AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಒಂದು ರೂಪಾಯಿ ಖರ್ಚಿಲ್ಲದೇ 3 ದಿನ ಐಷಾರಾಮಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ ಮಹಿಳೆ; ಹೇಗೆ ಗೊತ್ತಾ?

ಪ್ರವಾಸ ಹೋದಾಗ ಹೊಟೇಲ್‌ ರೆಸಾರ್ಟ್‌ ಅಂತಾ ಖರ್ಚು ದುಪ್ಪಟ್ಟಾಗುತ್ತದೆ. ಆದ್ರೆ ಇಲ್ಲೊಬ್ರು ಮಹಿಳೆ ಬಿಡುಗಾಸನ್ನೂ ಖರ್ಚು ಮಾಡದೆ ಐಷಾರಾಮಿ ಹೋಟೆಲ್‌ ಒಂದರಲ್ಲಿ 3 ದಿನಗಳ ಕಾಲ ವಾಸ್ತವ್ಯವನ್ನು ಹೂಡಿದ್ದಾರೆ. 3 ದಿನಕ್ಕೆ 3 ಲಕ್ಷ ರೂ. ಬಿಲ್‌ ಆಗಿದ್ರೂ ನಾನು ಫ್ರೀಯಾಗಿ ರೆಸಾರ್ಟ್‌ನ ಎಲ್ಲಾ ಸೌಲಭ್ಯಗಳನ್ನು ಆನಂದಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೆಲ್ಲಾ ಹೇಗೆ ಸಾಧ್ಯ ಅನ್ನೋ ಟ್ರಿಕ್ಸ್‌ ಅನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Viral: ಒಂದು ರೂಪಾಯಿ ಖರ್ಚಿಲ್ಲದೇ 3 ದಿನ ಐಷಾರಾಮಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ ಮಹಿಳೆ; ಹೇಗೆ ಗೊತ್ತಾ?
ಪ್ರೀತಿ ಜೈನ್‌
ಮಾಲಾಶ್ರೀ ಅಂಚನ್​
| Edited By: |

Updated on: Oct 22, 2024 | 2:21 PM

Share

ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ದುಡ್ಡು ನೀರಿನಂತೆ ಖರ್ಚಾಗುವುದು ಸಾಮಾನ್ಯ. ಇದೇ ಕಾರಣಕ್ಕೆ ಹೆಚ್ಚಿನವರು ಟ್ರಪ್‌ ಹೋದಂತಹ ಸಂದರ್ಭದಲ್ಲಿ ದುಬಾರಿ ರೆಸಾರ್ಟ್‌ ಅಥವಾ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸುತ್ತಾರೆ. ಆದ್ರೆ ಇಲ್ಲೊಬ್ರು ಮಹಿಳೆ ಮಾತ್ರ ಬಿಡುಗಾಸನ್ನೂ ಖರ್ಚು ಮಾಡದೆ ಐಷಾರಾಮಿ ಹೊಟೇಲ್‌ ಒಂದರಲ್ಲಿ ಮೂರು ದಿನಗಳ ಕಾಲ ವಾಸ್ತವ್ಯವನ್ನು ಹೂಡಿದ್ದಾರೆ. 3 ದಿನಕ್ಕೆ 3 ಲಕ್ಷ ರೂ. ಬಿಲ್‌ ಆಗಿದ್ರೂ ನಾನು ಫ್ರೀಯಾಗಿ ರೆಸಾರ್ಟ್‌ನ ಎಲ್ಲಾ ಸೌಲಭ್ಯಗಳನ್ನು ಆನಂದಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೆಲ್ಲಾ ಹೇಗೆ ಸಾಧ್ಯ ಅನ್ನೋ ಟ್ರಿಕ್ಸ್‌ ಅನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪುಣೆಯ ಚಾರ್ಟರ್ಡ್‌ ಅಕೌಂಟೆಂಟ್‌ ಪ್ರೀತಿ ಜೈನ್‌ ಅವರು ಉತ್ತರಾಖಂಡದ ವೆಸ್ಟಿನ್‌ ಹಿಮಾಲಯಸ್‌ ಮ್ಯಾರಿಯಾಟ್‌ ರೆಸಾರ್ಟ್‌ನಲ್ಲಿ ಬಿಡುಗಾಸನ್ನೂ ಖರ್ಚು ಮಾಡದೆ ಮೂರು ದಿನಗಳ ಕಾಲ ವಾಸ್ತವ್ಯವನ್ನು ಹೂಡಿದ್ದಾರೆ. ಈ ದುಬಾರಿ ರೆಸಾರ್ಟ್‌ನಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಸುಮಾರು 90 ಸಾವಿರ ರೂಪಾಯಿಗಳಷ್ಟು ಖರ್ಚಾಗುತ್ತದೆ. ಇವರಿಗೆ ಸರಿ ಸುಮಾರು 3 ಲಕ್ಷ ರೂ. ಗಳಷ್ಟು ಬಿಲ್‌ ಆಗಿದ್ದು, ಆದ್ರೆ ಒಂದು ರೂಪಾಯಿ ಖರ್ಚು ಮಾಡದೆ 3 ದಿನಗಳ ಕಾಲ ಈ ದುಬಾರಿ ರೆಸಾರ್ಟ್‌ನಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರೀತಿ (mepritijain) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿಗರೇ… ಈ ದೀಪಾವಳಿಗೆ ಮುಗ್ಧ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ಬಣ್ಣದ ಹಣತೆಗಳನ್ನು ಖರೀದಿಸಿ

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಇದು ಹೇಗೆ ಸಾಧ್ಯ ?

ಪ್ರೀತಿ ಉತ್ತರಾಖಂಡಕ್ಕೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಕ್ರೆಡಿಟ್‌ ಕಾರ್ಡ್‌ ಪಾಯಿಂಟ್ ಬಳಸಿ ಇಲ್ಲಿನ ವೆಸ್ಟಿನ್‌ ಹಿಮಾಲಯಸ್‌ ಮ್ಯಾರಿಯಾಟ್‌ ಐಷಾರಾಮಿ ರೆಸಾರ್ಟ್‌ನಲ್ಲಿ ಮೂರು ದಿನಗಳ ಕಾಲ ಫ್ರೀಯಾಗಿ ವಾಸ್ತವ್ಯವನ್ನು ಹೂಡಿದ್ದಾರೆ. ಈ ದುಬಾರಿ ರೆಸಾರ್ಟ್‌ನಲ್ಲಿ ತಂಗಬೇಕು ಅಂದ್ರೆ ಒಂದು ರಾತ್ರಿಗೆ 1 ಲಕ್ಷ ರೂ. ಪಾವತಿ ಮಾಡ್ಬೇಕು. ಹೀಗೆ ಮೂರು ದಿನಕ್ಕೆ ಪ್ರೀತಿ 3 ಲಕ್ಷ ರೂ. ಪಾವತಿಸಬೇಕಿತ್ತು. ಆದ್ರೆ ಇವರು ತಮ್ಮ‌ ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ಬಳಸಿ ಫ್ರೀಯಾಗಿ ಇಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಹೌದು ಇವರು ತಮ್ಮ ಅಮೇರಿಕನ್‌ ಎಕ್ಸ್‌ಪ್ರೆಸ್‌ ಪ್ಲಾಟಿನಂ ಕಾರ್ಡ್‌ನಲ್ಲಿ 4 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ 58,000 ಮೆಂಬರ್‌ಶಿಪ್‌ ಪಾಯಿಂಟ್‌ ಅನ್ನು ಪಡೆದುಕೊಳ್ಳುತ್ತಾರೆ. ಈ ರಿವಾರ್ಡ್‌ ಪಾಯಿಂಟ್‌ಗಳನ್ನು ಮ್ಯಾರಿಯೊಟ್‌ ಬೊನ್ವಾಯ್‌ ಪಾಯಿಂಟ್‌ಗಳಾಗಿ ಮಾರ್ಪಡಿಸಿ ಒಂದು ರೂಪಾಯಿ ಖರ್ಚಿಲ್ಲದೆ ಮೆಂಬರ್‌ಶಿಪ್‌ ರಿವಾರ್ಡ್‌ ಪಾಯಿಂಟ್‌ಗಳ ಆಧಾರದ ಮೇಲೆ ಬಿಡಿಗಾಸನ್ನೂ ಖರ್ಚು ಮಾಡದೇ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ