Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲಿ ಬೆಂಗಳೂರಿನಲ್ಲೂ ಉಬರ್​ ಷಟಲ್​ ಬಸ್​ ಸೇವೆ ಆರಂಭ!

ಬೆಂಗಳೂರಿನಲ್ಲಿ ಉಬರ್ ಷಟಲ್ ಸೇವೆಯನ್ನು ಶೀಘ್ರದಲ್ಲಿ ಆರಂಭಿಸಲು ಉಬರ್ ಯೋಜಿಸುತ್ತಿದೆ. ಆರಂಭಿಕ ಹಂತದಲ್ಲಿ ಐಟಿ ಕಾರಿಡಾರ್‌ನ ಕೆಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ನಡುವೆ ಸೇವೆ ಲಭ್ಯವಾಗಲಿದೆ. ಇದು ಐಟಿ ಉದ್ಯೋಗಿಗಳಿಗೆ ಸಂಚಾರ ದಟ್ಟಣೆಯಿಂದ ಪರಿಹಾರ ನೀಡುವ ಉದ್ದೇಶ ಹೊಂದಿದೆ.

ಶೀಘ್ರದಲ್ಲಿ ಬೆಂಗಳೂರಿನಲ್ಲೂ ಉಬರ್​ ಷಟಲ್​ ಬಸ್​ ಸೇವೆ ಆರಂಭ!
Follow us
ವಿವೇಕ ಬಿರಾದಾರ
|

Updated on:Oct 25, 2024 | 3:14 PM

ಬೆಂಗಳೂರು, ಅಕ್ಟೋಬರ್​ 25: ಬೆಂಗಳೂರಿನ (Bengaluru) ಬಹುತೇಕ ಜನರು ಉಬರ್ (Ubar) ಆ್ಯಪ್​ ಬಳಸುತ್ತಿದ್ದಾರೆ. ಉಬರ್​ ಕಂಪನಿ ಕೂಡ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದು, ಹೊಸ ಪ್ರಯೋಗಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಎಂಬಂತೆ “ಉಬರ್​ ಷಟಲ್​ ಬಸ್” (Uber Shuttle) ಸೇವೆ ಆರಂಭಿಸಲು ಕಂಪನಿ ನಿರ್ಧರಿಸಿದೆ.

ಈ ಕುರಿತಾಗಿ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಪ್ರಭಜೀತ್ ಸಿಂಗ್ ಮಾತನಾಡಿ, ಉಬರ್ ಷಟಲ್​ ಸೇವೆಯನ್ನು ಈಗಾಗಲೆ ದೆಹಲಿ, ಕೊಲ್ಕತ್ತಾ, ಹೈದರಾಬಾದ್​ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಆರಂಭಿಸಲಾಗಿದೆ. ಇನ್ಮುಂದೆ ಬೆಂಗಳೂರಿನಲ್ಲೂ ಉಬರ್ ಷಟಲ್​ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಟ್ರಾಫಿಕ್​ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಐಟಿ ಕಾರಿಡಾರ್​ನ ಕೆಆರ್​ಪುರಂ ಮತ್ತು ಸಿಲ್ಕ್​​ ಬೋರ್ಡ್​ (18 ಕಿಮೀ) ಮಧ್ಯೆ ಉಬರ್ ಷಟಲ್​ ಆರಂಭಿಸಲು ನಿರ್ಧರಿಸಲಾಗಿದೆ. ಈ ಐಟಿ ಕಾರಿಡಾರ್ ಸುಮಾರು 30 ಟೆಕ್ ಪಾರ್ಕ್​​ಗಳನ್ನು ಒಳಗೊಂಡಿದ್ದು, 15 ಲಕ್ಷದಷ್ಟು ಐಟಿ ಉದ್ಯೋಗಿಗಳು ಇದ್ದಾರೆ. ಹೀಗಾಗಿ ಈ ಉಬರ್ ಷಟಲ್ ಬೆಂಗಳೂರಿನಲ್ಲೂ ಪ್ರಾರಂಭಿಸುವ ಉದ್ದೇಶ ಇದೆ ಎಂದು ತಿಳಿಸಿದರು.

ಉಬರ್​ ಷಟಲ್​ ಆರಂಭಿಸಲು ಕೆಲವು ಮಧ್ಯಸ್ಥಗಾರರೊಂದಿಗೆ ಸಭೆ ನಡೆಸುತ್ತಿದ್ದೇವೆ. ಉಬರ್ ಷಟಲ್ ಅತ್ಯಂತ ಪರಿಣಾಮಕಾರಿ, ಕೈಗೆಟುಕುವ ದರ ಮತ್ತು ಸಾರ್ವಜನಿಕ ಸಾರಿಗೆಗೆ ಪೂರಕವಾಗಿದೆ. ಹೆಬ್ಬಾಳ ಮತ್ತು ಹೊರವರ್ತುಲ ರಸ್ತೆಯಲ್ಲಿ ಹವಾನಿಯಂತ್ರಿತ ಬಸ್​​ ಸೇವೆ ಆರಂಭಿಸಬಹುದಾಗಿದೆ. ಇದು ಸಾರ್ವಜನಿಕ ಸಾರಿಗೆಗೆ ಪರ್ಯಾಯ ಆಯ್ಕೆ ಕಲ್ಪಿಸಲಿದೆ. ಉಬರ್​ ಷಟಲ್ ಸೇವೆ ಬೆಂಗಳೂರಿನಲ್ಲಿ ಒಂದು ಅಥವಾ ಎರಡು ವರ್ಷಗಳಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿದ್ದೇನೆ ಎಂದರು.

ಇದನ್ನೂ ಓದಿ: Viral: ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಉಬರ್‌ನಲ್ಲಿ ಒಂಟೆ ಟ್ಯಾಕ್ಸಿ ಬುಕ್‌ ಮಾಡಿದ ಮಹಿಳೆ

ಉಬರ್​ ವಾಹನ ಬಾಡಿಗೆ ಏರಿಕೆ ಮತ್ತು ಚಾಲಕರ ಮೇಲೆ ಹೆಚ್ಚಿನ ಕಮಿಷನ್​ ಶುಲ್ಕವನ್ನು ವಿಧಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಪೀಕ್​ ಅವರ್​ಗಳಲ್ಲಿ ಉಬರ್​ ವಾಹನ ಕಡಿಮೆ ಪೂರೈಕೆಯಿದ್ದರೆ ಬೆಲೆಗಳು ಏರಿಳಿತವಾಗುತ್ತವೆ. ಇದಕ್ಕೆ ಪರಿಹಾರ ವಾಹನಗಳ ಸಂಖ್ಯೆ ಹೆಚ್ಚಳ ಮಾಡುವುದರ ಮುಖಾಂತರ ಬೆಲೆ ಕಡಿಮೆ ಮಾಡಬಹುದು ಎಂದು ಹೇಳಿದರು.

ಪೀಕ್ ಅವರ್‌ಗಳಲ್ಲಿ ಗ್ರಾಹಕರು 800 ರೂ. ಬದಲಿಗೆ 950 ರೂ. ಪಾವತಿಸಲು ಸಿದ್ಧರಿದ್ದರೆ, ಅವರು ಉಬರ್​ ಕಾರು ಪಡೆಯಬಹುದು. ಆದಾಗ್ಯೂ, ಬೆಲೆಯು 1,400 ರೂ. ನಂತಹ ಕೆಲವು ಮಿತಿಗಳನ್ನು ಮೀರಬಾರದು. ಅಧಿಕ ಪೂರೈಕೆಯ ಸಮಯದಲ್ಲೂ ಕಡಿಮೆ ಬೆಲೆ ಇರಬೇಕು ಎಂದು ವಿವರಿಸಿದರು.

ಉಬರ್​ ಷಟಲ್​ ಆರಂಭದ ಸಲುವಾಗಿ ಕರ್ನಾಟಕ ಸಾರಿಗೆ ಇಲಾಖೆ ಅನುಮತಿ ನೀಡಬೇಕಿದೆ. ಇದಕ್ಕೆ ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:14 pm, Fri, 25 October 24

ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ