Viral: ಚಲಿಸುತ್ತಿರುವ ಆಟೋದಲ್ಲಿ ಪ್ರೇಮಿಗಳ ರೊಮ್ಯಾನ್ಸ್, ಕಾಲ ಕೆಟ್ಟೋಯ್ತು ಗುರು

ಸಾರ್ವಜನಿಕ ಸ್ಥಳದಲ್ಲಿಯೇ ಈ ಕೆಲ ಪ್ರೇಮಿಗಳು ರೊಮ್ಯಾನ್ಸ್‌ ಮಾಡಿ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆಗಳು ಈ ಹಿಂದೆಯೂ ಅನೇಕ ಬಾರಿ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪ್ರೇಮಿಗಳಿಬ್ಬರು ತಾವು ಎಲ್ಲಿದ್ದೇವೆ ಎಂಬುದನ್ನೂ ಮರೆತು ತಾವು ಪ್ರಯಾಣಿಸುತ್ತಿದ್ದ ಆಟೋದಲ್ಲಿಯೇ ಪರಸ್ಪರ ಚುಂಬಿಸುತ್ತಾ ರೊಮ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕಾಲ ತುಂಬಾನೇ ಕೆಟ್ಟೋಗಿದೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 22, 2024 | 4:57 PM

ಕೆಲ ಪ್ರೇಮಿಗಳು ತೋರುವ ಹುಚ್ಚಾಟಗಳು ಅಷ್ಟಿಷ್ಟಲ್ಲ. ಮೆಟ್ರೋ, ರೈಲು, ಬಸ್ಸು ಇತ್ಯಾದಿ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್‌, ರೊಮ್ಯಾನ್ಸ್‌, ಸರಸವಾಡುತ್ತಾ, ಇತರರಿಗೂ ಮುಜುಗರ ಉಂಟು ಮಾಡಿದಂತಹ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪ್ರೇಮಿಗಳಿಬ್ಬರು ತಾವು ಎಲ್ಲಿದ್ದೇವೆ ಎಂಬುದನ್ನೂ ಮರೆತು ತಾವು ಪ್ರಯಾಣಿಸುತ್ತಿದ್ದ ಆಟೋದಲ್ಲಿಯೇ ಪರಸ್ಪರ ಚುಂಬಿಸುತ್ತಾ ರೊಮ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕಾಲ ತುಂಬಾನೇ ಕೆಟ್ಟೋಗಿದೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಈ ಹಿಂದೆ ಬಸ್‌, ಟ್ರೈನ್‌, ಮೆಟ್ರೋದಲ್ಲಿ ಹುಚ್ಚು ಪ್ರೇಮಿಗಳು ರೊಮ್ಯಾನ್ಸ್‌ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಘಟನೆಗಳು ನಡೆದಿದ್ದವು. ಇದೀಗ ಇಲ್ಲೊಂದು ಪ್ರೇಮ ಪಕ್ಷಿ ನಡುರಸ್ತೆಯಲ್ಲಿಯೇ ಆಟೋದಲ್ಲಿ ಕುಳಿತು ತುಟಿಗೆ ಚುಂಬಿಸುತ್ತಾ ಅಸಹ್ಯಕರವಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋವನ್ನು this_is_aj__ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಆಟೋದಲ್ಲಿ ಕುಳಿತ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಾ ಕುಳಿತಿರುವ ದೃಶ್ಯವನ್ನು ಕಾಣಬಹುದು. ಟ್ರಾಫಿಕ್‌ ಸಿಗ್ನಲ್‌ ಬಳಿ ಆಟೋ ನಿಂತಿದ್ದ ವೇಳೆ ಆಟೋದೊಳಗಿದ್ದ ಪ್ರೇಮಿಗಳು ರೊಮ್ಯಾನ್ಸ್‌ ಮಾಡುವಂತಹ ದೃಶ್ಯವನ್ನು ಯಾರೋ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಒಂದು ರೂಪಾಯಿ ಖರ್ಚಿಲ್ಲದೇ 3 ದಿನ ಐಷಾರಾಮಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ ಮಹಿಳೆ; ಹೇಗೆ ಗೊತ್ತಾ?

ಅಕ್ಟೋಬರ್‌ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನೆಲ್ಲಾ ಏಕೆ ರೆಕಾರ್ಡ್‌ ಮಾಡಬೇಕಿತ್ತು?ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಇದೆಲ್ಲಾ ಬೇಕಿತ್ತಾ ಇವರುಗಳಿಗೆʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:56 pm, Tue, 22 October 24