ಟಿವಿ9 ವರದಿ ಫಲಶ್ರುತಿ: 5500 ಹೊಸ ಬಸ್ ಖರೀದಿಗೆ ಮುಂದಾದ ಸಾರಿಗೆ ಇಲಾಖೆ

ಬಿಎಂಟಿಸಿ ಬಸ್​​ಗಳೇ ಬೆಂಗಳೂರಿನ ಟ್ರಾಫಿಕ್ ಜಾಮ್​ಗೆ ಕಾರಣವಾಗುತ್ತಿರುವ ವಿಚಾರ ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಅಂಕಿ ಅಂಶದಿಂದ ತಿಳಿದುಬಂದಿದೆ. ಬಿಎಂಟಿಸಿ ಮಾತ್ರವಲ್ಲದೆ, ಸಾರಿಗೆ ಸಂಸ್ಥೆಯ ಇತರ ವಿಭಾಗಗಳ ಬಸ್​ಗಳೂ ಇದೇ ರೀತಿ ಕೆಟ್ಟುನಿಂತಿದ್ದ ಬಗ್ಗೆಯೂ ‘ಟಿವಿ9’ ವರದಿ ಉಲ್ಲೇಖಿಸಿತ್ತು.

ಟಿವಿ9 ವರದಿ ಫಲಶ್ರುತಿ: 5500 ಹೊಸ ಬಸ್ ಖರೀದಿಗೆ ಮುಂದಾದ ಸಾರಿಗೆ ಇಲಾಖೆ
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us
| Updated By: ಗಣಪತಿ ಶರ್ಮ

Updated on: Nov 17, 2023 | 6:16 PM

ಬೆಂಗಳೂರು, ನವೆಂಬರ್ 17: ಬಿಎಂಟಿಸಿ (BMTC) ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಇತರ ವಿಭಾಗಗಳ ಬಸ್​ಗಳು ನಡುರಸ್ತೆಯಲ್ಲಿಯೇ ಕೆಟ್ಟುನಿಂತು ಟ್ರಾಫಿಕ್​​ ಜಾಮ್​ಗೆ ಕಾರಣವಾಗುತ್ತಿರುವ ಮತ್ತು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ‘ಟಿವಿ9’ ಕೆಲವು ದಿನಗಳ ಹಿಂದಷ್ಟೇ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇದೀಗ, 5500 ಹೊಸ ಬಸ್ ಖರೀದಿಗೆ ಮುಂದಾಗಿದೆ. ಇದರೊಂದಿಗೆ ಸಾರಿಗೆ ನಿಗಮಕ್ಕೆ ಹೊಸ ಬಸ್​​ಗಳು ಬರುವುದು ಖಾತರಿಯಾಗಿದೆ.

ನಾಲ್ಕೂ ನಿಗಮಗಳಿಗೆ 12 ಸಾವಿರಕ್ಕೂ ಹೆಚ್ಚು ಬಸ್​​ಗಳ ಅವಶ್ಯಕತೆ ಇದ್ದು 2024 ಆರಂಭದಲ್ಲಿ 5500 ಬಸ್​ಗಳು ಬರಲಿವೆ. ಮುಂದಿನ ದಿನಗಳಲ್ಲಿ ಮಿಕ್ಕ 7000 ಬಸ್ ಖರೀದಿಗೆ ಸರ್ಕಾರ ಮುಂದಾಗಲಿದೆ. ಬಿಎಂಟಿಸಿಗೆ 1500 ಸಾವಿರ ಕೆಎಸ್ಆರ್ಟಿಸಿಗೆ 2 ಸಾವಿರ ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆಗೆ ತಲಾ ಒಂದು ಸಾವಿರ ಬಸ್ ಖರೀದಿ ಮಾಡಲಾಗುತ್ತಿದೆ.

ನಡುರಸ್ತೆಯಲ್ಲೇ ಕೆಟ್ಟುನಿಲ್ಲುತ್ತಿರುವ ಬಸ್​ಗಳು!

ಬಿಎಂಟಿಸಿ ಬಸ್​​ಗಳೇ ಬೆಂಗಳೂರಿನ ಟ್ರಾಫಿಕ್ ಜಾಮ್​ಗೆ ಕಾರಣವಾಗುತ್ತಿರುವ ವಿಚಾರ ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಅಂಕಿ ಅಂಶದಿಂದ ತಿಳಿದುಬಂದಿದೆ. ಬಿಎಂಟಿಸಿ ಮಾತ್ರವಲ್ಲದೆ, ಸಾರಿಗೆ ಸಂಸ್ಥೆಯ ಇತರ ವಿಭಾಗಗಳ ಬಸ್​ಗಳೂ ಇದೇ ರೀತಿ ಕೆಟ್ಟುನಿಂತಿದ್ದ ಬಗ್ಗೆಯೂ ‘ಟಿವಿ9’ ವರದಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಬಿಎಂಟಿಸಿಯಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್, ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು?

ಜನವರಿಯಲ್ಲಿ 152, ಫೆಬ್ರವರಿಯಲ್ಲಿ 158, ಮಾರ್ಚ್​​​ನಲ್ಲಿ 160 ಬಸ್​ಗಳು ಕೆಟ್ಟುಹೋಗಿವೆ. ಏಪ್ರಿಲ್​​ನಲ್ಲಿ 110, ಮೇನಲ್ಲಿ 112, ಜೂನ್​ನಲ್ಲಿ 130, ಜುಲೈ 160, ಆಗಸ್ಟ್ 167, ಸೆಫ್ಟೆಂಬರ್159 ಹಾಗೂ ಅಕ್ಟೋಬರ್ 170 ಬಸ್​ಗಳು ನಡುರಸ್ತೆಯಲ್ಲಿ ಕೆಟ್ಟುಹೋಗಿವೆ ಎಂಬುದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಯಲು ಮಾಡಿತ್ತು. ಈ ಕುರಿತು ‘ಟಿವಿ9’ ವಿಸ್ತೃತ ವರದಿ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ