ಟ್ರಯಾಂಗಲ್ ಲವ್ ಸ್ಟೋರಿ: ಹಳೇ ಬಾಯ್ ಫ್ರೆಂಡ್​​ನಿಂದ ಹೊಸ ಪ್ರಿಯಕರನಿಗೆ ಚಾಕು ಇರಿತ

ಇದೊಂದು ಟ್ರಯಾಂಗಲ್​ ಲವ್​ ಸ್ಟೋರಿ. ಮಾಜಿ ಪ್ರಿಯಕರ ಹಾಲಿ ಪ್ರಿಯಕರನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈಯಾಲಿಕಾವಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.

ಟ್ರಯಾಂಗಲ್ ಲವ್ ಸ್ಟೋರಿ: ಹಳೇ ಬಾಯ್ ಫ್ರೆಂಡ್​​ನಿಂದ ಹೊಸ ಪ್ರಿಯಕರನಿಗೆ ಚಾಕು ಇರಿತ
ಯತೀಶ್​, ಚಂದನ್​
Updated By: ವಿವೇಕ ಬಿರಾದಾರ

Updated on: Aug 17, 2025 | 3:10 PM

ಬೆಂಗಳೂರು, ಆಗಸ್ಟ್​ 17: ಯುವತಿಯನ್ನು ಪ್ರೀತಿಸುವ ವಿಚಾರಕ್ಕೆ ಓರ್ವ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ (Bengaluru) ವೈಯಾಲಿಕಾವಲ್ (Vyalikaval) ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಬಳಿ ನಡೆದಿದೆ. ಯತೀಶ್ ಚಾಕು ಇರಿದ ಆರೋಪಿ. ಚಂದನ್ ಚಾಕು ಇರಿತದಿಂದ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚಂದನ್​ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದಾರೆ. ಯುವತಿ ಕೂಡ ಚಂದನ್​​ನನ್ನು ಪ್ರೀತಿಸುತ್ತಿದ್ದಾರೆ. ಇದೇ ಯುವತಿ ಚಂದನ್​ಗಿಂತ ಮೊದಲು ಆರೋಪಿ ಯತೀಶ್​ನನ್ನು ಪ್ರೀತಿಸುತ್ತಿದ್ದಳು. ಯತೀಶ್​ನೊಂದಿಗೆ ಬ್ರೇಕ್​ಅಪ್​ ಮಾಡಿಕೊಂಡು, ಚಂದನ್​​ನನ್ನು ಪ್ರೀತಿಸುತ್ತಿದ್ದಾರೆ.

ಈ ವಿಚಾರ ಯುವತಿಯ ಮಾಜಿ ಪ್ರಿಯಕರ ಯತೀಶ್​ಗೆ ಗೊತ್ತಾಗಿದೆ. ಆಗ ಆರೋಪಿ ಯತೀಶ್​ ಹಾಗೂ ಈತನ ಗ್ಯಾಂಗ್, ಚಂದನ್​ನನ್ನು ಮಾತನಾಡಲು ಕರೆಸಿಕೊಂಡು ಚಾಕುವಿನಿಂದ ಹಿರಿದಿದೆ. ಕೂಡಲೇ ಚಂದನ್ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಚಂದನ್ ಸ್ನೇಹಿತರು, ಆತನನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಚಾಕು ಹಿರಿತಕ್ಕೊಳಗಾದ ಗಾಯಾಳು ಚಂದನ್ ಸ್ಥಿತಿ ಗಂಭೀರವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Sun, 17 August 25