Video: ನಾಯಿಯನ್ನು ಓಡಿಸಲು ಹೋಗಿ ಆಯಾತಪ್ಪಿ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಯುವಕ

ಮೃತ ಉದಯ್ ತನ್ನ ಸ್ನೇಹತರೊಂದಿಗೆ ನಗರದ ವಿವಿ ಪ್ರೈಡ್ ಹೋಟೆಲ್ ನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಈ ವೇಳೆ ಹೋಟೆಲ್ ಒಳಗೆ ಬಂದಿದ್ದ ನಾಯಿಯನ್ನು ಓಡಿಸಲು ಹೋಗಿ ಆಯಾತಪ್ಪಿ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Follow us
ಅಕ್ಷತಾ ವರ್ಕಾಡಿ
|

Updated on: Oct 22, 2024 | 4:29 PM

ಹೈದರಾಬಾದ್‌: ನಾಯಿಯನ್ನು ಓಡಿಸಲು ಹೋಗಿ ಯುವಕನೊಬ್ಬ ಆಯಾತಪ್ಪಿ ಹೋಟೆಲ್​ನ ಮೂರನೇ ಮಹಡಿಯ ಕಿಟಕಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಉದಯ್ ಕುಮಾರ್ (22) ಮೃತ ದುರ್ದೈವಿ. ಉದಯ್ ತನ್ನ ಸ್ನೇಹತರೊಂದಿಗೆ ನಗರದ ವಿವಿ ಪ್ರೈಡ್ ಹೋಟೆಲ್ ನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಈ ವೇಳೆ ಹೋಟೆಲ್ ಒಳಗೆ ಬಂದಿದ್ದ ನಾಯಿಯನ್ನು ಓಡಿಸಲು ಹೋಗಿ ಆಯಾತಪ್ಪಿ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೋಟೆಲ್‌ನಲ್ಲಿ ನಡೆದ ಘಟನೆಯನ್ನು ಗಮನಿಸಿದ ಸ್ಥಳೀಯ ಪೊಲೀಸರು ಪ್ರಕರಣವನ್ನು ಪರಿಶೀಲಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 194 (ಅನುಮಾನಾಸ್ಪದ ಸಾವು) ಪ್ರಕಾರ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿಗರೇ… ಈ ದೀಪಾವಳಿಗೆ ಮುಗ್ಧ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ಬಣ್ಣದ ಹಣತೆಗಳನ್ನು ಖರೀದಿಸಿ

@sudhakarudumula ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಇಂದು(ಅ.22) ಬೆಳಗ್ಗೆ 10.35 ಕ್ಕೆ ಹಂಚಿಕೊಂಡಿರುವ ವಿಡಿಯೋ ಕೆಲವೇ ಗಂಟೆಗಳಲ್ಲಿ 37 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ