 ಕ್ಕೆ ಪ್ರಾಯೋಗಿಕ ರನ್‌ಗೆ ಹೊರಟಿತು ಮತ್ತು 14 ಮಧ್ಯಂತರ ನಿಲ್ದಾಣಗಳಲ್ಲಿ ತಲಾ ಎರಡು ನಿಮಿಷಗಳ ಕಾಲ ನಿಲ್ಲಿಸಿ ಆರ್‌ವಿ ರಸ್ತೆಗೆ ಬಂದಿದೆ. ಆರ್.ವಿ.ರಸ್ತೆಯಲ್ಲಿ ಅರ್ಧಗಂಟೆಯ ನಿಲುಗಡೆಯ ನಂತರ ರೈಲು ಬೊಮ್ಮಸಂದ್ರಕ್ಕೆ ವಾಪಸ್ ಹಿಂದಿರುಗಿದೆ. ಈ ಪ್ರಾಯೋಗಿಕ ಸಂಚಾರ ಪ್ರಕ್ರಿಯೆಯಲ್ಲಿ ಸಿಗ್ನಲಿಂಗ್ ಮತ್ತು ಟ್ರ್ಯಾಕ್ ಸ್ಥಿತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:07 am, Tue, 2 July 24