ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2023 | 6:18 PM

ಟಿವಿ9 ಡಿಜಿಟಲ್​ ವರದಿ ಪ್ರಸಾರ ಬೆನ್ನಲೆ ನೂರು ಹೊಚ್ಚ ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಖರೀದಿಸಿದೆ. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್​ಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳು ಮುಂದಾಗಿದ್ದು, ಮೊದಲ ಹಂತದಲ್ಲಿ ನೂರು ಟಾಟಾ ಕಂಪನಿಯ ಇವಿ ಬಸ್​ಗಳು ಆಗಮಿಸಿವೆ.

ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ
Follow us on

ಬೆಂಗಳೂರು, ಡಿಸೆಂಬರ್​​ 15: ಬಿಎಂಟಿಸಿ (BMTC) ಹಳೆಯ ಬಸ್​​ಗಳ ಬಗ್ಗೆ ಟಿವಿ9 ಡಿಜಿಟಲ್​ ವರದಿ ಪ್ರಸಾರ ಬೆನ್ನಲೆ ನೂರು ಹೊಚ್ಚ ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಖರೀದಿಸಿದೆ. ಬರುವ ವಾರ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಲಿದ್ದಾರೆ. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್​ಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳು ಮುಂದಾಗಿದ್ದು, ಮೊದಲ ಹಂತದಲ್ಲಿ ನೂರು ಟಾಟಾ ಕಂಪನಿಯ ಇವಿ ಬಸ್​ಗಳು ಆಗಮಿಸಿವೆ.

12 ವರ್ಷಗಳ ಗುತ್ತಿಗೆ ಆಧಾರದ ಅಡಿಯಲ್ಲಿ ರಾಜಧಾನಿಯಲ್ಲಿ ಈ ನೂರು ಹವಾನಿಯಂತ್ರಣ ರಹಿತ ವಿದ್ಯುತ್ ಚಾಲಿತ ಬಸ್​ಗಳು ಸಂಚಾರ ನಡೆಸಲಿವೆ.

ಇವಿ ಬಸ್​ಗಳ ವೈಶಿಷ್ಟ್ಯಗಳೇನು?

  • 12 ಮೀಟರ್ ಉದ್ದದ 400 ಮಿಮಿ ಫ್ಲೋರ್ ಎತ್ತರದ ಹವಾನಿಯಂತ್ರಣ ರಹಿತ ಬಸ್​ ಇದಾಗಿದೆ.
  • 35 ಸಂಖ್ಯೆ ಪ್ಲಾಸ್ಟಿಕ್ ಮೌಲ್ಡೆಡ್ ಪ್ರಯಾಣಿಕರ ಆಸನಗಳು.
  • ಚಾಲಕರ ಅನುಕೂಲಕ್ಕಾಗಿ ಬಸ್ಸಿನ ಒಳಬಾಗದಲ್ಲಿ 03 ಕ್ಯಾಮರಾ ಮತ್ತು ಹಿಂದಿನ ಭಾಗದಲ್ಲಿ 01 ಕ್ಯಾಮರಾ ಅಳವಡಿಕೆ.
  • ಒಂದು ಬಾರಿ ಚಾರ್ಜ್​ನೊಂದಿಗೆ ಪ್ರತಿ ದಿನ 200 ಕಿಮೀ ಸಂಚಾರ ಮಾಡುತ್ತದೆ.
  • ಪ್ರಯಾಣಿಕರಿಗೆ ಮತ್ತು ಅಂಗವಿಕಲರ ಅನುಕೂಲಕ್ಕಾಗಿ 04 ಎಲ್​​ಇಡಿ ಡೆಸ್ಟಿನೇಷನ್ ಬೋರ್ಡ್ ಮತ್ತು ವಾಯ್ಸ್ ಅನೌನ್ಸ್ಮೆಂಟ್ ಅಳವಡಿಸಲಾಗಿದೆ.
  • ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 10 ಪ್ಯಾನಿಕ್ ಬಟನ್​ ಅಳವಡಿಸಲಾಗಿರುತ್ತದೆ.
  • ಫೈರ್ ಡಿಟೆಕ್ಷನ್ ಮತ್ತು ಅಲರ್ಮಿಂಗ್ ವ್ಯವಸ್ಥೆ ಮತ್ತು ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ.
  • ಹೊಗೆ ರಹಿತ ಹಾಗೂ ಪರಿಸರ ಸ್ನೇಹಿ.
  • ಅಂಗವಿಕಲರಿಗಾಗಿ ವೀಲ್ ಚೇರ್ ಪ್ರವೇಶಕ್ಕೆ ನಿಲಿಂಗ್ ವ್ಯವಸ್ಥೆ.
  • ಸ್ಟಾಪ್ ಕೋರಿಕೆ ಸ್ವೀಚ್.
  • ಪ್ರಯಾಣಿಕರ ಸುರಕ್ಷತೆಗಾಗಿ ಬಸ್​ ಚಾಲನೆಯಲ್ಲಿರುವಾಗ ಬಸ್ಸಿನ ಬಾಗಿಲನ್ನು ತೆರೆಯಲು ಸಾಧ್ಯವಾಗುವುದಿಲ್ಲ.
  • ಬಸ್ಸಿನ ಬಾಗಿಲುಗಳು ಮುಚ್ಚಿದ ನಂತರವೇ ವಾಹನ ಚಲಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.