TV9 CEO Barun Das: ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಟಿವಿ9 ಸಿಇಒ ಬರುಣ್​ ದಾಸ್ ಮಾತು

ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ‘ಟಿವಿ9 ಕನ್ನಡ’ ವಾಹಿನಿಯು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್​ನಲ್ಲಿ ‘ಕನಸಿನ ಕರುನಾಡು, ಕರ್ನಾಟಕ ಸ್ಟೇಟ್ ಸಮ್ಮಿಟ್ 2023’ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸಿದ್ದು ಟಿವಿ9 ನೆಟ್​ವರ್ಕ್​ ಎಂಡಿ ಹಾಗೂ ಸಿಇಒ ಬರುಣ್​ ದಾಸ್​ ಅವರು ಮಾತುಗಳು ಇಲ್ಲಿವೆ.

Follow us
TV9 Web
| Updated By: ಆಯೇಷಾ ಬಾನು

Updated on:Sep 15, 2023 | 3:12 PM

ಬೆಂಗಳೂರು, ಸೆ.15: ಕರ್ನಾಟಕ ಕಾಂಗ್ರೆಸ್​ ಸರ್ಕಾರಕ್ಕೆ (Karnataka Congress Government) ನೂರು ದಿನ ಪೂರೈಸಿದ ಹಿನ್ನಲೆ ‘ಟಿವಿ9 ಕನ್ನಡ’ ವಾಹಿನಿಯು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್​ನಲ್ಲಿ ‘ಕನಸಿನ ಕರುನಾಡು, ಕರ್ನಾಟಕ ಸ್ಟೇಟ್ ಸಮ್ಮಿಟ್ 2023 (Karnataka State Summit)’ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕ ಬಳಿಕ ಮಾತನಾಡಿದ ಟಿವಿ9 ನೆಟ್​ವರ್ಕ್​ ಎಂಡಿ ಹಾಗೂ ಸಿಇಒ ಬರುಣ್​ ದಾಸ್​ ಅವರು ಮೊದಲಿಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಏಳಿಗೆಯಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ವೈವಿಧ್ಯತೆ, ಸಂಸ್ಕೃತಿ, ಏಕತೆಯಿಂದಾಗಿ ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ನನ್ನ ಅನುಭವದಿಂದ ಹೇಳುವುದಾದರೆ, ಕರ್ನಾಟಕಕ್ಕೆ ನೀವು ಯಾವುದೇ ಮೂಲೆಯಿಂದ ಬಂದರೂ ಇದು ಬೇರೆ ಊರು ಅನಿಸುವುದಿಲ್ಲ. 40 ವರ್ಷಗಳಿಂದ ಇದು ಐಟಿ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆಯುತ್ತಿದೆ. ಜೊತೆಗೆ ಸ್ಟಾರ್ಟ್ ಅಪ್ ಮಾಡುವವರಿಗೂ ನೆಲೆ ಕೊಟ್ಟಿದೆ. ಬೆಂಗಳೂರು ಮತ್ತು ಮೈಸೂರು ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವಲ್ಲಿ ಹೆಚ್ಚಿನ ಹೆಸರು ಪಡೆದುಕೊಂಡಿವೆ. ಕರ್ನಾಟಕ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಭವಿಷ್ಯ ಪೀಳಿಗೆಗೆ ಉತ್ತಮ ವೇದಿಕೆಯಾಗಿದೆ ಎಂದರು

ಉತ್ಪಾದಕತಾ ವಲಯದಲ್ಲಿ ಕರ್ನಾಟಕ ಸ್ಪರ್ಧಾತ್ಮಕವಾಗಿದೆ. ಉತ್ಪಾದಕತಾ ವಲಯದಲ್ಲಿ ಕರ್ನಾಟಕದ ಕೊಡುಗೆ ಗಣನೀಯವಾಗಿದೆ. ಈ ಕ್ಷೇತ್ರದಿಂದ ಈಗಾಗಲೇ ದೇಶದ ಜಿಡಿಪಿಗೆ ಅಧಿಕ ಕೊಡುಗೆ ನೀಡಿದೆ. ಕರ್ನಾಟಕದ ಉತ್ಪಾದಕತಾ ವಲಯ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಿದರೆ ದೇಶದ ಜಿಡಿಪಿಗೆ ರಾಜ್ಯ ಗರಿಷ್ಠ ಕೊಡುಗೆ ನೀಡಲಿದೆ ಎಂದು ನನಗೆ ವಿಶ್ವಾಸವಿದೆ. ದೇಶದ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಕನಸು ನನಸಾದೀತು.

ಭಾರತದ ಏಕಮೇವ ಅಜೆಂಡಾ ಪ್ರಗತಿಯಷ್ಟೇ ಆಗಬೇಕಿದೆ. ದೇಶದ ಅಭಿವೃದ್ಧಿ ಬಗ್ಗೆ ನನಗೆ ನಂಬಿಕೆಯಿದೆ. ಇದು ರಾಜ್ಯಗಳ ಒಕ್ಕೂಟ ವ್ಯವಸ್ಥೆಯೊಂದಿಗೆ ಸಾಧ್ಯವಾದೀತು ಎಂಬುದನ್ನು ಮನಗಾಣಬೇಕು. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರದಿಂದಷ್ಟೇ ಅಲ್ಲ, ಸ್ಪರ್ಧಾತ್ಮಕತೆಯಿಂದ ಇದು ಕಾರ್ಯಗತವಾಗಬೇಕಿದೆ ಎಂದರು.

ಇದನ್ನೂ ಓದಿ: TV9 Karnataka Summit 2023 Live: ಸರ್ಕಾರಕ್ಕೆ 100 ದಿನ ಸಂಭ್ರಮ; ಸಿಎಂ ಸಿದ್ದರಾಮಯ್ಯ ಸಂದರ್ಶನ

ಇನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅತಿ ದೊಡ್ಡ ಟಿವಿ ನೆಟ್​​​ವರ್ಕ್ ಸಾರಥ್ಯವನ್ನು ನಾನು ಹೊಂದಿದ್ದೇನೆ. 3,500 ಸಹೋದ್ಯೋಗಿಗಳೊಂದಿಗೆ ನಾನು ಕಾರ್ಯಮಗ್ನರಾಗುತ್ತೇವೆ. ಅನೇಕ ಬಾರಿ ನಮ್ಮ ಮಧ್ಯೆಯೂ ಸ್ಪರ್ಧಾತ್ಮಕತೆ ಮನೆ ಮಾಡಿರುತ್ತದೆ. ಶ್ರೇಷ್ಠತೆಯನ್ನು ಕಾಣಲು ವ್ಯಕ್ತಿಗತವಾಗಿ ನಾವೂ ಪ್ರತಿಯೊಬ್ಬರೂ ಅತ್ಯಂತ ಪೈಪೋಟಿಯಿಂದಲೇ ಕೆಲಸ ಮಾಡಬೇಕಾಗುತ್ತದೆ. ಆದರೆ ದಿನದ ಕೊನೆಗೆ ನಾವೆಲ್ಲಾ ಒಂದೇ ಗುರಿಯೊಂದಿಗೆ ಕೆಲಸ ಮಾಡುತ್ತಿರುತ್ತೇವೆ ಎಂಬುದನ್ನು ನಾನು ಮನನ ಮಾಡಿಕೊಡುತ್ತಿರುತ್ತೇನೆ. ಅದರಿಂದಾಗಿ ನಾವೆಲ್ಲಾ ಒಟ್ಟಾಗಿ ಗೆಲ್ಲಬಹುದು. ಅಥವಾ ಒಟ್ಟಿಗೆ ಸೋಲಬಹುದು. ಸರ್ಕಾರದ ಆಡಳಿತಕ್ಕೆ ಹೋಲಿಸಿದಲ್ಲಿ ಸಂಸ್ಥೆಯಾಗಿ ನಮ್ಮದು ಸಾಧಾರಣ ಎನಿಸಬಹುದು. ಆದರೂ ನಮ್ಮದೆಲ್ಲಾ ಒಂದೇ ಕನಸು ಇದೆ. ಅದು ವಿಶ್ವಮಟ್ಟದಲ್ಲಿ ಭಾರತದ ಏರುಗತಿ ಸಾಧಿಸುವುದಾಗಿದೆ ಎಂದು ಸಿಇಒ ಬರುಣ್​ ದಾಸ್ ಹೇಳಿದರು.

ಈ ಬೆಳವಣಿಗೆಯನ್ನು ಸಾಧಿಸಲು ಟಿವಿ9 ನೆಟ್​​ವರ್ಕ್​​ನ ಇಂದಿನ ಈ ಮಹೋನ್ನತ ಶೃಂಗಸಭೆಯಲ್ಲಿ ಹೊರಹೊಮ್ಮುವ ಐಡಿಯಾಗಳು ಮತ್ತು ದೂರದೃಷ್ಟಿತನಗಳ ಒಗ್ಗೂಡುವಿಕೆಯು ಆಧಾರವಾಗಲಿದೆ ಎಂಬುದು ನನ್ನ ನಂಬಿಕೆ. ಕರ್ನಾಟಕ ಅಂದರೆ ಅದೊಂದು ರಾಜ್ಯವಷ್ಟೇ ಅಲ್ಲ. ಅದು ಪ್ರಗತಿಯನ್ನು ಹೊದ್ದುಕೊಂಡಿದೆ. ಅದಮ್ಯ ಬದ್ಧತೆ ಹೊಂದಿದೆ. ಕರ್ನಾಟಕದ ಅಪಾರ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ನಂಬಿಕೆಯಿದೆ. ಈ ಕಾಲಘಟ್ಟದಲ್ಲಿ ರಾಜ್ಯ ಮತ್ತು ದೇಶದ ಭವ್ಯ ಭವಿಷ್ಯಕ್ಕಾಗಿ ಒಟ್ಟಿಗೆ ಕೈಜೋಡಿಸಿ ಹೊಸ ಅಧ್ಯಾಯವನ್ನು ಬರೆಯೋಣ. ಮತ್ತೊಮ್ಮೆ ನಾನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಅವರ ಸಂಪುಟ ಸಹೋದ್ಯೋಗಿಗಳಿಗೆ ಮತ್ತು ಇಲ್ಲಿ ನೆರೆದಿರುವ ಎಲ್ಲ ಗಣ್ಯರಿಗೂ ಧನ್ಯವಾದ ಹೇಳುವೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:27 pm, Fri, 15 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್