Viral: ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಉಬರ್‌ನಲ್ಲಿ ಒಂಟೆ ಟ್ಯಾಕ್ಸಿ ಬುಕ್ ಮಾಡಿದ ಮಹಿಳೆ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಬಹುಬೇಗನೆ ನೋಡುಗರ ಗಮನ ಸೆಳೆಯುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬರು ಉಬರ್‌ನಲ್ಲಿ ಒಂಟೆ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಾರೆ. ಹೌದು ದುಬೈನ ಮರುಭೂಮಿಯಲ್ಲಿ ಸಿಕ್ಕಿಬಿದ್ದ ಆಕೆ ಮುಂದೇನು ಮಾಡಬೇಕೆಂದು ಗೊತ್ತಾಗದೆ ಊಬರ್ ಅಪ್ಲಿಕೇಷನ್ ಓಪನ್ ಮಾಡಿ ಅಲ್ಲಿ ಒಂಟೆ ರೈಡ್ ಸೇವೆಯನ್ನು ಬುಕ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಕ್ಯಾಬ್ ಆಪ್ಲಿಕೇಷನ್‌ಗಳಲ್ಲಿ ಕಾರ್, ಆಟೋ, ಬೈಕ್ ಟ್ಯಾಕ್ಸಿ ಸೇವೆಗಳ ಆಯ್ಕೆ ಇರುತ್ತದೆ. ಇದರಲ್ಲಿ ಯಾವುದು ನಮಗೆ ಸೂಕ್ತ ಅನ್ನಿಸುತ್ತದೆಯೋ ಆ ಟ್ಯಾಕ್ಸಿಯನ್ನು ಬುಕ್ ಮಾಡ್ತೇವೆ. ಆದ್ರೆ ದುಬೈನಲ್ಲಿ ಒಂಟೆ ಟ್ಯಾಕ್ಸಿ ಕೂಡಾ ಲಭ್ಯವಿದೆ. ಹೌದು ಕಣ್ರೀ ಇಲ್ಲಿನ ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂದರ್ಭದಲ್ಲಿ ಅಲ್ಲಿಂದ ಹೊರಬರಲು ಪ್ರವಾಸಿ ಮಹಿಳೆಯೊಬ್ಬರು ಉಬರ್‌ನಲ್ಲಿ ಇದೇ ಒಂಟೆ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ದುಬೈನ ಈ ವಿಶೇಷ ಕ್ಯಾಬ್ ಸೇವೆಯನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.
ದುಬೈಗೆ ಪ್ರವಾಸಕ್ಕೆಂದು ಹೋದ ಮಹಿಳೆಯರಿಬ್ಬರು ಇಲ್ಲಿನ ಅಲ್ ಬುಡಯೆರ್‌ನಲ್ಲಿ ಡೆಸರ್ಟ್ ಸಫಾರಿಗೆಂದು ಹೋದಾಗ ಅಲ್ಲೇ ಎಲ್ಲೋ ಕಳೆದುಹೋಗುತ್ತಾರೆ. ಇಲ್ಲಿಂದ ಹೇಗಪ್ಪಾ ಹೊರ ಬರೋದು ಎಂದು ಗೊತ್ತಾಗದೆ ಯಾವುದಾದ್ರೂ ಟ್ಯಾಕ್ಸಿ ಸಿಗ್ಬೋದ ಅಂತ ಯೋಚನೆ ಮಾಡಿ ಉಬರ್ ಆಪ್‌ನಲ್ಲಿ ಟ್ಯಾಕ್ಸಿ ಬುಕ್ ಮಾಡಲು ಹೋದಾಗ ಅಲ್ಲಿ ಒಂಟೆ ಟ್ಯಾಕ್ಸಿ ಆಯ್ಕೆಯನ್ನು ಕಂಡು ಅವರಿಬ್ಬರು ಶಾಕ್ ಆಗಿದ್ದಾರೆ. ಅದೇ ಒಂಟೆ ಟ್ಯಾಕ್ಸಿಯನ್ನು ಆಯ್ಕೆ ಮಾಡಿ, ಹಾಗೋ ಹೀಗೋ ಮಹಿಳೆ ಮರು ಭೂಮಿಯಿಂದ ಹೊರ ಹೋಗಿದ್ದಾರೆ.
ಈ ಕುರಿತ ವಿಡಿಯೋವನ್ನು jetset.bubai ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಮಹಿಳೆ ತಮ್ಮ ಮೊಬೈಲ್ ಫೋನ್‌ನಲ್ಲಿ ಉಬರ್ ಆಪ್ಲಿಕೇಷನ್ ತೆರೆದು ಇಲ್ನೋಡಿ ಒಂಟೆ ಟ್ಯಾಕ್ಸಿಯೂ ಕೂಡಾ ಇಲ್ಲಿ ಲಭ್ಯವಿದೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು. ಆ ಒಂಟೆ ಟ್ಯಾಕ್ಸಿಯನ್ನು ಬುಕ್ ಮಾಡಿದಾಗ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯೊಬ್ಬ ಇವರಿರುವ ಸ್ಥಳಕ್ಕೆ ಒಂಟೆಯೊಂದಿಗೆ ಬಂದಿದ್ದು, ಈ ದೃಶ್ಯವನ್ನು ಕಂಡು ಆ ಮಹಿಳೆ ಆಯಶ್ಚರ್ಯಚಕಿತರಾಗಿದ್ದಾರೆ. ಮತ್ತು ಆ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಜವಾಗಿಯೂ ಇದು ಟ್ಯಾಕ್ಸಿಯೇ ಅಂತ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಆತ ಹೌದು ಇದು ಒಂಟೆ ಟ್ಯಾಕ್ಸಿ. ಮರುಭೂಮಿಯಲ್ಲಿ ಕಳೆದುಹೋದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ಸಲುವಾಗಿ ಈ ಸೇವೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಮಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಉಬರ್ ಒಂಟೆಗೂ ನಂಬರ್ ಪ್ಲೇಟ್ ಇದೆಯಾ?ʼ ಎಂಬ ತಮಾಷೆಯ ಕಾಮೆಮಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಫಾರಿಗಾಗಿ ಪ್ರಾಣಿ ಹಿಂಸೆಯನ್ನು ಮಾಡುವುದನ್ನು ನಿಲ್ಲಿಸಿʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ