ಬೆಂಗಳೂರು: ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta) ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ರನ್ನು (Tushar Girinath) ನೇಮಕ ಮಾಡಿದೆ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ಗೌರವ್ ಗುಪ್ತಾ ವರ್ಗಾವಣೆ ಹೊಂದಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಟಿಕೆ ಅನಿಲ್ ಕುಮಾರ್ಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಮನೋಜ್ ಜೈನ್ ನೇಮಕಗೊಂಡಿದ್ದಾರೆ.
ಇನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಪೊನ್ನುರಾಜ್ ವರ್ಗಾವಣೆಯಾಗಿದ್ದು, ಪೊನ್ನುರಾಜ್ಗೆ ಕೆಪಿಸಿಎಲ್ ಎಂಡಿ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಹಾಗೇ, 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಓರ್ವ ಐಎಎಸ್ ಅಧಿಕಾರಿಗೆ ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ. ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ ನೇಮಕಗೊಂಡಿದ್ದಾರೆ. ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಕ್ಯಾ.ಡಾ.ರಾಜೇಂದ್ರ, ಕೆಆರ್ಐಡಿಎಲ್ ಎಂಡಿ ಆಗಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಗಿ ನಿತೇಶ್ ಪಾಟೀಲ್, ಧಾರವಾಡ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ವರ್ಗಾವಣೆಯಾಗಿದ್ದಾರೆ.
ಕೆಎಸ್ಆರ್ಟಿಸಿ ನಿರ್ದೇಶಕರಾಗಿ ಡಾ. ನವೀನ್ ಭಟ್, ಬಾಗಲಕೋಟೆ ಜಿಲ್ಲಾಧಿಕಾರಿ ಭೂ ಬಾಲನ್ ಟಿ, ಇಡಿಸಿಎಸ್ ನಿರ್ದೇಶಕರಾಗಿ ಡಾ.ದಿನೇಶ್ ಸಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್, ಕೆಯುಐಡಿಎಫ್ಸಿ ಎಂಡಿಯಾಗಿ ಶಿಲ್ಪಾ ಎಂ, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಪ್ರಸನ್ನ ಹೆಚ್, ಕಲಬುರಗಿ ಜಿ.ಪಂ. ಸಿಇಒ ಆಗಿದೆ ಡಾ.ಗಿರೀಶ್ ದಿಲೀಪ್ ಬಾಡೋಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ
ಊಟದ ಮುನ್ನವೇ ಸಿಹಿ ತಿನ್ನಬೇಕೆಂದು ಹೇಳುತ್ತೆ ಆಯುರ್ವೇದ, ಏಕೆ?
‘ಜಯರಾಜ್ ಒಬ್ಬ ಸಂತ ಅಂತ ತೋರಿಸೋಕೆ ಆಗಲ್ಲ; ಸತ್ಯವನ್ನೇ ತೋರಿಸಿದ್ದೇನೆ’: ಅಗ್ನಿ ಶ್ರೀಧರ್ ತಿರುಗೇಟು
Published On - 4:17 pm, Thu, 5 May 22