AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೆಂಪು ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಪ್ರತಿಯೊಬ್ಬರು ಕೂಡಾ ತಾವು ಎಲ್ಲರಿಗಿಂತ ಭಿನ್ನವಾಗಿ, ವಿಶೇಷವಾಗಿ ಮದುವೆಯಾಗಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕೆಲವರು ಕೋಟಿಗಟ್ಟಲೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿಯೂ ಕೂಡಾ ಬಹಳ ವಿಭಿನ್ನವಾಗಿ ಮದುವೆಯಾಗಿದ್ದು, ಸೌದಿ ಅರೇಬಿಯಾದ ಈ ಜೋಡಿ ಕೆಂಪು ಸಮುದ್ರದ ನೀರಿನಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯ ಸುಂದರ ಪೋಟೋಗಳು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Viral: ಕೆಂಪು ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 22, 2024 | 6:24 PM

Share

ಮದುವೆಯ ದಿನವನ್ನು ಜೀವನಪರ್ಯಂತ ಸ್ಮರಣೀಯವಾಗಿರಿಸಲು ಹಲವರು ತಾವು ಬಹಳ ವಿಶೇಷವಾಗಿ ಹಾಗೂ ಎಲ್ಲರಿಗಿಂತ ಮದುವೆಯಾಗಬೇಕಾಗಿ ಬಯಸುತ್ತಾರೆ. ಕೆಲವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ರಾಯಲ್‌ ಥೀಮ್‌ನಲ್ಲಿ ಗ್ರ್ಯಾಂಡ್‌ ಆಗಿ ಮದುವೆಯಾದರೆ, ಕೆಲವರು ವಿದೇಶದ ತಮ್ಮ ನೆಚ್ಚಿನ ಸ್ಥಳದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಹಿಮ ಪರ್ವತದ ಮೇಲೆ ಮದವೆಯಾದವರೂ ಇದ್ದಾರೆ. ಇಂತಹ ವಿಶಿಷ್ಟ ಮದುವೆಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಹರಿದಾಡುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್‌ ಆಗಿದ್ದು, ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ಆಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶಿಷ್ಟ ಮದುವೆ ಪೋಟೋಗಳು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಸೌದಿ ಅರೇಬಿಯಾದ ಹಸನ್‌ ಅಬು ಅಲ್‌ ಓಲಾ ಮತ್ತು ಯಾಸ್ಮಿನ್‌ ಇಲ್ಲಿನ ಜೆಡ್ಡಾದ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ಇದು ಸೌದಿ ಅರೇಬಿಯಾದಲ್ಲಿ ಸಮುದ್ರದಾಳದಲ್ಲಿ ನಡೆದ ಮೊದಲ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮದುವೆಯ ಸುದ್ದಿ ಸಖತ್‌ ವೈರಲ್‌ ಆಗುತ್ತಿದ್ದು, ಇದೊಂದು ಮರೆಯಲಾಗದ ಅನುಭವ ಎಂದು ಮದುಮಗ ಹಸನ್‌ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿರುವ ಆಟೋದಲ್ಲಿ ಪ್ರೇಮಿಗಳ ರೊಮ್ಯಾನ್ಸ್, ಕಾಲ ಕೆಟ್ಟೋಯ್ತು ಗುರು

ವೈರಲ್​​ ಫೋಟೋ ಇಲ್ಲಿದೆ ನೋಡಿ:

ಹಸನ್‌ ಮತ್ತು ಯಾಸ್ಮಿನ್‌ ಸ್ಕೂಬಾ ಡೈವಿಂಗ್‌ ಮತ್ತು ಸಾಹಸ ಕ್ರೀಡೆಗಳಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದು, ಇದೇ ಕಾರಣದಿಂದ ಸಮುದ್ರದಾಳದಲ್ಲಿ ಮದುವೆಯಾಬೇಕೆಂದು ಬಯಸಿದ್ದರು. ಇದೀಗ ಇವರು ತಮ್ಮಿಚ್ಛೆಯಂತೆ ಆಳ ಸಮುದ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್‌ ಫೈಸಲ್‌ ಫ್ಲಾಂಬನ್‌ ನೇತೃತ್ವದ ಸ್ಥಳೀಯ ಡೈವರ್‌ಗಳ ಗುಂಪು ಈ ವಿಶಿಷ್ಟ ವಿವಾಹವನ್ನು ಆಯೋಜನೆ ಮಾಡಿತ್ತು. ಈ ವಿಶಿಷ್ಟ ಮದುವೆಯಲ್ಲಿ ದಂಪತಿಯ ಆಪ್ತರು ಮತ್ತು ಡೈವಿಂಗ್‌ ಪಟುಗಳು ಭಾಗವಹಿಸಿದ್ದರು. ನೀರಿನಾಳದಲ್ಲಿ ನಡೆದ ಈ ವಿಶಿಷ್ಟ ಮದುವೆಯ ಪೋಟೋಗಳು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:24 pm, Tue, 22 October 24