ಬೆಂಗಳೂರು: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಮದ್ವೆಯಾದ ಭೂಪ, ಸೀಮಂತ ಕಾರ್ಯಕ್ರಮದಲ್ಲಿ ನಡೆಯಿತು ಮಾರಾಮಾರಿ!
ವ್ಯಕ್ತಿಯೋರ್ವ ಮೊದಲ ಪತ್ನಿ ಕಣ್ತಪ್ಪಿಸಿ ಎರಡನೇ ಮದುವೆಯಾಗಿದ್ದ. ಈಗ ಸೀಮಂತ ಕಾರ್ಯಕ್ರಮ ಸಹ ನಡೆಯುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿ ಕುಟುಂಬದವರು ಸ್ಥಳಕ್ಕೆ ತೆರಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಎರಡು ಕುಟುಂಬದ ಮಧ್ಯೆ ಮಾರಾಮಾರಿಯಾಗಿದೆ.

ಬೆಂಗಳೂರು: ಮೊದಲ ಸಂಗಾತಿ ಜೀವಂತವಾಗಿದ್ದರೂ ಆಕೆಗೆ ಜೀವನಾಂಶ ಕೊಡದೇ ನ್ಯಾಯಾಲಯದ ಮೂಲಕ ವಿಚ್ಛೇದನವನ್ನು ಪಡೆಯದೇ ಗಂಡು ಎರಡನೇ ಮದುವೆಯಾಗುವುದು ಕಾನೂನಿನ ಪ್ರಕಾರ ಅಪರಾಧ. ಹೀಗಿದ್ದರೂ ಸಹ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿ ಮೊದಲ ಹೆಂಡತಿಯ ಡಿವೋರ್ಸ್ ಕೇಸ್ ಕೋರ್ಟ್ನಲ್ಲಿ ನಡೆಯುತ್ತಿದ್ದರೂ ಎರಡನೇ ಮದುವೆಯಾಗಿದ್ದಾನೆ. ಹೌದು…ತೇಜಸ್ ಎನ್ನುವ ವ್ಯಕ್ತಿ ಮೊದಲ ಹೆಂಡತಿ ಕಣ್ತಪ್ಪಿಸಿ ಎರಡನೇ ಮದುವೆಯಾಗಿದ್ದು, ಇಂದು(ಫೆಬ್ರವರಿ 09) ಚಂದ್ರ ಲೇಔಟ್ ನಲ್ಲಿ 2ನೇ ಹೆಂಡ್ತಿಯ ಸೀಮಂತ ಕಾರ್ಯಕ್ರಮ ಸಹ ನಡೆದಿತ್ತು. ಈ ವಿಷಯ ತಿಳಿದ ಮೊದಲ ಹೆಂಡತಿ ಕುಟುಂಬದವರು ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ.
ಎರಡನೇ ಮದುವೆ ವಿಚಾರ ತಿಳಿದು ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಚೈತ್ರಾ ಕುಟುಂಬ ಮಹಿಳಾ ಸಂಘಟನೆಯೊಂದಿಗೆ ಹೋಗಿದೆ. ಈ ವೇಳೆ ತೇಜಸ್ ಮೊದಲ ಪತ್ನಿ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ.
ತೇಜಸ್ ಹಾಗೂ ಚೈತ್ರಾ 2018 ರಲ್ಲಿ ಮದುವೆ ಆಗಿದ್ದರು. ಆದ್ರೆ, ಮದುವೆ ತೇಜಸ್ಗೆ ಬೇರೋಬ್ಬರ ಜೊತೆ ಅಕ್ರಮ ಸಂಬಂಧ ಇತ್ತು. ಎಂದು ಚೈತ್ರ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೇ ಅಕ್ರಮ ಸಂಬಂದ ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ತೇಜಸ್, ಪತ್ನಿ ಚೈತ್ರ ಮೇಲೆ ಹಲ್ಲೆ ಮಾಡಿದ್ದ. ಈಗ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ಬಾಕಿ ಇದೆ. ಆದರೂ ತೇಜಸ್ ಮತ್ತೊಬ್ಬಳ ಜೊತೆ ಮದುವೆ ಆಗಿದ್ದಾರೆ ಎಂದು ಮೊದಲ ಪತ್ನಿ ಚೈತ್ರಾ ಕುಟುಂಬದವರು ಪ್ರಶ್ನಿಸಿದ್ದಾರೆ. ಆದ್ರೆ, ತೇಜಸ್ ಕುಟುಂಬದವರು ಚೈತ್ರಾ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ.
ಮೊದಲ ಪತ್ನಿ ಹೇಳುವುದೇನು?
ಫೋಟೋ ತೆಗೆದುಕೊಳ್ಳಲು ಹೋದಾಗ ಹಲ್ಲೆ ನಡೆಸಿದ್ದಾರೆ. ತೇಜಸ್‌ನಿಂದ 4-5 ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ಇಡೀ ಕುಟುಂಬವನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಅನ್ಯಾಯ ಮಾಡಿದ್ದಾರೆ, ನ್ಯಾಯಬೇಕಿದೆ. ಹುಡುಗಿ ಜೊತೆ ಓಡಾಡುವ ಫೋಟೋ ಸಿಕ್ಕಿತ್ತು. ಇದರ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದ. ಹಣ, ಆಸ್ತಿ ಇದೆ ಎಂದು ತೇಜಸ್ ದರ್ಪ ತೋರುತ್ತಿದ್ದಾರೆ. ಮೇಘನಾ ಯಾದವ್ ಜೊತೆ 2ನೇ ಮದುವೆ ಆಗಿರುವುದಾಗಿ ಹೇಳಿದ್ರು. ವಿಜಯನಗರದಲ್ಲಿ ಮೇಘಾಶ್ರೀ ಇದಾಳೆ. ಆಕೆಯೂ ಗರ್ಭಿಣಿ. ಬಳಿಕ ಲೇಖನಾ ಎಂಬುವವರ ಜೊತೆ ಮೂರನೇ ಮದುವೆ ಆಗಿದ್ದರು. ಲೇಖನಾ ಸೀಮಂತ ಕಾರ್ಯಕ್ರಮ ವೇಳೆ ಹೋದಾಗ ಗಲಾಟೆ ನಡೆದಿದೆ ಎಂದು ಮೊದಲ ಪತ್ನಿ ಚೈತ್ರಾ ಸ್ಪಷ್ಟಪಡಿಸಿದರು.
Published On - 4:33 pm, Thu, 9 February 23