AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲವ್‌ ಬ್ರೇಕಪ್; ಫುಡ್‌ ಡೆಲಿವರಿ ಆ್ಯಪ್ ಮೂಲಕ ಮಾಜಿ ಗೆಳತಿಯ ಚಲನವಲನವನ್ನು ಟ್ರ್ಯಾಕ್‌ ಮಾಡಿ ಟಾರ್ಚರ್‌ ನೀಡುತ್ತಿದ್ದ ಬೆಂಗಳೂರಿನ ವ್ಯಕ್ತಿ

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಲಿಂಕ್ಡ್‌ಇನ್‌ನಲ್ಲಿ ಹಲವರು ಕುತೂಹಲಕಾರಿ ಸ್ಟೋರಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ಮಹಿಳೆಯೊಬ್ಬರು ತಮ್ಮ ಸ್ನೇಹಿತೆಗೆ ಸಂಬಂಧಿಸಿದ ಕಥೆಯೊಂದನ್ನು ಹಂಚಿಕೊಂಡಿದ್ದು, ಆಕೆಯ ಎಕ್ಸ್‌ ಬಾಯ್‌ಫ್ರೆಂಡ್‌ ಫುಡ್‌ ಡೆಲಿವರಿ ಆ್ಯಪ್ ಮೂಲಕ ಆಕೆಯ ಚಲನವಲನವನ್ನು ಟ್ರ್ಯಾಕ್‌ ಮಾಡಿ ಟಾರ್ಚರ್‌ ನೀಡುತ್ತಿದ್ದನು ಎಂದು ಹೇಳಿ ಬಳಕೆದಾರರ ಡೇಟಾ ಗೌಪ್ಯತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Viral: ಲವ್‌ ಬ್ರೇಕಪ್; ಫುಡ್‌ ಡೆಲಿವರಿ ಆ್ಯಪ್ ಮೂಲಕ ಮಾಜಿ ಗೆಳತಿಯ ಚಲನವಲನವನ್ನು ಟ್ರ್ಯಾಕ್‌ ಮಾಡಿ ಟಾರ್ಚರ್‌ ನೀಡುತ್ತಿದ್ದ ಬೆಂಗಳೂರಿನ ವ್ಯಕ್ತಿ
ವೈರಲ್​​​ ಪೋಸ್ಟ್​​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 23, 2024 | 11:12 AM

Share

ಲವ್‌ ಬ್ರೇಕಪ್‌ ಬಳಿಕವು ತನ್ನನ್ನು ಬಿಟ್ಟು ಹೋದ್ಳು ಎಂಬ ಕೋಪಕ್ಕೆ ಕೆಲವರು ಎಕ್ಸ್‌ ಗರ್ಲ್‌ಫ್ರೆಂಡ್‌ಗೆ ಬ್ಲಾಕ್‌ಮೇಲ್‌ ಮಾಡುವಂತಹದ್ದು, ಸುಮ್ಮಮ್ಮನೆ ಟಾರ್ಚರ್‌ ಕೊಡುವಂತಹದ್ದು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಖತರ್ನಾಕ್‌ ವ್ಯಕ್ತಿ ಕೂಡಾ ತನ್ನ ಮಾಜಿ ಗೆಳತಿಯ ಚಲನವಲನದ ಮೇಲೆ ಕಣ್ಣಿಟ್ಟು ಆಕೆಗೆ ಟಾರ್ಚರ್‌ ನೀಡುತ್ತಿದ್ದ. ಹೌದು ಫುಡ್‌ ಡೆಲಿವರಿ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಡೆಲಿವರಿ ಆ್ಯಪ್ ಮೂಲಕ ತನ್ನ ಮಾಜಿ ಗೆಳತಿಯ ಡೇಟಾಗಳನ್ನು ಸಂಗ್ರಹಿಸಿ ಆಕೆ ಎಲ್ಲಿ ಹೋಗ್ತಿದ್ದಾಳೆ, ಏನ್‌ ಮಾಡ್ತಿದ್ದಾಳೆ ಎಂಬುದನ್ನೆಲ್ಲಾ ಟ್ರಾಕ್‌ ಮಾಡಿ ಆಕೆಗೆ ಟಾರ್ಚರ್‌ ನೀಡುತ್ತಿದ್ದ. ಈ ಸ್ಟೋರಿಯನ್ನು ಮಹಿಳೆಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ರೂಪಲ್‌ ಮಧುಪ್‌ (Rupal Madhup) ಎಂಬವರು ತನ್ನ ಸ್ನೇಹಿತೆಗೆ ಆಕೆಯ ಮಾಜಿ ಗೆಳೆಯ ಫುಡ್‌ ಡೆಲಿವರಿ ಅಪ್ಲಿಕೇಶನ್‌ ಡೇಟಾವನ್ನು ಬಳಸಿ ಆಕೆಗೆ ಯಾವ ರೀತಿ ಟಾರ್ಚರ್‌ ನೀಡುತ್ತಿದ್ದ ಎಂಬ ಕಥೆಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ರೂಪಲ್‌ ಸ್ನೇಹಿತೆಯೊಬ್ಬಳು ಫುಡ್‌ಡೆಲಿವರಿ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯೊಂದಿಗೆ ಡೇಟಿಂಗ್‌ ಮಾಡಲು ಆರಂಭಿಸುತ್ತಾರೆ. ಆದ್ರೆ ಕೆಲ ಕಾರಣಗಳಿಂದ ಇವರಿಬ್ಬರ ಮಧ್ಯೆ ಬ್ರೇಕಪ್‌ ಆಗುತ್ತೆ. ಇದರಿಂದ ಕೋಪಗೊಂಡ ಆ ವ್ಯಕ್ತಿ ತನ್ನ ಸಿಸ್ಟಮ್‌ನಲ್ಲಿ ಮಾಜಿ ಗೆಳತಿಯ ಡೇಟಾವನ್ನು ಕದ್ದು, ಆಕೆಯ ಚಲನವಲನದ ಮೇಲೆ ಗಮನವಿಡಲು ಆರಂಭಿಸುತ್ತಾನೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ

ಅಷ್ಟೇ ಅಲ್ಲದೆ ನೀವು 2 ಗಂಟೆಯಾದ್ರೂ ಏಕೆ ನೀವಿರುವ ಸ್ಥಳದಿಂದ ಆರ್ಡರ್‌ ಮಾಡುತ್ತಿಲ್ಲ?, ನೀವು ಎಲ್ಲಿದ್ದೀರಿ?, ನೀವು ಚೆನ್ನೈನಲ್ಲಿ ಏನು ಮಾಡುತ್ತಿದ್ದೀರಿ?, ಚಾಕೊಲೇಟ್‌ಗಳನ್ನು ಆರ್ಡರ್‌ ಮಾಡಿದ್ದೀರಿ, ಏನು ನೀವು ಮುಟ್ಟಿನ ಸಮಯದಲ್ಲಿದ್ದೀರಾ? ಎಂಬಲ್ಲಾ ಪ್ರಶ್ನೆಗಳನ್ನು ಕೇಳಿ ಟಾರ್ಚರ್‌ ನಿಡುತ್ತಿದ್ದನಂತೆ. ಮೊದ ಮೊದಲು ರೂಪಲ್‌ ಸ್ನೇಹಿತೆಗೂ ಇದೆಲ್ಲಾ ಇದೆಲ್ಲಾ ವಿಚಿತ್ರವೆಂದು ತೋರುತ್ತಿತ್ತಂತೆ ಹಾಗೂ ಇದೆಲ್ಲಾ ಯಾರು ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿರಲಿಲ್ಲವಂತೆ. ಕೊನೆಗೆ ಮಾಜಿ ಗೆಳೆಯನೇ ತನ್ನ ಡೇಟಾವನ್ನು ಬಳಸಿಕೊಂಡು ಈ ರೀತಿ ಟಾರ್ಚರ್‌ ನೀಡುತ್ತಿದ್ದಾನೆ ಎಂಬ ವಿಚಾರ ತಿಳಿದು ಆ ಯುವತಿ ಶಾಕ್‌ ಆಗಿದ್ದಾಳೆ. ಈ ಕಥೆಯನ್ನು ಹಂಚಿಕೊಳ್ಳುವ ಮೂಲಕ ಬಳಕೆದಾರರ ಡೇಟಾ ಗೌಪ್ಯತೆಗಳ ಬಗ್ಗೆ ರೂಪಲ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಂಪು ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1,500 ಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸ್ವಿಗ್ಗಿ ಸೇರಿದಂತೆ ಹೆಚ್ಚಿನ ಟೆಕ್‌ ಕಂಪೆನಿಗಳಂತೆ ತನ್ನ ಬಳಕೆದಾರರ ಡೇಟಾವನ್ನು ರಕ್ಷಿಸಲು ಕಟ್ಟುನಿಟ್ಟಾದ ಗೌಪ್ಯತೆ ನೀತಿಗಳು ಮತ್ತು ಭದ್ರತಾ ಕ್ರಮವನ್ನು ಬಳಸುತ್ತದೆ. ಆದ್ರೂ ಇದೆಲ್ಲಾ ಹೇಗೆ ಸಾಧ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಸ್ಟೋರಿ ಭಯಾನಕವಾಗಿದೆʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ