ಬೆಂಗಳೂರು ವಿವಿಯ ಇಬ್ಬರು ಸಿಂಡಿಕೇಟ್ ಸದಸ್ಯರ ಅಮಾನತು! ಸಾಮೂಹಿಕ ರಾಜೀನಾಮೆ ನೀಡಲು ಉಳಿದ ಸದಸ್ಯರಿಂದ ನಿರ್ಧಾರ

ಬೆಂಗಳೂರು ವಿವಿಯ ಇಬ್ಬರು ಸಿಂಡಿಕೇಟ್ ಸದಸ್ಯರ ಅಮಾನತು! ಸಾಮೂಹಿಕ ರಾಜೀನಾಮೆ ನೀಡಲು ಉಳಿದ ಸದಸ್ಯರಿಂದ ನಿರ್ಧಾರ
ಸುದ್ದಿಗೋಷ್ಠಿ ನಡೆಸಿದ ಸಿಂಡಿಕೇಟ್ ಸದಸ್ಯರು

ಈ ನಡುವೆ ಕುಲಪತಿ ಪ್ರೊ. ಡಾ. ಕೆ ಆರ್ ವೇಣುಗೋಪಾಲ್ ಸುಪ್ರೀಂ ಕೋರ್ಟ್​ನಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಕೆಲವೊಂದು ವಿಚಾರಗಳಲ್ಲಿ ಕುಲಪತಿ ಒಬ್ಬರೇ ನಿರ್ಧಾರ ತೆಗೆದುಕೊಂಡಿದ್ದಾರೆ.

TV9kannada Web Team

| Edited By: sandhya thejappa

Apr 11, 2022 | 11:10 AM

ಬೆಂಗಳೂರು: ಸೇವೆಯ ಅವಧಿ 8 ತಿಂಗಳು ಬಾಕಿಯಿದ್ದರೂ ಬೆಂಗಳೂರು ವಿವಿಯ (Bengaluru University) ಇಬ್ಬರು ಸಿಂಡಿಕೇಟ್ ಸದಸ್ಯರು (Syndicate Members) ಅಮಾನತುಗೊಂಡಿದ್ದಾರೆ. ಕಾರಣ ತಿಳಿಸದೆ ಅವಧಿಗೂ ಮುನ್ನವೇ ಪ್ರೇಮ್ ಮತ್ತು ಗೋವಿಂದರಾಜು ಎಂಬ ಇಬ್ಬರು ಸಿಂಡಿಕೇಟ್ ಸದಸ್ಯರು ಅಮಾನತುಗೊಂಡಿದ್ದಾರೆ. ಇಬ್ಬರ ರಿಲೀವ್ ಬೆನ್ನಲ್ಲೇ ಇದೀಗ ಎಲ್ಲಾ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು ಬಾಕಿ 6 ಜನ ಸಿಂಡಿಕೇಟ್ ಸದಸ್ಯರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕುಲಪತಿಗಳ ನೇಮಕ ಕ್ರಮಬದ್ಧವಾಗಿಲ್ಲ ಎಂದು ಸಿಂಡಿಕೇಟ್ ದಾಖಲೆಗಳನ್ನೂ ಒದಗಿಸಿತ್ತು. ಜೊತೆಗೆ ಕುಲಪತಿಗಳ ಸ್ಥಾನಕ್ಕೆ ಕೂಡಲೇ ಬೇರೊಬ್ಬರನ್ನು ನೇಮಿಸುವಂತೆ ಪಟ್ಟು ಹಿಡಿದಿತ್ತು.

ಈ ನಡುವೆ ಕುಲಪತಿ ಪ್ರೊ. ಡಾ. ಕೆ ಆರ್ ವೇಣುಗೋಪಾಲ್ ಸುಪ್ರೀಂ ಕೋರ್ಟ್​ನಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಕೆಲವೊಂದು ವಿಚಾರಗಳಲ್ಲಿ ಕುಲಪತಿ ಒಬ್ಬರೇ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿಂಡಿಕೇಟ್ ಸದಸ್ಯರ ಅಭಿಪ್ರಾಯವನ್ನು ಕೇಳಿಯೂ ಇಲ್ಲ, ಅಭಿಪ್ರಾಯವನ್ನು ತಿಳಿಸಿದಾಗ ಗಣನೆಗೂ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ವಿ ರಾಜು, ಸರ್ಕಾರದ ನಾಮನಿರ್ದೇಶಿತ ಇಬ್ಬರು ಸದಸ್ಯರನ್ನು ಸರ್ಕಾರ ವಜಾ ಮಾಡಿದೆ. ಸಿಂಡಿಕೇಟ್ ಸದಸ್ಯರ ಸಬ್ ಕಮಿಟ ಇರುತ್ತೆ. ಫಿನಾನ್ಸ್ ಕಮಿಟಿಯನ್ನು ಪುನರ್ ರಚನೆ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸಿಂಡಿಕೇಟ್ ಸದಸ್ಯರಿಗೆ ಮಾಹಿತಿ ನೀಡಿಲ್ಲ. ನಾಮಿನೇಟೆಡ್ ಸದಸ್ಯರನ್ನು ಯಾವುದೇ ವಜಾ ಮಾಡಲು ವಿಸಿಗೆ ಅಧಿಕಾರ ಇಲ್ಲ. ವಿಸಿ ಅಧಿಕಾರ ಹೊರತುಪಡಿಸಿ ಈ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.

ವಿಶ್ವವಿದ್ಯಾಲಯದಲ್ಲಿ 16 ಜನರ ಕೆಲಸವನ್ನು ಖಾಯಂ ಆಗಿ ನೇಮಿಸಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಯೂನಿವರ್ಸಿಟಿಯಲ್ಲಿ ಪ್ರೊಫೆಸರ್​ಗಳ ನೇಮಕಾತಿ, ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲ NEPಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಟ್ಟಡ ನಿರ್ಮಾಣ ಕೆಲಸಗಳು ಕೂಡ ಸಬ್ ಕಮಿಟಿಯಲ್ಲಿ ಚರ್ಚೆ ಮಾಡದೇ ಬೇಕಾದವರಿಗೆ ಟೆಂಡರ್ ನೀಡಿದ್ದಾರೆ. ಇಲ್ಲಿ ಸಾಕಷ್ಟು ಆರ್ಥಿಕ ಮೋಸಗಳಾಗಿವೆ. ಸಿಂಡಿಕೇಟ್ ಸದಸ್ಯರಿಗೆ ತಿಳಿಸದೇ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರಿಗೆ ಕಿಂಚಿತ್ತು ಮಾರ್ಯದೆ ನೀಡಿಲ್ಲವಾದರೆ ಅಲ್ಲಿ ಯಾಕೆ ಇರಬೇಕು? ಹೀಗಾಗಿ ರಾಜೀನಾಮೆ ನೀಡಬೇಕು ಎಂದು ನಮಗೆ ಅನಿಸುತ್ತಿದೆ. ಶಿಕ್ಷಣ ವರ್ಗದಲ್ಲಿ ಈ ರೀತಿಯಾದರೆ ರಾಜ್ಯ ಯೂನಿವರ್ಸಿಟಿ ಯಾವುದೇ ಅಭಿವೃದ್ಧಿಯಾಗಲ್ಲ. ಮೌಲ್ಯಗಳಿಲ್ಲದೆ ಶಿಕ್ಷಣ ಕೇಂದ್ರ ನಡೆಯಬಾರದು ಎಂಬುದು ನಮ್ಮ ಉದ್ದೇಶ ಅಂತ ವಿವಿ ಸಿಂಡಿಕೇಟ್ ಸದಸ್ಯ ಟಿ.ವಿ ರಾಜು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಗುಜರಾತ್​ನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ, ಬೆಂಕಿ; ಆರು ಮಂದಿ ಕಾರ್ಮಿಕರ ದುರ್ಮರಣ

ಅಲ್ಲಹು ಅಕ್ಬರ್ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ತನಿಖೆ ನಡೆಸಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಂಸದ ಅನಂತಕುಮಾರ ಹೆಗಡೆ

Follow us on

Related Stories

Most Read Stories

Click on your DTH Provider to Add TV9 Kannada