ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು ಸೇವೆ ಪುನಾರಂಭ-ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲು ಓಡಾಟದ ಪುನರಾರಂಭದ ಅಗತ್ಯತೆಯನ್ನು ಸಚಿವ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಪ್ರಲ್ಹಾದ್​ ಜೋಶಿಯವರ ಮಾತುಕತೆಯ ಫಲವಾಗಿ ನೈರುತ್ಯ ರೈಲ್ವೆ ಆಡಳಿತ ಮಂಡಳಿ, ಈ ರೈಲು ಸೇವೆಯನ್ನು ನವೆಂಬರ್​ 30 ರಿಂದ 2024 ಮಾ.01 ರವರೆಗೆ ಮುಂದುವರೆಸಿ ಇಂದೇ ಆದೇಶ ಹೊರಡಿಸಿದೆ.

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು ಸೇವೆ ಪುನಾರಂಭ-ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

Updated on: Nov 26, 2023 | 8:44 PM

ಬೆಂಗಳೂರು, ನ.26: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ(Pralhad Joshi)ಯವರ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್(Bangalore-Hubli Super Fast) ವಿಶೇಷ ರೈಲು ಸೇವೆಯನ್ನು ಇದೇ ನ. 30 ರಿಂದ ಮತ್ತೆ ಪುನಾರಂಭ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯವರು ತಿಳಿಸಿದ್ದಾರೆ. ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ರೈಲು (ರೈಲು ಸಂಖ್ಯೆ 07339 / 07340) ಸಂಚಾರ ಸೇವೆಯನ್ನು ಇದೇ 30 ರಿಂದ ಮತ್ತೆ ಪುನರಾರಂಭಗೊಳ್ಳಲಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಕಡಿಮೆ ಪ್ರಯಾಣಿಕರ ಕೊರತೆ ಕಾರಣ ಓಡಾಟ ರದ್ದಾಗಿತ್ತು

ಕಡಿಮೆ ಪ್ರಯಾಣಿಕರ ಕೊರತೆ ಕಾರಣ ಓಡಾಟ ರದ್ದುಗೊಳಿಸಲಾಗಿದೆಯೆಂದು ನೈರುತ್ಯ ರೈಲ್ವೆ ಆಡಳಿತ ಮಂಡಳಿ ತಿಳಿಸಿತ್ತು. ನಂತರ ಈ ಭಾಗದ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಬಗ್ಗೆ ಹಾಗೂ ಜನರ ಆಗ್ರಹದ ಕಾರಣದಿಂದ ಸಚಿವ ಪ್ರಲ್ಹಾದ್​ ಜೋಶಿಯವರು, ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾ ಪ್ರಭಂದಕ ಸಂಜೀವ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದರು.


ಇದನ್ನೂ ಓದಿ:ನಾಳೆ ಜನ್ಮದಿನ: ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಪ್ರಲ್ಹಾದ್ ಜೋಶಿ ವಿಶೇಷ ಮನವಿ

ಈ ವೇಳೆ ಈ ರೈಲು ಓಡಾಟದ ಪುನರಾರಂಭದ ಅಗತ್ಯತೆಯನ್ನು ಸಚಿವ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಪ್ರಲ್ಹಾದ್​ ಜೋಶಿಯವರ ಮಾತುಕತೆಯ ಫಲವಾಗಿ ನೈರುತ್ಯ ರೈಲ್ವೆ ಆಡಳಿತ ಮಂಡಳಿ, ಈ ರೈಲು ಸೇವೆಯನ್ನು ನವೆಂಬರ್​ 30 ರಿಂದ 2024 ಮಾ.01 ರವರೆಗೆ ಮುಂದುವರೆಸಿ ಇಂದೇ ಆದೇಶ ಹೊರಡಿಸಿದೆ. ತಮ್ಮ ಹಾಗೂ ಜನತೆಯ ಆಗ್ರಹಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾಪ್ರಭಂದಕರಿಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Sun, 26 November 23