ಬೆಂಗಳೂರು: ಇನ್ನುಂದೆ ಜನದಟ್ಟನೆ, ವಾಹನಗಳ ನಡುವೆ ಕಷ್ಟಪಡಬೇಕಾಗಿಲ್ಲ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ ವಿವಿ ಪುರಂ ಫುಡ್ ಸ್ಟ್ರೀಟ್. ನಿನ್ನೆಯಷ್ಟೇ ಶಿಲಾನ್ಯಾಸ ಮುಗಿದ ಬೆನ್ನಲೇ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಆಹಾರ ಮತ್ತು ಸಂಸ್ಕೃತಿಯ ವಿಷಯದಲ್ಲಿ ಬೆಂಗಳೂರಿನ ಸುಸಜ್ಜಿತ ರಸ್ತೆ ಸೌಕಾರ್ಯಕ್ಕೆ ಮಾದರಿಯಾಗಲು ಯೋಜಿಸಲಾದ ಫುಡ್ ಸ್ಟ್ರೀಟ್‌ಗೆ ಹೆಸರನ್ನು ಸೂಚಿಸುವಂತೆ ಸಾರ್ವಜನಿಕರಿಗೆ ಸಂಪೂರ್ಣ ಅವಕಾಶವನ್ನು ನೀಡಿದ್ದೇನೆ ಎಂದು ಹೇಳಿದರು.
ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಭಾರೀ ಜನದಟ್ಟನೆ ಹಾಗೂ ಕಾಲ್ತುಳಿತದ ಸಮಸ್ಯೆ, ಕಿಕ್ಕಿರಿದ ರಸ್ತೆ, ವಿಶೇಷವಾಗಿ ಸಂಜೆ 6 ಗಂಟೆಯ ನಂತರ ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದ್ದ ಈ ತಿಂಡಿ ಬೀದಿಯನ್ನು ಸುಸಜ್ಜಿತವಾಗಿ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆ ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರಿನ ತಿಂಡಿ ಬೀದಿ ಇನ್ನುಂದೆ ಹೊಸ ಸೌಕರ್ಯದೊಂದಿಗೆ ವಿನೂತನ ರೂಪ ಪಡೆಯಲಿದೆ
ಫೆಬ್ರವರಿ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮತ್ತು ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎರಡು ವರ್ಷಗಳ ಹಿಂದೆ, ನಾನು ಈ ವಾರ್ಡ್‌ನ ನನ್ನ ಬೆಂಬಲಿಗರೊಂದಿಗೆ ಸಭೆ ನಡೆಸಿ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಸಂಬಂಧಿಸಿದ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿರ್ಧರಿಸಿದೆ. ಈ ವಿಚಾರವನ್ನು ಬಿಬಿಎಂಪಿ ಗಮನಕ್ಕೆ ತಂದಿದ್ದೇವೆ. ಸರಕಾರ ಅನುದಾನವನ್ನೂ ನೀಡಿದ್ದು, ಶಾಸಕರ ನಿಧಿಯಡಿ 6 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನೀವು ತಿಂಡಿ ಪ್ರಿಯರಾಗಿದ್ದರೆ ಇಲ್ಲಿದೆ ಬೆಂಗಳೂರಿನ ಟಾಪ್ ಸ್ಟ್ರೀಟ್ ಫುಡ್ ಗಳ ಕಂಪ್ಲೀಟ್ ವಿವರ
ಬಿಬಿಎಂಪಿ ಹಣಕಾಸು ಆಯುಕ್ತ ಜಯರಾಮ ರಾಯಪುರ ಮಾತನಾಡಿ, ಈಗಾಗಲೇ ತಿಂಡಿ ಬೀಡಿಯಲ್ಲಿ ಆಹಾರ ಮಾರಾಟಗಾರರು ಬೀದಿಯನ್ನು ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಪ್ರಸ್ತುತ ರಸ್ತೆಯಲ್ಲಿ ಅಧಿಕ ಜನಸಂದಣಿಯನ್ನು ಸರಿಹೊಂದಿಸುವುದೇ ದೊಡ್ಡ ಸವಾಲಾಗಿದೆ, ಆದ್ದರಿಂದ, ನಗರದಲ್ಲಿ ಇತ್ತೀಚೆಗೆ ನವೀಕರಿಸಿದ ಕಮರ್ಷಿಯಲ್ ಸ್ಟ್ರೀಟ್‌ನಂತೆ ರಸ್ತೆಯನ್ನು ಮರುರೂಪಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಯೋಜನೆ ಪೂರ್ಣಗೊಂಡರೆ ನಗರದ ಇತರ ಎಲ್ಲ ಆಹಾರ ಬೀದಿಗಳಿಗೂ ಇದು ಮಾದರಿಯಾಗಲಿದೆ ಎಂದು ಹೇಳಿದರು.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: